For Quick Alerts
  ALLOW NOTIFICATIONS  
  For Daily Alerts

  'ಪರಮ ಸುಂದರಿ' ಹಾಡಿನಿಂದ ಕೃತಿ ಅಭಿಮಾನಿಗೆ ಸಂಕಷ್ಟ: ಕ್ಷಮೆ ಕೇಳಿದ ನಟಿ!

  |

  ಪರಂ.. ಪರಂ.. ಪರಮ ಸುಂದರಿ ಯಾರಿಗೆ ಗೊತ್ತಿಲ್ಲ ಹೇಳಿ. ಇತ್ತೀಚೆಗೆ ಬಂದ ಈ ಹಾಡು ಬಲು ಪ್ರಸಿದ್ಧ. ಈ ಪರಮ ಸುಂದರಿ ಈಗ ಬಹುತೇಕ ಎಲ್ಲರಿಗೂ ಚಿರಪರಿಚಿತ. ಈ ಹಾಡು ಗುನುಗುತ್ತಾ ಅದೆಷ್ಟೋ ಮಂದಿ ಹೆಜ್ಜೆ ಹಾಕಿದ್ದೇ.. ಹಾಕಿದ್ದು. ಆದರೂ ಈ ಹಾಡಿಗೆ ಇರುವ ಕ್ರೇಸ್‌ ಕೊಂಚ ಕೂಡ ಕಡಿಮೆ ಆಗಿಲ್ಲ.

  ಈಗ ಈ ಹಾಡಿನ ಬಗ್ಗೆ ಮಾತನಾಡಲು ಕಾರಣ ನಟಿ ಕೃತಿ ಸನೊನ್ ಅಭಿಮಾನಿ. ಎಲ್ಲರಿಗೂ ಇಷ್ಟ ಆಗಿರುವ ಈ ಹಾಡು ಕೃತಿ ಸನೊನ್ ಅಭಿಮಾನಿಗೆ ಬಲು ಕಷ್ಟವಾಗಿದೆಯಂತೆ. ಅದು ಅಂತಿಂತಾ ಕಷ್ಟ ಅಲ್ಲ ಜೀವನದಲ್ಲಿ ಎಂದೂ ಈ ರೀತಿ ಆಗಿಯೇ ಇರಲಿಲ್ಲವಂತೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಕೃತಿ ಅಭಿಮಾನಿ ಆಕೆಯನ್ನು ನೇರವಾಗಿ ಪ್ರಶ್ನೆ ಮಾಡಿದ್ದಾನೆ. ನೀವೂ ಹೀಗೆ ಯಾಕೆ ಮಾಡಿದ್ರಿ ಎಂದಿದ್ದಾನೆ.

  ಕೃತಿ ಸನೊನ್ ಅಭಿಮಾನಿಗೆ ಎದುರಾದ ಸಂಕಷ್ಟವೇನು?

  ಕೃತಿ ಸನೊನ್ ಅಭಿಮಾನಿಗೆ ಎದುರಾದ ಸಂಕಷ್ಟವೇನು?

  ಪರಮ ಸುಂದರಿ ಬಾಲಿವುಡ್‌ನ 'ಮೀಮಿ' ಚಿತ್ರದ ಹಾಡು. ಈ ಹಾಡಿನಲ್ಲಿ ಕೃತಿ ಮಸ್ತ್ ಡಾನ್ಸ್ ಮಸ್ತ್‌ ಡಾನ್ಸ್ ಮಾಡಿದ್ದಾರೆ. ಈ ಹಾಡು ರಿಲೀಸ್ ಆಗುತ್ತಿದ್ದಂತೆಯೇ ಸಿಕ್ಕಾಪಟ್ಟೆ ವೈರಲ್ ಆಯ್ತು. ಎಲ್ಲಿ ನೋಡಿದರೂ ಕೂಡ ಜನರು ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಸಿನಿಮಾ ರಿಲೀಸ್ ಆಗಿ ಹಲವು ದಿನಗಳಾದರೂ ಕೂಡ ಈ ಹಾಡಿನ ಗ್ರೇಸ್ ಮಾತ್ರ ಕುಂದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿನ ಹವಾ ಬಾರಿ ಜೋರಾಗಿದೆ.

  ಈ ಫೇಮಸ್‌ ಹಾಡು ಕೃತಿ ಅಭಿಮಾನಿಗೆ ಸಂಕಷ್ಟ ತಂದೊಡ್ಡಿದೆ. ಅದಕ್ಕೆ ಕಾರಣ ಆಗಿರೋದು ಅಭಿಮಾನಿಯ ಹೆಸರು.

  ಅಭಿಮಾನಿಯ ಬಳಿ ಕ್ಷಮೆ ಕೇಳಿದ ಕೃತಿ!

  ಅಷ್ಟಕ್ಕೂ ಈ ಅಭಿಮಾನಿಯ ಹೆಸರು ' ಪರಮ್ ಚಯ್ಯ'. ಈತನ ಹೆಸರು ಹಾಡಿಗೆ ತಳುಕು ಹಾಕಿಕೊಂಡಿದೆ. ಈ ಹಾಡು ಬಂದ ಬಳಿಕ ಈತನನ್ನು ಎಲ್ಲರೂ ಪರಮ ಸುಂದರಿ ಎಂದು ರೇಗಿಸುತ್ತಿದ್ದಾರಂತೆ. ಈ ಬಗ್ಗೆ ಈತ ಕೃತಿಯನ್ನು ಟ್ವಿಟ್ಟರ್‌ನಲ್ಲಿ ಪ್ರಶ್ನೆ ಮಾಡಿದ್ದಾನೆ.

  "ನಾನ್ ನನ್ನ ಹೆಸರು ಪರಮಚಯ್ಯ ಅಂತ ಇದ್ದರೂ ಕೂಡ, ಬಾಲ್ಯದಿಂದಲೂ ಯಾರು ನನಗೆ ಅಷ್ಟಾಗಿ ಗೋಳು ಕೊಟ್ಟಿಲ್ಲ. ಆದರೆ ಪರಮ ಸುಂದರಿ ಹಾಡು ಬಂದ ಮೇಲೆ ನನಗೆ ಹೆಚ್ಚಿನದಾಗಿ ಸ್ನೇಹಿತರೆಲ್ಲಾ ಗೋಳು ಕೊಡುತ್ತಿದ್ದಾರೆ. ಇದರಿಂದ ನನಗೆ ಬೇಸರವಾಗಿದೆ ನೀವು ಈ ಹಾಡನ್ನು ಯಾಕೆ ಮಾಡಿದ್ರಿ". ಎಂದು ಬರೆದು ಕೊಳ್ಳುವುದರ ಮೂಲಕ ಅಭಿಮಾನಿ ಕೃತಿಯನ್ನು ಪ್ರಶ್ನಿಸಿದ್ದಾನೆ.

  ಕೃತಿ ಪ್ರತಿಕ್ರಿಯೆಗೆ ಖುಷಿಯಾದ ಅಭಿಮಾನಿ!

  ಇದಕ್ಕೆ ಕೃತಿ ಕೂಡ ಟ್ವಿಟ್ಟರ್‌ನಲ್ಲಿ ಉತ್ತರಿಸಿದ್ದಾರೆ."ಊಪ್ಸ್... ಕ್ಷಮಿಸಿ" ಎಂದು ಬರೆದುಕೊಂಡಿದ್ದಾರೆ. ಕೃತಿಯ ಪ್ರತಿಕ್ರಿಯೆಯಿಂದ ಅಭಿಮಾನಿ ಸಂತಸಗೊಂಡಿದ್ದು, ಈಗ ಎಲ್ಲಾ ನೋವು ವಜಾ ಆಯಿತು ಎಂದು ಬರೆದುಕೊಂಡಿದ್ದಾನೆ.

  ಸಿನಿಮಾ ತಾರೆಯರು ಮನಸೋತಿದ್ದ ಪರಮ ಸುಂದರಿ!

  ಸಿನಿಮಾ ತಾರೆಯರು ಮನಸೋತಿದ್ದ ಪರಮ ಸುಂದರಿ!

  ಸಾಮಾನ್ಯ ಹಳ್ಳಿಗರಿಂದ ಹಿಡಿದು ದೊಡ್ಡ ಬಾಲಿವುಡ್ ಸ್ಟಾರ್‌ಗಳು ಕೂಡ ಈ ಪರಮ ಸುಂದರಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಹಿರಲ್ ವೈರಾಡ್ಯಾ ಸಂಗೀತ ನೀಡಿದ್ದು, ಅಮಿತಾಬ್ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದಾರೆ. ಶ್ರೇಯಾಘೋಷಾಲ್ ಈ ಹಾಡಿಗೆ ಧ್ವನಿ ಆಗಿದ್ದಾರೆ. 2017ರಲ್ಲಿ ತೆರೆ ಕಂಡ ಮೀಮಿ ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿದೆ. ಓಟಿಟಿಯಲ್ಲಿ ರಿಲೀಸ್‌ ಆದ ಮೀಮಿ ಸಕ್ಸಸ್ ಕಂಡಿದೆ. ಸತ್ಯ ಆದಿಪುರುಷ್ ಚಿತ್ರದ ಮೂಲಕ ಸೀತೆಯಾಗಿ ಬರಲಿದ್ದಾರೆ ಕೃತಿ ಸನೊನ್.

  English summary
  Fan accuses Kriti Sanon of spoiling his life and She Apologized, know what is the matter

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X