ವಿಡಿಯೋ: ಫೊಟೊಗಾಗಿ ಬಂದು ನಟಿಗೆ ಮುತ್ತು ಕೊಟ್ಟ ಅಭಿಮಾನಿ
ಅಭಿಮಾನಿಗಳಿಲ್ಲದೆ ಸ್ಟಾರ್‌ಗಳಿಲ್ಲ. ಹಾಗಾಗಿಯೇ ಅಭಿಮಾನಿಗಳಿಗೆ ಸಾಕಷ್ಟು ಪ್ರೀತಿ, ಗೌರವಾಧನಗಳನ್ನು ಸ್ಟಾರ್‌ಗಳು ನೀಡುತ್ತಾರೆ.
ಆದರೆ ಅದೇ ಅಭಿಮಾನಿಗಳು ಸ್ಟಾರ್ ಗಳಿಗೆ ಕಿರಿಕಿರಿ ಉಂಟು ಮಾಡುವುದನ್ನೂ ಅಲ್ಲಗಳೆಯುವಂತಿಲ್ಲ. ಸ್ಟಾರ್‌ಗಳನ್ನು ಫಾಲೋ ಮಾಡುವುದು, ಮನೆಗೆ ನುಗ್ಗುವುದು, ಚಿತ್ರಕ್ಕಾಗಿ ಪೀಡಿಸುವುದು ಹೀಗೆ ಹಲವು ರೀತಿಯ ಕಿರಿ-ಕಿರಿಯನ್ನು ಸ್ಟಾರ್‌ಗಳು ಅಭಿಮಾನಿಗಳಿಂದ ಅನುಭವಿಸುತ್ತಿರುತ್ತಾರೆ.
ಇದಕ್ಕೆ ತಾಜಾ ಉದಾಹರಣೆ ಬಾಲಿವುಡ್‌ನ ಉದಯೋನ್ಮುಖ ನಟಿ ಸಾರಾ ಅಲಿ ಖಾನ್. ಪಾಪ ಚಿತ್ರತೆಗೆಸಿಕೊಳ್ಳಲೆಂದು ಬಂದ ಅಭಿಮಾನಿಯೊಬ್ಬ ನಟಿಗೆ ಮುತ್ತು ಕೊಟ್ಟು ಓಡಿಹೋಗಿದ್ದಾನೆ.

ಸಾರಾ ಅಲಿ ಖಾನ್ ಮನೆಯ ಬಳಿ ಅಭಿಮಾನಿಗಳು
ಸಾರಾ ಅಲಿ ಖಾನ್ ಮನೆಯ ಮುಂದೆ ಕೆಲವು ಅಭಿಮಾನಿಗಳು ಇದ್ದರು. ಇದನ್ನು ಗಮನಿಸಿದ ಸಾರಾ ಅಲಿಖಾನ್ ಕಾರು ಏರುವ ಮುನ್ನಾ ಕೆಲವರೊಂದಿಗೆ ಅಭಿಮಾನಿಗಳ ಬೇಡಿಕೆಯಂತೆ ಅವರೊಂದಿಗೆ ಚಿತ್ರ ತೆಗೆಸಿಕೊಂಡರು.
ಸಾರಾ ಅಲಿ ಖಾನ್ ಗೆ ಮುತ್ತು ಕೊಟ್ಟ ಅಭಿಮಾನಿ
ಅಲ್ಲಿಯೇ ನಿಂತಿದ್ದ ಒಬ್ಬ ಅಭಿಮಾನಿ ಸಾರಾ ಅಲಿ ಖಾನ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ. ನಂತರ ಸಾರಾ ಅಲಿ ಖಾನ್ ಅವರನ್ನು ಕೈಕುಲುಕುವಂತೆ ಕೇಳಿದ. ಅಂತೆಯೇ ಸಾರಾ ಅಲಿ ಖಾನ್ ಆತನ ಕೈ ಕುಲುಕುತ್ತಿದ್ದಂತೆ. ಕೈ ಗೆ ಮುತ್ತು ಕೊಟ್ಟುಬಿಟ್ಟ.

ಅಂಗರಕ್ಷಕ ಎಳೆದು ಹಿಂದೆ ಹಾಕಿದರು
ಮುತ್ತು ಕೊಡುತ್ತಿದ್ದಂತೆ, ಸಾರಾ ಅಲಿ ಖಾನ್ ಅಂಗರಕ್ಷಕರು ಆತನನ್ನು ಎಳೆದುಕೊಂಡರು. ಒಬ್ಬ ಅಂಗರಕ್ಷಕನಂತೂ ಆತನನ್ನು ಹೊಡೆಯಲು ಕೈಎತ್ತಿದ್ದು ವಿಡಿಯೋದಲ್ಲಿ ಕಾಣಿಸುತ್ತದೆ. ಆತನೂ ಅಲ್ಲಿಂದ ಕೂಡಲೇ ಪರಾರಿ ಆದನಂತೆ.

ಗಲಿಬಿಲಿಗೊಂಡ ಸಾರಾ ನಂತರ ಸಾವರಿಸಿಕೊಂಡರು
ಘಟನೆ ನಡೆದಾಗ ಸಾರಾ ಅಲಿ ಖಾನ್ ವಿಚಲಿತರಾದಂತೆ ಕಂಡು ಬಂದರು. ಆದರೆ ಕೂಡಲೇ ಸಾವರಿಸಿಕೊಂಡು ಇನ್ನುಳಿದ ಅಭಿಮಾನಿಗಳೊಂದಿಗೆ ಫೋಟೊಕ್ಕೆ ಫೋಸ್ ನೀಡಿ ಎಲ್ಲರಿಗೂ ವಂದಿಸಿ ಕಾರು ಹತ್ತಿದ್ದಾರೆ.

ಸೈಫ್ ಅಲಿ ಖಾನ್ ಪುತ್ರಿ ಸಾರಾ
ಸಾರಾ ಅಲಿ ಖಾನ್, ಖ್ಯಾತ ನಟ ಸೈಫ್ ಅಲಿ ಖಾನ್ ಮಗಳು. ಕೇದಾರ್‌ನಾಥ್, ಸಿಂಭಾ, ಲವ್ ಆಜ್ ಕಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೂಲಿ ನಂ 1, ಅತ್ರಂಗಿ ರೇ ಸಿನಿಮಾ ಬಿಡುಗಡೆ ಆಗಬೇಕಿವೆ.


Click it and Unblock the Notifications