ವಿಡಿಯೋ: ಫೋಟೋ ಅಂತ ಕೇಳಿ ನಟಿಗೆ ಕಿಸ್ ಕೊಡಲು ಪ್ರಯತ್ನಿಸಿದ ಅಭಿಮಾನಿ
ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವ ವಿಚಾರದಲ್ಲಿ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಇತರೆ ನಟ, ನಟಿಯರಿಗೆ ಹೋಲಿಸಿಕೊಂಡರೆ ಅಭಿಮಾನಿಗಳ ವಿಚಾರದಲ್ಲಿ ಸಾರಾಗೆ ಹೆಚ್ಚಿನ ತಾಳ್ಮೆ ಇದೆ.
ಸಹಜವಾಗಿ ಹೊರಗೆ ಎಲ್ಲಾದರೂ ಕಾಣಿಸಿಕೊಂಡರೆ ಫೋಟೋಗಾಗಿ ಅಭಿಮಾನಿಗಳು ಮುಗಿಬೀಳುತ್ತಾರೆ. ಈ ವೇಳೆ ಫ್ಯಾನ್ಸ್ ಜೊತೆ ತಾಳ್ಮೆಯಿಂದ ವರ್ತಿಸುವ ಸಾರಾ, ಅವರ ಜೊತೆ ನಿಂತು ಫೋಟೋಗೆ ಪೋಸ್ ಕೊಡ್ತಾರೆ.
ನಟಿಯ ಈ ನಡೆಯನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲವರು, ನಟಿಯ ಮೈಮೇಲೆ ಬೀಳುವುದು, ಎಳೆದಾಡುವುದು, ಅಸಭ್ಯವಾಗಿ ನಡೆದುಕೊಳ್ಳುವುದನ್ನು ಮಾಡ್ತಾರೆ. ಆದರೂ ಇಂತಹ ಘಟನೆಗಳಿಂದ ಬೇಸರ ಮಾಡಿಕೊಳ್ಳದ ನಟಿ ಉಳಿದ ಅಭಿಮಾನಿಗಳ ಜೊತೆ ನಗುನಗುತ ಫೋಟೋ ತೆಗಿಸಿಕೊಳ್ಳುತ್ತಾರೆ.

ಈ ರೀತಿ ಅಭಿಮಾನಿಗಳ ಜೊತೆ ಫೋಟೋ ತೆಗಿಸಿಕೊಳ್ಳುವಂತಹ ಸಂದರ್ಭದಲ್ಲಿ, ಅಭಿಮಾನಿಯೊಬ್ಬ ನಟಿಗೆ ಮುತ್ತಿಡಲು ಪ್ರಯತ್ನಿಸಿರುವ ಘಟನೆ ನಡೆದಿದೆ. ಜಿಮ್ನಿಂದ ವರ್ಕೌಟ್ ಮುಗಿಸಿ ತೆರಳುವ ಸಮಯದಲ್ಲಿ ಕಾರ್ ಪಾರ್ಕಿಂಗ್ ಬಳಿ ಅಭಿಮಾನಿಗಳು ಫೋಟೋಗಾಗಿ ಮನವಿ ಮಾಡ್ತಾರೆ.
ಖುಷಿಯಿಂದ ನಿಂತು ಫೋಟೋಗೆ ಪೋಸ್ ಕೊಡುವಾಗ, ಅಭಿಮಾನಿಯೊಬ್ಬ ಕೈಕುಲಕಿ ಕೈಗೆ ಮುತ್ತಿಕ್ಕಲು ಪ್ರಯತ್ನಿಸುತ್ತಾನೆ. ತಕ್ಷಣ ಕೈಬಿಡಿಸಿಕೊಂಡು ಹಿಂದೆ ಸರಿಯುವ ನಟಿ, ನಗುನಗುತಾ ಥ್ಯಾಂಕ್ಸ್ ಎಂದು ಸುಮ್ಮನಾಗ್ತಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಾರಾ ಅಲಿ ಖಾನ್ ನಟಿಸುತ್ತಿರುವ ಕೂಲಿ ನಂ 1 ಸಿನಿಮಾ ಬಿಡುಗಡೆ ಸಜ್ಜಾಗುತ್ತಿದೆ. ಇದರ ಜೊತೆಗೆ ಇಮ್ತಿಯಾಜ್ ಅಲಿ ಜೊತೆ ಇನ್ನೊಂದು ಸಿನಿಮಾ ಮಾಡುತ್ತಿದ್ದು, ಅದು ಚಿತ್ರೀಕರಣ ಸಾಗುತ್ತಿದೆ.


Click it and Unblock the Notifications











