For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್ ಗಾಗಿ ಹೈದರಾಬಾದ್ ನಿಂದ ಮುಂಬೈಗೆ ಬರಿಗಾಲಿನಲ್ಲಿ ನಡೆದು ಬಂದ ಅಭಿಮಾನಿ

  |

  ರಿಯಲ್ ಹೀರೋ ಸೋನು ಸೂದ್ ಭೇಟಿಯಾಗಬೇಕು, ಅವರ ಜೊತೆ ಮಾತನಾಡಬೇಕು ಎನ್ನುವ ಆಸೆ ಯಾರಿಗೆತಾನೆ ಇಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳು ಸೋನು ಸೂದ್ ಭೇಟಿಗೆ ಕಾಯುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಕಾಯುತ್ತ ಕುಳಿತರೆ ಪ್ರಯೋಜನವಿಲ್ಲ ಎಂದು ನೆಚ್ಚಿನ ಹೀರೋನನ್ನು ನೋಡಲು ನಡೆದುಕೊಂಡೆ ಹೋಗಿದ್ದಾನೆ.

  ರಿಯಲ್ ಹೀರೋ ನೋಡಲು ಹೈದರಾಬಾದ್ ನಿಂದ ಪಾದ ಯಾತ್ರೆ ಮಾಡಿ ಬಂದ ಫ್ಯಾನ್ | Filmibeat Kannada

  ಹೈದರಾಬಾದ್ ನ ವೆಂಕಟೇಶ್ ಎನ್ನುವ ವ್ಯಕ್ತಿ ಸೋನು ಸೂದ್ ಅವರ ಅಪ್ಪಟ ಅಭಿಮಾನಿ. ನೆಚ್ಚಿನ ಹೀರೋನನ್ನು ನೋಡಲು ಹೈದರಾಬಾದ್ ನಿಂದ ಮುಂಬೈ ಬರಿಗಾಲಿನಲ್ಲೇ ನಡೆದುಕೊಂಡು ಹೋಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸೋನು ಸೂದ್ ಅವರ ಫ್ಲೆಕ್ಸ್ ಕೈಯಲ್ಲಿ ಹಿಡಿದು ಹೊರಟಿರುವ ವೆಂಕಟೇಶ್ ಕೊನೆಗೂ ಪ್ರೀತಿಯ ಹೀರೋನನ್ನು ಭೇಟಿಯಾಗಿ ಸಂತಸ ಪಟ್ಟಿದ್ದಾರೆ.

  ಅಭಿಮಾನಿ ವೆಂಕಟೇಶ್ ಪ್ರೀತಿ, ಅಭಿಮಾನಕ್ಕೆ ಸೋನು ಸೂದ್ ಫಿದಾ ಆಗಿದ್ದಾರೆ. ಆದರೆ ಇಂಥ ಸಾಹಸ ಯಾರು ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಸಹ ಮಾಡಿದ್ದಾರೆ. ಅಭಿಮಾನಿ ವೆಂಕಟೇಶ್ ತನ್ನ ಮನೆಗೆ ಭೇಟಿ ನೀಡಿರುವ ಫೋಟೋವನ್ನು ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಸೋನು ಸೂದ್ ಪಕ್ಕದಲ್ಲಿ ಫ್ಲೆಕ್ಸ್ ಹಿಡಿದು ನಿಂತಿರುವ ವೆಂಕಟೇಶ್ ಖುಷಿಗೆ ಪಾರವೇ ಇಲ್ಲ. ಪ್ರೀತಿಯ ಅಭಿಮಾನಿ ವೆಂಕಟೇಶ್ ಜೊತೆ ಫೋಟೋ ಹಂಚಿಕೊಂಡು ಸೋನು ಸೂದ್, 'ವೆಂಕಟೇಶ್, ಈ ಹುಡುಗ ನನ್ನನ್ನು ಭೇಟಿಯಾಗಲು ಹೈದರಾಬಾದ್ ನಿಂದ ಮುಂಬೈ ಬರಿಗಾಲಿನಲ್ಲಿ ನಡೆದು ಬಂದಿದ್ದಾನೆ. ಇಲ್ಲಿಗೆ ಬರಲು ವೆಂಕಟೇಶ್ ಗೆ ಸಾರಿಗೆ ವ್ಯವಸ್ಥೆ ಮಾಡಲು ಪ್ರಯತ್ನ ಮಾಡಿದ್ದೆ ಆದರೂ ನಡೆದುಕೊಂಡೆ ಬಂದಿದ್ದಾರೆ. ನಿಜಕ್ಕೂ ಸ್ಫೂರ್ತಿದಾಯಕ ಮತ್ತು ನನ್ನನ್ನು ವಿನಮ್ರಗೊಳಿಸಿದ್ದಾನೆ. ನಾನು ಈ ರೀತಿ ತೊಂದರೆ ತೆಗೆದುಕೊಳ್ಳುವವರನ್ನು ಪ್ರೋತ್ಸಾಹಿಸಲು ನಾನು ಬಯಸುವುದಿಲ್ಲ. ಲವ್ ಯೂ ಆಲ್' ಎಂದು ಬರೆದುಕೊಂಡಿದ್ದಾರೆ.

  ಸೋನು ಸೂದ್ ಗೆ ಪ್ರತಿದಿನ ಸಹಾಯ ಕೋರಿ ಸಾವಿರಾರು ಸಂದೇಶಗಳು, ಫೋನ್ ಕರೆಗಳು ಬರುತ್ತಿವೆ. ತಮ್ಮ ಕೈಲಾದಷ್ಟು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಕೊರೊನಾ 2ನೇ ಅಲೆಯ ಭೀಕರ ಪರಿಸ್ಥಿತಿಯಲ್ಲಿ ಸೋನು ಸೂದ್ ಸಾವಿರಾರು ಸೋಂಕಿತರ ಜೀವ ಉಳಿಸಿದ್ದಾರೆ. ಆಕ್ಸಿಜನ್, ಬೆಡ್, ಚಿಕಿತ್ಸೆ ಕೊಡಿಸುವ ಮೂಲಕ ಅನೇಕರ ಬದುಕಿಗೆ ಬೆಳಕಾಗಿದ್ದಾರೆ. ಅಭಿಮಾನಿಗಳು ಅವರನ್ನು ದೇವರೆಂದು ಪೂಜಿಸುತ್ತಿದ್ದಾರೆ.

  English summary
  Fan Venkatesh who walked barefoot from Hyderbad to Mumbai for meet Sonu Sood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X