For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಯಾಕೆ ಮಾಡುತ್ತಿಲ್ಲ? ಮುಂದಿನ ಸಿನಿಮಾ ಯಾವುದು? ಅಭಿಮಾನಿಗಳ ಪ್ರಶ್ನೆಗೆ ಶಾರುಖ್ ಉತ್ತರ

  |

  ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಖಾನ್ ಸಿನಿಮಾ ಮಾಡದೆ 2 ವರ್ಷದ ಮೇಲಾಗಿದೆ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ಶಾರುಖ್, ಝಿರೋ ಸಿನಿಮಾದ ನಂತರ ಬಣ್ಣ ಹಚ್ಚುವುದನ್ನೇ ನಿಲ್ಲಿ ಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಶಾರುಖ್, ಸಿನಿಮಾ ಮಾಡದೆ ಸುಮ್ಮನೆ ಕುಳಿತಿರುವುದನ್ನು ನೋಡಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ.

  ಶಾರುಖ್ ಸಿನಿಮಾ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಶಾರುಖ್ ಮುಂದಿನ ಸಿನಿಮಾ ಯಾವುದಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಅಲ್ಲದೆ ಯಾವಾಗ ಅನೌನ್ಸ್ ಮಾಡ್ತಾರೆ ಎಂದು ಕುತೂಹಲದಿಂದ ಕಾಯುತ್ತಿರುವಾಗಲೇ ಮಹಾಮಾರಿ ಕೊರೊನಾ ವಕ್ಕರಿಸಿಕೊಂಡಿದೆ. ಸದ್ಯ ಎಲ್ಲರೂ ಮನೆಯಲ್ಲಿಯೆ ಕಾಲಕಳೆಯುವಂತಾಗಿದೆ. ಈ ಸಮಯದಲ್ಲಿ ಶಾರುಖ್ ಅಭಿಮಾನಿಗಳ ಜೊತೆ ಮಾತುಕತೆಗೆ ಇಳಿದಿದ್ದಾರೆ. ಮುಂದೆ ಓದಿ..

  #AskSrk ಮೂಲಕ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆ

  #AskSrk ಮೂಲಕ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆ

  ಟ್ವಿಟ್ಟರ್ ನಲ್ಲಿ #AskSrk ಮೂಲಕ ಶಾರುಖ್ ಖಾನ್ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾರೆ. ಪ್ರಶ್ನೆ ಕೇಳಿ ಅಂತ ಹೇಳಿದ್ದೆ ತಡ ಅಭಿಮಾನಿಗಳಿಂದ ಕಿಂಗ್ ಖಾನ್ ಗೆ ಪ್ರಶ್ನೆಗಳ ಸುರಿಮಳೆಯೆ ಹರಿದು ಬರುತ್ತಿದೆ. ಅದರಲ್ಲೂ ಬಹುತೇಕರು ಶಾರುಖ್ ಮುಂದಿನ ಸಿನಿಮಾದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.

  ಮುಂದಿನ ಸಿನಿಮಾ ಯಾವಾಗ ಅನೌನ್ಸ್ ಮಾಡುತ್ತೀರಿ?

  ಮುಂದಿನ ಸಿನಿಮಾ ಯಾವಾಗ ಅನೌನ್ಸ್ ಮಾಡುತ್ತೀರಿ?

  ಅಭಿಮಾನಿಯೊಬ್ಬ ಶಾರುಖ್ ಗೆ "ಮುಂದಿನ ಸಿನಿಮಾ ಯಾವಾಗ ಅನೌನ್ಸ್ ಮಾಡುತ್ತೀರಿ. ವದಂತಿಗಳನ್ನು ಕೇಳಿ ಸಾಕಾಗಿದೆ" ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಾರುಖ್ "ನೀವು ಆಯಾಸಗೊಳ್ಳಬೇಡಿ. ನಾನು ಖಂಡಿತ ಸಿನಿಮಾ ಮಾಡುತ್ತೇನೆ. ಸಿನಿಮಾ ಮಾಡಿದರೆ ನಿಮಗೆ ಗೊತ್ತಾಗುತ್ತೆ" ಎಂದು ಹೇಳಿದ್ದಾರೆ.

  ಸ್ಕ್ರಿಪ್ಟ್ ಗಳು ಬಂದು ಬೀಳುತ್ತಿವೆಯಲ್ಲ, ಒಪ್ಪಿಕೊಳ್ಳಿ

  ಸ್ಕ್ರಿಪ್ಟ್ ಗಳು ಬಂದು ಬೀಳುತ್ತಿವೆಯಲ್ಲ, ಒಪ್ಪಿಕೊಳ್ಳಿ

  "ಮತ್ತೊಬ್ಬ ಅಭಿಮಾನಿ ನಿಮ್ಮ ಬಳಿ ಸಾಕಷ್ಟು ಸಿನಿಮಾ ಸ್ಕ್ರಿಪ್ಟ್ ಗಳು ಬಂದು ಬೀಳುತ್ತಿವೆಯಲ್ಲ ಸಹಿ ಮಾಡಿ, ಕಾಲ್ ಶೀಟ್ ಕೊಡಿ" ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಾರುಖ್ ಖಾನ್ ಸಿನಿಮಾಗೆ ಸಹಿ ಮಾಡುತ್ತೇನೆ ಆದರೆ ಶೂಟಿಂಗ್ ಮಾಡೋದು ಯಾರು? ಎಂದು ಜಾಣತನದ ಉತ್ತರ ನೀಡಿದ್ದಾರೆ.

  ಕೊರೊನಾ ಕಷ್ಟಕ್ಕೆ ನೆರವಾದ ಶಾರುಖ್

  ಕೊರೊನಾ ಕಷ್ಟಕ್ಕೆ ನೆರವಾದ ಶಾರುಖ್

  ಮಾರಣಾಂತಿಕ ಕೊರೊನಾ ವೈರಸ್ ಹಾವಳಿ ಪರಿಣಾಮ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಶಾರುಖ್ ಖಾನ್ ನೆರವಾಗಿದ್ದಾರೆ. 25 ಸಾವಿರ ಸಿನಿಮಾ ಕಾರ್ಮಿಕರಿಗೆ ನೆರವಾಗಿದ್ದಾರೆ. ಅಂದ್ಹಾಗೆ ಶಾರುಖ್ ಕೊನೆಯದಾಗಿ ಝೀರೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆ ನಂತರ ಯಾವ ಸಿನಿಮಾಗೂ ಬಣ್ಣಹಚ್ಚಿಲ್ಲ. ಸದ್ಯ ಶಾರುಖ್ ಮುಂದಿನ ಸಿನಿಮಾ ಯಾವುದಾಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.

  English summary
  Fans are Asking to Shah Rukh Khan about next films. Shah Rukh Khan reaction to Fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X