For Quick Alerts
  ALLOW NOTIFICATIONS  
  For Daily Alerts

  ನಟಿ ದೀಪಿಕಾ ಪಡುಕೋಣೆ ವಿರುದ್ಧ ಸಿಟ್ಟಿಗೆದ್ದ ಅಭಿಮಾನಿಗಳು

  |

  ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ವಿರುದ್ಧ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ರಣ್ವೀರ್ ಸಿಂಗ್ ಪತ್ನಿಯ ವಿರುದ್ಧ ಅಭಿಮಾನಿಗಳಿಗೇಕೆ ಕೋಪ ಎಂದರೆ, ದೀಪಿಕಾ ಇತ್ತೀಚಿಗಷ್ಟೆ ಮಾಜಿ ಪ್ರಿಯತಮ ರಣ್ಬೀರ್ ಕಪೂರ್ ಜೊತೆ ಮತ್ತೆ ತೆರೆ ಹಂಚಿಕೊಳ್ಳಲು ರೆಡಿಯಾಗುತ್ತಿದ್ದಾರೆ. ರಣ್ಬೀರ್ ಜೊತೆ ಸಿನಿಮಾ ಮಾಡುವುದಕ್ಕೆ ಅಭಿಮಾನಿಗಳ ಕೋಪನಾ ಅಂತ ಅಂದ್ಕೋಬೇಡಿ. ಅಭಿಮಾನಿಗಳ ಕೋಪದ ಹಿಂದಿನ ರಹಸ್ಯ ನಿರ್ದೇಶಕ ಲವ್ ರಂಜನ್.

  ನಿರ್ದೇಶಕ ಲವ್ ರಂಜನ್ ಜೊತೆ ದೀಪಿಕಾ ಸಿನಿಮಾ ಮಾಡಬಾರದು ಎನ್ನುವುದು ಅಭಿಮಾನಿಗಳ ಆಗ್ರಹ. ನಿರ್ದೇಶಕ ಲವ್ ರಂಜನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ದೀಪಿಕಾ ಮತ್ತು ರಣ್ಬೀರ್ ಕಪೂರ್ ಅಭಿನಯಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚಿಗಷ್ಟೆ ದೀಪಿಕಾ ಮತ್ತು ರಣ್ಬೀರ್ ಇಬ್ಬರು ಮಧ್ಯರಾತ್ರಿ ನಿರ್ದೇಶಕ ಲವ್ ರಂಜನ್ ಅನ್ನು ಭೇಟಿಯಾಗಿದ್ರು.

  ದೀಪಿಕಾ ಪಡುಕೋಣೆ ಧರಿಸಿದ್ದ ಸಿಲ್ವರ್ ಬಣ್ಣದ ಪ್ಯಾಂಟ್ ಬೆಲೆ ಇಷ್ಟೊಂದಾ.!

  ಇದರಲ್ಲೇನಿದೆ ವಿಶೇಷ ಅಂತೀರಾ ನಿರ್ದೇಶಕ ಲವ್ ರಂಜನ್ ವಿರುದ್ಧ ಮೀ ಟು ಆರೋಪವಿದೆ. ಈ ಹಿಂದೆ ನಟಿಯೊಬ್ಬರು ನಿರ್ದೇಶಕ ಲವ್ ರಂಜನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಹಾಗಾಗಿ ಅಂತಹ ನಿರ್ದೇಶಕರ ಜೊತೆ ದೀಪಿಕಾ ಸಿನಿಮಾ ಮಾಡಬಾರದು ಎಂದು ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಅನೇಕ ಜನರಿಗೆ ರೋಲ್ ಮಾಡೆಲ್ ಆಗಿರುವ ದೀಪಿಕಾ, ಅಂತಹ ನಿರ್ದೇಶಕರ ಜೊತೆ ಕೆಲಸ ಮಾಡಿ, ಅಂತವರನ್ನು ಪ್ರಚಾರ ಮಾಡುವುದು ಎಷ್ಟು ಸರಿ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

  ಟ್ವಿಟ್ಟರ್ ನಲ್ಲಿ #Notmydeepika ಎಂದು ಹ್ಯಾಶ್ ಟ್ಯಾಗ್ ಹಾಕಿ ಅಭಿಮಾನಿಗಳು ಅಭಿಯಾನ ಮಾಡುತ್ತಿದ್ದಾರೆ. #Notmydeepika ದೀಪಿಕಾ ವಿರುದ್ಧದ ಈ ಅಭಿಯಾನ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. ಲವ್ ರಂಜನ್ ನಿರ್ದೇಶನದ ಸಿನಿಮಾದಲ್ಲಿ ರಣ್ಬೀರ್ ಕಪೂರ್ ಅಭಿನಯಿಸಲು ಈಗಾಗಲೆ ಸಹಿ ಮಾಡಿದ್ದಾರೆ. ಆದ್ರೆ ದೀಪಿಕಾ ಗ್ರೀನ್ ಸಿಗ್ನಲ್ ನೀಡಿದ್ದಾರಾ ಎನ್ನುವುದು ಇನ್ನು ಅಧಿಕೃತವಾಗಿಲ್ಲ. ಆದ್ರೆ ಅಭಿಮಾನಿಗಳ ಅಭಿಯಾನದ ನಡುವೆಯು ದೀಪಿಕಾ ಲವ್ ರಂಜನ್ ಜೊತೆ ಸಿನಿಮಾ ಮಾಡ್ತಾರಾ ಎನ್ನುವುದನ್ನು ಕಾದು ನೋಡಬೇಕು.

  English summary
  Bollywood actress Deepika Padukone fans are protesting against Deepika Padukone for her working with Luv Ranjan film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X