ನಟಿ ಸಾರಾಗೆ'ಅತ್ತಿಗೆ' ಎಂದು ಕರೆದು ಮುಜುಗರ ಉಂಟುಮಾಡಿದ ಅಭಿಮಾನಿಗಳು

ಬಾಲಿವುಡ್ ನಲ್ಲಿ ಈಗ ನಟ ಕಾರ್ತಿಕ್ ಆರ್ಯನ್ ಮತ್ತು ನಟಿ ಸಾರಾ ಅಲಿ ಖಾನ್ ಅವರದ್ದೆ ಸದ್ದು. ಈ ಜೋಡಿ ಈಗ ಬಾಲಿವುಡ್ ನಲ್ಲಿ ಎಲ್ಲರ ಕಣ್ಣುಕುಕ್ಕುತ್ತಿದೆ. ಅಂದ್ಹಾಗೆ ಈ ರೋಮ್ಯಾಂಟಿಕ್ ಕಪಲ್ ಈಗ ಲವ್ ಆಜ್ ಕಲ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

ಲವ್ ಆಜ್ ಕಲ್ ಬಾಲಿವುಡ್ ನಲ್ಲಿ ರಿಲೀಸ್ ಗೆ ರೆಡಿಯಾಗಿರುವ ರೋಮ್ಯಾಂಟಿಕ್ ಸಿನಿಮಾ. ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ನಾಯಕನಾಗಿ ಮಿಂಚಿದ್ದಾರೆ. ಕಾರ್ತಿಕ್ ಗೆ ಸಾರಾ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಈಗಾಗಲೆ ಚಿತ್ರದ ಟ್ರೈಲರ್ ಮತ್ತು ಹಾಡುಗಳು ರಿಲೀಸ್ ಆಗಿದ್ದು ಪ್ರೇಕ್ಷಕರ ಹೃದಯ ಗೆದ್ದಿದೆ. ಸಾರಾ ಮತ್ತು ಕಾರ್ತಿಕ್ ಸದ್ಯ ಚಿತ್ರದ ಪ್ರೋಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಮಯದಲ್ಲಿ ಸಾರಾಗೆ ಮುಜುಗರವಾಗುವಂತಹ ಘಟನೆ ನಡೆದಿದೆ.

 ಸಿನಿಮಾ ಪ್ರಮೋಷನ್ ನಲ್ಲಿ ಸಾರಾ-ಕಾರ್ತಿಕ್

ಸಿನಿಮಾ ಪ್ರಮೋಷನ್ ನಲ್ಲಿ ಸಾರಾ-ಕಾರ್ತಿಕ್

ಟ್ರೈಲರ್ ಮತ್ತು ಹಾಡುಗಳಲ್ಲಿ ಇಬ್ಬರ ಕೆಮಿಸ್ಟ್ರಿ ನೋಡಿದ ಅಭಿಮಾನಿಗಳು ಕಾರ್ತಿಕ್ ಮತ್ತು ಸಾರಾ ಇಬ್ಬರನ್ನು ನಿಜ ಜೀವನದಲ್ಲೂ ಹಾಗೆ ನೋಡಲು ಬಯಸಿದ್ದಾರೆ. ಇಬ್ಬರು ಮದುವೆ ಆದರೆ ಚಂದ ಎನ್ನುವುದು ಅಭಿಮಾನಿಗಳ ಆಸೆಯಾಗಿದೆ. ಯಾಕಂದ್ರೆ ಇತ್ತೀಚಿಗೆ ಕಾರ್ತಿಕ್ ಮತ್ತು ಸಾರಾ ಇಬ್ಬರು ಆಗ್ರದಲ್ಲಿ ಚಿತ್ರದ ಪ್ರಮೋಷನ್ ಗೆ ಭಾಗಿಯಾಗಿದ್ದರು. ಈ ಸಮಯದಲ್ಲಿ ಅಭಿಮಾನಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

 ಅತ್ತಿಗೆ ಎಂದ ಅಭಿಮಾನಿಗಳು

ಅತ್ತಿಗೆ ಎಂದ ಅಭಿಮಾನಿಗಳು

ಈ ಸಮಯದಲ್ಲಿ ಕಾರ್ತಿಕ್ ಅಭಿಮಾನಿಗಳು ಸಾರಾಗೆ ಅತ್ತಿಗೆ ಅತ್ತಿಗೆ ಎಂದು ಜೋರಾಗಿ ಕರೆಯಲು ಪ್ರಾರಂಭಿಸಿದ್ದಾರೆ. ಇದರಿಂದ ಮುಜುಗರಕ್ಕೆ ಈಡಾದ ಸಾರಾ ಯಾವುದೆ ಎಕ್ಸ್ ಪ್ರೆಷನ್ ಕೊಡದೆ ಸೈಲೆಂಟ್ ಆಗುತ್ತಾರೆ. ನಂತರ ಇಡೀ ಕಾರ್ಯಕ್ರಮ ಮುಗಿಯುವವರೆಗೂ ಅಭಿಮಾನಿಗಳಿಂದ ಮುಖ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

 ಅಭಿಮಾನಿಗಳ ಮಾತು ಕೇಳಿ ನಕ್ಕಿದ ಕಾರ್ತಿಕ್

ಅಭಿಮಾನಿಗಳ ಮಾತು ಕೇಳಿ ನಕ್ಕಿದ ಕಾರ್ತಿಕ್

ಸಾರಾ ಪಕ್ಕದಲ್ಲಿ ಇದ್ದ ಕರ್ತಿಕ್ ಅಭಿಮಾನಿಗಳ ಕಡೆ ನೋಡಿ ನಗು ಬೀರುತ್ತಾರೆ. ಕಾರ್ತಿಕ್ ನಗುತ್ತಿದ್ದಂತೆ ಅಭಿಮಾನಿಗಳು ಮತ್ತೆ ಜೋರಾಗಿ ಬಾಬಿ ಬಾಬಿ ಎಂದು ಕಿರುಚಾಡುತ್ತಾರೆ. ಇಬ್ಬರ ಕೆಮಿಸ್ಟ್ರಿಗೆ ಫಿದಾ ಆದ ಅಭಿಮಾನಿಗಳು ಸಾರಾಳನ್ನು ಅತ್ತಿಗೆ ಎಂದು ಕರೆಯುತ್ತಿದ್ದಾರೆ.

ಪ್ರೇಮಿಗಳ ದಿನಕ್ಕೆ ಸಿನಿಮಾ ತೆರೆಗೆ

ಲವ್ ಆಜ್ ಕಲ್ ಇಮ್ತಿಯಾಜ್ ಅಲಿ ನಿರ್ದೇಶದಲ್ಲಿ ಮೂಡಿಬಂದ ಸಿನಿಮಾ. ಈಗಾಗಲೆ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಇದೆ ತಿಂಗಳು ತೆರೆಗೆ ಬರುತ್ತಿದೆ. ವಿಶೇಷ ಅಂದರೆ ಪ್ರೇಮಿಗಳ ದಿನಾಚರಣೆ ದಿನ ಲವ್ ಆಜ್ ಕಲ್ ಅಭಿಮಾನಿಗಳ ಮುಂದೆ ಬರುತ್ತಿದೆ.

More from Filmibeat

English summary
Fans called to Actress Sara Ali Khan a sister-in-law in Love Aaj Kal film promotion. Love Aaj Kal film all ready to release on February 14th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X