ಜವಾನ್ ನೋಡಿ ಹಣ ವಾಪಸ್ ಕೇಳಿದ ಶಾರುಖ್ ಖಾನ್ ಅಭಿಮಾನಿಗಳು: ಕಾರಣ ಕೇಳಿದ್ರೆ ನೀವು ಬೈತಿರಿ!

ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರ ಇತ್ತೀಚಿನ ಸಿನಿಮಾ ಜವಾನ್ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಮುಂದುವರೆಸಿದೆ. ಈಗಾಗಲೇ ಹಲವು ದಾಖಲೆಗಳನ್ನು ಮುರಿದು ಸಿನಿಪ್ರಿಯರ ಹೃದಯ ಗೆದ್ದಿದೆ. ಅಟ್ಲಿ ನಿರ್ದೇಶನದ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ಗಳಿಸಿದೆ.

ಜವಾನ್ ಸಿನಿಮಾ ಸೆಪ್ಟೆಂಬರ್ 7 ರಂದು ಥಿಯೇಟರ್‌ಗೆ ಬಿಡುಗಡೆಯಾಗಿದ್ದು, ಕೇವಲ ಐದು ದಿನಗಳಲ್ಲಿ 520 ಕೋಟಿ ರೂಪಾಯಿಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಅಟ್ಲಿ ನಿರ್ದೇಶನ ಚೊಚ್ಚಲ ಬಾಲಿವುಡ್ ಮಾಸ್ಟರ್‌ಪೀಸ್ ಬಗ್ಗೆ ಚಲನಚಿತ್ರ ಪ್ರೇಮಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದರೆ, ಯುಕೆ ಅಭಿಮಾನಿಗಳ ಕೋಪ ವ್ಯಕ್ತಪಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ!.

shah-rukh-khan-s-jawan-in-uk

ಜವಾನ್ ನೋಡಿ ಶಾರುಖ್ ಖಾನ್ ಅಭಿಮಾನಿಗಳ ಪ್ರತಿಭಟನೆ!

ಯುಕೆಯ ಥಿಯೇಟರ್‌ ಒಂದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದರೇ ಎಂತಹ ಸಿನಿಪ್ರೇಮಿಗೂ ಕೋಪ ಬರುವುದು ಸಾಮಾನ್ಯವಾಗಿದೆ. ಚಲನಚಿತ್ರ ಪ್ರದರ್ಶನದ ಸಮಯದಲ್ಲಿ ನಡೆದ ದೊಡ್ಡ ಅವಘಡ ಒಂದನ್ನು ಇದರಲ್ಲಿ ಕಾಣಬಹುದು. ಥಿಯೇಟರ್ ಮಾಲೀಕರಿಂದ ತಮ್ಮ ಹಣ ಮರುಪಾವತಿ ಮಾಡುವಂತೆ ಕೋಪಗೊಂಡ ಅಭಿಮಾನಿಗಳ ಆಕ್ರೋಶವನ್ನು ನೋಡಬಹುದು.

ಅಭಿಮಾನಿಗಳು ಕೋಪಗೊಳ್ಳುವಂತೆ ಆಗಿದ್ದೇನು...?

ಸಹಾರ್ ರಶೀದ್ ಎಂಬ ಶಾರುಖ್‌ ಕಾರ್ಣ ಅಭಿಮಾನಿಯೊಬ್ಬರು Instagram ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಚಿತ್ರಮಂದಿರದಲ್ಲಿ ಜವಾನ್ ವೀಕ್ಷಿಸಿದ ನಂತರ ತನ್ನ ನಿರಾಸೆಯನ್ನು ಇದರಲ್ಲಿ ವ್ಯಕ್ತಪಡಿಸಿದ್ದಾರೆ. ಹಾಗಂತ ಇವರ ಬೇಸರಕ್ಕೆ ಸಿನಿಮಾ ಕಾರಣವಲ್ಲ...! ಇದಕ್ಕೆ ಥಿಯೇಟರ್ ಮಾಲೀಕರು ಕಾರಣ.

ಹೌದು... ಜವಾನ್ ನೋಡಲು ಅಷ್ಟು ಖುಷಿಯಿಂದ ಬಂದ ಇವರಿಗೆ ಥಿಯೇಟರ್ ದೊಡ್ಡ ಮೋಸ ಮಾಡಿದೆ. ಸಿನಿಮಾ ಆರಂಭವಾಗುತ್ತಿದ್ದಂತೆ ತಪ್ಪಾಗಿ ಜವಾನ್‌ನ ದ್ವಿತೀಯಾರ್ಧವನ್ನು ಮೊದಲು ಪ್ಲೇ ಮಾಡಲಾಗಿದೆ. ಒಂದು ಗಂಟೆಯೊಳಗೆ ಸಿನಿಮಾ ಮುಗಿಸಿದ ಮೇಲೆ ಮಧ್ಯಂತರ ಎಂದು ತೋರಿಸಲಾಗಿದೆ. ಆಗಲೇ ಅಲ್ಲಿದ್ದವರಿಗೆ ಸಿನಿಮಾ ಅರ್ಧ ಹಾಕಿದ್ದಾರೆ ಎಂಬುದು ತಿಳಿದಿದೆ.

ಇದಾದ ನಂತರ ಎಲ್ಲರೂ ಥೀಯೇಟರ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ತಮ್ಮ ಹಣವನ್ನು ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಘಟನೆಯ ವೀಡಿಯೊವನ್ನು ಹಂಚಿಕೊಂಡ ಅವರು, ನನ್ನ ಕನಸಿನ ನಟನ ಚಲನಚಿತ್ರವನ್ನು ಹಾಳು ಮಾಡಿದ್ದಕ್ಕಾಗಿ ನೀವು ಕೇವಲ ಒಂದು ಟಿಕೆಟ್ ಅನ್ನು ಮಾತ್ರ ಮರುಪಾವತಿ ಮಾಡಬಾರದು. ಇಡೀ ವರ್ಷಗಳ ಟಿಕೆಟ್‌ಗಳನ್ನು ಉಚಿತವಾಗಿ ನೀಡಬೇಕು. ಎಂದಿದ್ದಾರೆ. ಜೊತೆಗೆ ಶಾರುಖ್ ಖಾನ್ ಅವರನ್ನು ಟ್ಯಾಗ್ ಮಾಡಿ, ನಿಮ್ಮ ಅಭಿಮಾನಿಗಳಿಗೆ ಏನಾಯಿತು ಎಂಬುದನ್ನು ನೀವು ನೋಡಿ ಎಂದಿದ್ದಾರೆ.

shah-rukh-khan-s-jawan-in-uk

ಜನರ ಆಕ್ರೋಶದಿಂದ ಥಿಯೇಟರ್ ಮ್ಯಾನೇಜ್‌ಮೆಂಟ್ ಅವರ ಟಿಕೆಟ್‌ಗಳ ಹಣವನ್ನು ಮರುಪಾವತಿ ಮಾಡಿದೆ ಮತ್ತು ಶಾರುಖ್ ಖಾನ್ ಅಭಿನಯದ ಜವಾನ್ ಮತ್ತೊಂದು ಪ್ರದರ್ಶನಕ್ಕಾಗಿ ಅವರಿಗೆ ಉಚಿತ ಟಿಕೆಟ್‌ಗಳನ್ನು ಒದಗಿಸಿದೆ ಎಂದು ಸಹಾರ್ ಮಾಹಿತಿ ನೀಡಿದ್ದಾರೆ.

ಈ ವೈರಲ್ ವೀಡಿಯೋಗೆ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಹಣ ನಿಮಗೆ ಸಿಕ್ಕರೂ ಕೂಡ ನಿಮ್ಮ ನೆಚ್ಚಿನ ನಟನ ಸಿನಿಮಾ ನೋಡುವ ನಿಮ್ಮ ಆಸೆಯನ್ನು ಹಾಳು ಮಾಡಿದ್ದಾರೆ. ಇದೊಂದು ನಿಜಕ್ಕೂ ದುಃಖಕರ ವಿಷಯ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ವಿಡಿಯೋ ಈಗಾಗಲೇ 4.5 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

ಜವಾನ್

ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್, ಪ್ರಿಯಾಮಣಿ, ಗಿರಿಜಾ ಓಕ್, ಲೆಹರ್ ಖಾನ್ ಇದ್ದು, ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಸಂಜಯ್ ದತ್ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.

More from Filmibeat

English summary
Fans Demand Refund After Watching Shah Rukh Khan’s Jawan In UK.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X