'ರಾಮಾಯಣ'ದಲ್ಲಿ 'ಯಶ್' ಗೆ 'ಸಾಕ್ಷಿ ತನ್ವರ್' ನಾಯಕಿ ; 'ಬೇಡವೇ ಬೇಡ' ಎಂದ ಅಭಿಮಾನಿಗಳು..!
ಬಣ್ಣದ ಲೋಕ ಸತ್ಯ ಮಿಥ್ಯದ ಸಾಗರ. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟಿಕೊಳ್ಳುತ್ತವೆ. ದಿನಕ್ಕೊಂದು ಸುದ್ದಿ ಸಾಯುತ್ತವೆ. ಕೆಲ ಸುದ್ದಿಗಳು ಸಿನಿಮಾ ಪ್ರಿಯರಿಗೆ ಖುಷಿ ಕೊಟ್ಟರೆ, ಇನ್ನೂ ಕೆಲ ವಿಚಾರದಲ್ಲಿ ಅಸಹನೆ ಅಸಮಾಧಾನದ ಅಲೆ ಕಂಡುಬರುತ್ತದೆ. ಉದಾಹರಣೆಗೆ ''ಬಾಲಿವುಡ್'' ನಲ್ಲಿ ನಿರ್ಮಾಣವಾಗ್ತಿರುವ ''ಯಶ್'' ಅಭಿನಯದ ''ರಾಮಾಯಣ'' ಚಿತ್ರವನ್ನೇ ತೆಗೆದುಕೊಳ್ಳಿ
ಹೌದು, ಕನ್ನಡದ ''ರಾಕಿಂಗ್ ಸ್ಟಾರ್ ಯಶ್'' ಅವರನ್ನ ''ರಾವಣ''ನ ರೂಪದಲ್ಲಿ ನೋಡುವ ಸುವರ್ಣ ಅವಕಾಶ, ಸಮಸ್ತ ಸಿನಿಪ್ರೇಮಿಗಳಿಗೆ ಸಿಗಲಿದೆ ಎಂಬ ಸುದ್ದಿ ಸ್ಫೋಟವಾದಾಗ ಅನೇಕರು ''ವ್ಹಾ'' ಎಂದು ಉದ್ಗಾರ ತೆಗೆದಿದ್ದರು. ''ಸಾಧನೆ'' ಅಂದರೆ ಇದು ಎಂದಿದ್ದರು. ಇನ್ನೂ ಕೆಲವರು ''ಇದು ಬೇಕಿತ್ತಾ''..? ಎಂಬ ಪ್ರಶ್ನೆಯನ್ನೂ ಕೇಳಿದ್ದರು.

ಆ ನಂತರ ಬೇಕು ಬೇಡ ಎಂಬ ಚರ್ಚೆಯನ್ನ ಮರೆತು ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ತಲ್ಲೀನರಾದರು. ''ಯಶ್'' ಕೂಡ ''ಟಾಕ್ಸಿಕ್'' ಸಿನಿಮಾದ ಕೆಲಸದಲ್ಲಿ ಮುಳುಗಿ ಹೋದರು. ಇದೆಲ್ಲವೂ ಆಗಿ ತಿಂಗಳಾನುಗಟ್ಟಲೆ ನಂತರ ಬಾಲಿವುಡ್ ನಲ್ಲಿ ನಿರ್ಮಾಣವಾಗ್ತಿರುವ ''ರಾಮಾಯಣ''ದ ಬಗ್ಗೆ ಮತ್ತೆ ''ಡಿಬೆಟ್'' ಆರಂಭವಾಗಿದೆ. ಇದಕ್ಕೆ ಕಾರಣ ''ಸಾಕ್ಷಿ ತನ್ವರ್''.
ಹೌದು, ನಿನ್ನೆಯಿಂದ ''ರಾಮಾಯಣ'' ಚಿತ್ರದಲ್ಲಿ ''ರಾವಣ''ನ ಪತ್ನಿ ''ಮಂಡೋದರಿ'' ಪಾತ್ರವನ್ನ ''ಸಾಕ್ಷಿ ತನ್ವರ್'' ನಿರ್ವಹಿಸಲಿದ್ದಾರೆ ಅನ್ನುವ ಸುದ್ದಿ ಎಲ್ಲೆಡೆ ಪಸರ್ ಆಗಿದೆ. ಚಿತ್ರತಂಡದೊಂದಿಗೆ ಸ್ಕ್ರಿಪ್ಟ್ ರೀಡಿಂಗ್ ಸೆಷನ್ಸ್‌ನಲ್ಲಿ ''ಸಾಕ್ಷಿ'' ಭಾಗಿಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದು ನಿಜಾನಾ.. ಸುಳ್ಳಾ.. ಚಿತ್ರತಂಡವೇ ಖುದ್ದು ಉತ್ತರ ನೀಡಬೇಕಾದರೂ, ಸದ್ಯಕ್ಕೆ ರಾಕಿ ಭಕ್ತಗಣದಲ್ಲಿ ಅಪಸ್ವರ ಕೇಳಿ ಬರುತ್ತಿದೆ. ಸಾಕ್ಷಿ ''ಬದಲು'' ಬೇರೆ ಅವರನ್ನ ''ಮಂಡೋದರಿ'' ಪಾತ್ರಕ್ಕೆ ಆಯ್ಕೆ ಮಾಡಿ ಎಂಬ ಒತ್ತಾಯದ ಕೂಗು ಸಾಮಾಜಿಕ ಜಾಲತಾಣದಿಂದ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಸಾಕ್ಷಿ ತನ್ವರ್ ಅವರ ''ವಯಸ್ಸು''.
ನಿಮಗೆ ಗೊತ್ತಿರಲಿ, ಸಾಕ್ಷಿಗೆ ಈಗ ''51''ರ ಹರೆಯ. ಇನ್ನೂ ರಾಕಿ ಭಾಯ್ ವಯಸ್ಸು ಜಸ್ಟ್ ''38''. ಈ ಕಾರಣಕ್ಕೆ ತೆರೆಯ ಮೇಲೆ, ಜೋಡಿ ಅಷ್ಟೊಂದು ಚೆನ್ನಾಗಿ ಕಾಣಲ್ಲ ಎನ್ನುವ ಅಭಿಪ್ರಾಯವನ್ನ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ''ಮಂಡೋದರಿ'' ಪಾತ್ರಕ್ಕೆ ''ಸೀನಿಯರ್ ಸಿಟಿಜನ್'' ಅವರನ್ನ ಆಯ್ಕೆ ಮಾಡದೇ, ''ಯಶ್'' ಅವರಿಗಿಂತ ''ಕಿರಿಯ ನಟಿ''ಯನ್ನ ಆಯ್ಕೆ ಮಾಡಿ ಎಂಬ ''ಸಲಹೆ''ಯನ್ನೂ ಚಿತ್ರದ ನಿರ್ದೇಶಕ ''ನಿತೀಶ್ ತಿವಾರಿ'' ಅವರಿಗೆ ಕೊಡುತ್ತಿದ್ದಾರೆ.

ಈ ಸಲಹೆ ಸೂಚನೆಗಳನ್ನ ನಿತೀಶ್ ತಿವಾರಿ ''ಪರಿಗಣಿಸುತ್ತಾರಾ'' ಗೊತ್ತಿಲ್ಲ. ಆದರೆ ಆ ಸಾಧ್ಯತೆ ತೀರಾ ''ಕಡಿಮೆ'' ಅನ್ನುವ ಮಾತು ಬಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ಯಾಕೆಂದರೆ ಸಾಕ್ಷಿ ತನ್ವರ್ ಬಾಲಿವುಡ್ ನಲ್ಲಿ ಇರುವ ಕೆಲವೇ ಕೆಲ ''ಪ್ರತಿಭಾವಂತ'' ನಟಿಯರಲ್ಲಿ ಒಬ್ಬರು. ''ಕಿರುತೆರೆ''ಯ ದೊಡ್ಡ ಹೆಸರು ಕೂಡ. ಇನ್ನೂ ಇದೇ ನಿತೀಶ್ ತಿವಾರಿ ನಿರ್ದೇಶನದ ''ದಂಗಲ್'' ಚಿತ್ರದಲ್ಲಿ ಸಾಕ್ಷಿ ಕಾಣಿಸಿಕೊಂಡಿದ್ದರು. ಆಮೀರ್ ಖಾನ್ ''ಪತ್ನಿ'' ಪಾತ್ರವನ್ನ ನಿರ್ವಹಿಸಿ, ಜನ ಮನ ಗೆದ್ದಿದ್ದರು.
ಇನ್ನೂ ''ಪ್ರಭಾಸ್'' ಅಭಿನಯದ ''ಆದಿಪುರುಷ್'' ಚಿತ್ರ ನಿಮಗೆ ನೆನಪಿದ್ದರೆ, ಆ ಚಿತ್ರದಲ್ಲಿ ''ಮಂಡೋದರಿ'' ಪಾತ್ರವನ್ನ ಗ್ಲ್ಯಾಮರಸ್ ನಟಿ ''ಸೋನಲ್ ಚವ್ಹಾಣ್'' ನಿರ್ವಹಿಸಿದ್ದರು. ತೆರೆಯ ಮೇಲೆ ಸೈಫ್ ಅಲಿ ಖಾನ್ ಹಾಗೂ ಸೋನಲ್ ನಡುವಿನ ''ಕೆಮೆಸ್ಟ್ರೀ'' ತೀರಾ ನಾಟಕೀಯ ಎನ್ನುವಂತೆ ಭಾಸವಾಗಿತ್ತು. ಈ ತಪ್ಪನ್ನೇ ಪುನರಾವರ್ತನೆ ಮಾಡುವ ಮನಸು ''ನಿತೀಶ್ ತಿವಾರಿ''ಗೆ ಇಲ್ಲ. ಈ ಕಾರಣಕ್ಕೆ ಸಾಕ್ಷಿ ತನ್ವರ್ ಮಂಡೋದರಿ ಪಾತ್ರಕ್ಕೆ ಬಣ್ಣ ಹಚ್ಚುವುದು ಬಹುತೇಕ ''ಖಚಿತ'' ಅನ್ನುವ ಮಾತು ಮುಂಬೈನಲ್ಲಿ ಬಲವಾಗಿ ಕೇಳಿ ಬರುತ್ತಿದೆ.

ಒಟ್ನಲ್ಲಿ ಸದ್ಯಕ್ಕೆ ಯಶ್ ರಾವಣನಾದರೆ, ಸಾಕ್ಷಿ ಮಂಡೋದರಿಯಾಗಲಿದ್ದಾರೆ. ಇನ್ನೂ ರಣ್ಭೀರ್ ಕಪೂರ್ ರಾಮನ ಪಾತ್ರಕ್ಕೆ ಸಿದ್ಧರಾಗಿದ್ದಾರೆ. ಸೀತೆಯ ಪಾತ್ರ ಸಾಯಿ ಪಲ್ಲವಿ ಪಾಲಾಗಿದೆ ಎಂಬ ಮಾತು ಇದೆ. ಇದರ ನಡುವೆ ಮಂಡೋದರಿ ಪಾತ್ರಕ್ಕೆ ಸಾಕ್ಷಿ ಬೇಡವೇ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಿಜಕ್ಕೂ ರಾಮಾಯಣದಲ್ಲಿ ಯಾರೆಲ್ಲ ಇದ್ದಾರೆ, ಚಿತ್ರದ ಚಿತ್ರೀಕರಣ ಆರಂಭವಾಗುವುದು ಯಾವಾಗ..? ಎಂಬ ಪ್ರಶ್ನೆಗಳಿಗೆಲ್ಲ ಉತ್ತರ ಚಿತ್ರ ಸೆಟ್ಟೇರಿದ ದಿನವೇ ಗೊತ್ತಾಗಲಿದೆ


Click it and Unblock the Notifications











