ಜವಾನ್ ಕ್ರೇಜ್: ಟಿಕೆಟ್ ಖರೀದಿಸಲು ರಾತ್ರಿ 2 ಗಂಟೆಗೆ ಥಿಯೇಟರ್ ಹೊರಗೆ ಸಾಲುಗಟ್ಟಿ ನಿಂತ ಶಾರುಖ್ ಖಾನ್ ಫ್ಯಾನ್ಸ್

ಬಿಡುಗಡೆ ದಿನ ಹತ್ತಿರವಾಗುತ್ತಿದ್ದಂತೆ 'ಜವಾಬ್' ಫೀವರ್ ದೇಶವನ್ನು ಆವರಿಸುತ್ತಲೇ ಇದೆ. ಅಭಿಮಾನಿಗಳ ಕಾತುರ ಹೆಚ್ಚಾಗುತ್ತಿದ್ದು, ನಟ ಶಾರುಖ್ ಖಾನ್ ಕೂಡ ಸಿನಿಮಾ ಬಗ್ಗೆ ನಿರಂತರ ಪ್ರಚಾರಮಾಡುತ್ತಲೇ ಇದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವ ಅವರು, ಅಪ್‌ಡೇಟ್ ನೀಡುತ್ತಲೇ ಇದ್ದಾರೆ.

ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಹೆಚ್ಚಾಗುತ್ತಿದ್ದು, ದೇಶದಲ್ಲಿ ಸುಮಾರು ಏಳೂವರೆ ಲಕ್ಷ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿದೆ ಎಂದು ವರದಿಯಾಗಿದೆ. ಈಗಾಗಲೇ 7, 50,000 ಟಿಕೆಟ್‌ಗಳನ್ನು ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಮಾರಾಟ ಮಾಡಲಾಗಿದ್ದು, ಜವಾನ್ ಉತ್ತಮ ಆರಂಭ ಪಡೆದುಕೊಂಡಿದೆ ಎಂದು ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಬುಕ್‌ಮೈಶೋ ಮಾಹಿತಿ ನೀಡಿದೆ.

Fans line up outside theatre at 2 AM to buy Shah Rukh Khan’s latest film Jawan tickets

ಜವಾನ್ ಕಣ್ತುಂಬಿಕೊಳ್ಳಲು ಅಭಿಮಾನಿಗಳ ಕಾತುರ

ಸಿನಿಮಾ ಯಶಸ್ಸು ಪಡೆಯಲಿ ಎಂದು ಶಾರುಖ್ ಖಾನ್ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಕಳೆದ ವಾರ ವೈಷ್ಣೋದೇವಿ ದೇವಾಲಯಕ್ಕೆ ಹೋಗಿದ್ದ ನಟ ಸೆಪ್ಟಂಬರ್ ಐದರಂದು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಈ ವೇಳೆ ನಟಿ ನಯನತಾರಾ, ಸುಹಾನಾ ಖಾನ್, ವಿಘ್ನೇಶ್ ಶಿವನ್ ಕೂಡ ಜೊತೆಗಿದ್ದರು.

ಶಾರುಖ್ ಖಾನ್ ಪ್ರಯತ್ನಕ್ಕೆ ಬೆಂಬಲ ನೀಡಲು ಅವರ ಅಭಿಮಾನಿಗಳು ಸಹ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಆನ್‌ಲೈನ್ ಅಡ್ವಾನ್ಸ್ ಬುಕ್ಕಿಂಗ್ ಜೊತೆಗೆ ಶಾರುಖ್ ಖಾನ್ ಅಭಿಮಾನಿಗಳು ಜವಾನ್ ಟಿಕೆಟ್ ಖರೀದಿಸಲು 2 ರಾತ್ರಿ ಗಂಟೆಗೆ ಥಿಯೇಟರ್ ಹೊರಗೆ ಸಾಲುಗಟ್ಟಿ ನಿಂತಿದ್ದಾರೆ.

ಬೆಳ್ಳಿ ಪರದೆಯ ಮೇಲೆ ಕಿಂಗ್ ಖಾನ್ ಮ್ಯಾಜಿಕ್ ನೋಡಲು ಶಾರುಖ್ ಖಾನ್ ಅಭಿಮಾನಿಗಳು ಸೂರ್ಯನಿಗಿಂತ ಮುಂಚೆಯೇ ಚಿತ್ರಮಂದಿರಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಹೀಗಾಗಿ ಸೆಪ್ಟಂಬರ್ 7 ರಂದು ಬಿಡುಗಡೆಯಾಗುತ್ತಿರುವ ಜವಾನ್ ಚಿತ್ರಕ್ಕೆ ಟಿಕೆಟ್ ಖರೀದಿಸಲು ಮಹಾರಾಷ್ಟ್ರದ ಥಿಯೇಟರ್‌ನ ಹೊರಗೆ ಜನಸಾಗರವೇ ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ.

Fans line up outside theatre at 2 AM to buy Shah Rukh Khan’s latest film Jawan tickets

ಶಾರುಖ್ ಖಾನ್ ಅವರ ಅಭಿಮಾನಿಗಳ ಸಂಘ ಜಸ್ಟ್ ಎ ಫ್ಯಾನ್, ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ನಟನ ಅಭಿಮಾನಿಗಳು ರಾತ್ರಿ 2 ಗಂಟೆಗೆ ಉದ್ದನೆಯ ಸರದಿಯಲ್ಲಿ ನಿಂತಿರುವುದನ್ನು ಕಾಣಬಹುದು. ಟಿಕೆಟ್ ತೆಗೆದುಕೊಳ್ಳಲು ಬುಕ್ಕಿಂಗ್ ಕೌಂಟರ್ ತೆರೆಯಲು ಕಾಯುತ್ತಿದ್ದಾರೆ. ಫ್ಯಾನ್ಸ್‌ ಪೇಜ್ ಪ್ರಕಾರ, ವೈರಲ್ ವಿಡಿಯೋ ಮಹಾರಾಷ್ಟ್ರದ ಮಾಲೆಗಾಂವ್‌ನದ್ದು.

ಜವಾನ್ ಮುಂಜಾನೆ ಶೋಗಳು

ಈ ಬಾರೀ ವಿಶೇಷವಾಗಿ ಮುಂಬೈನಲ್ಲಿ ಹಿಂದಿ ಸಿನಿಮಾ ಮುಂಜಾನೆ ಪ್ರದರ್ಶನವಾಗಲಿದೆ. ಹಲವು ನಗರಗಳಾದ್ಯಂತ ಜವಾನ್ ಮುಂಜಾನೆ ಶೋಗಳು ನಡೆಯಲಿವೆ. ಈ ಹಿಂದೆ, ಮುಂಬೈ, ಬಿಹಾರದ ಮೋತಿಹಾರಿ ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾದಂತಹ ಅನೇಕ ನಗರಗಳು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಬೆಳಗ್ಗೆ 5 ಗಂಟೆಯಿಂದಲೇ ಚಿತ್ರದ ಪ್ರದರ್ಶನವನ್ನು ಆಯೋಜಿಸಿದ್ದವು.

ಎಲ್ಲಾ ದಾಖಲೆಗಳನ್ನು ಬದಿಗಿರಿಸಿ, ಪಶ್ಚಿಮ ಬಂಗಾಳದ ರಾಯಗಂಜ್ ನಗರದಲ್ಲಿ ಜವಾನ್ ಬೆಳಗ್ಗೆ 2.15 ಕ್ಕೆ ಪ್ರದರ್ಶನವಾಗಲಿದೆ. ದೇಶದ ಹಲವು ಭಾಗಗಳಲ್ಲಿ ಮೊದಲ ಶೋ ನೊಡಲು ಜನ ಮುಗಿಬಿದ್ದಿದ್ದು, ಅಡ್ವಾನ್ಸ್ ಬುಕ್ಕಿಂಗ್ ಹೆಚ್ಚಾಗುತ್ತಿದೆ.

ಶಾರುಖ್ ಖಾನ್, ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಘಟಾನುಘಟಿಗಳು ನಟಿಸಿರುವ ಜವಾನ್ ಸಿನಿಮಾಕ್ಕೆ ಅಟ್ಲಿ ಆಕ್ಷನ್ ಕಟ್ ಹೇಳಿದ್ದಾರೆ. ಜೈಲರ್ ಸಂಗೀತ ನಿರ್ದೇಶಕ ಅರವಿಂದ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಜವಾನ್ ಮೊದಲ ದಿನ 65 ರಿಂದ 70 ಕೋಟಿಯ ಆರಂಭಿಕ ಕಲೆಕ್ಷನ್ ಕಾಣಬಹುದು ಎಂದು ವರದಿಯಾಗಿದೆ.

More from Filmibeat

English summary
Fans line up outside theatre at 2 AM to buy Shah Rukh Khan’s Jawan tickets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X