»   » ಜಾಕ್ವೆಲಿನ್ ಜೊತೆ ಅಭಿಮಾನಿಗಳ ಅಸಭ್ಯ ವರ್ತನೆ: ನಟಿಯರ ಗೋಳು ಕೇಳೋರ್ಯಾರು.?

ಜಾಕ್ವೆಲಿನ್ ಜೊತೆ ಅಭಿಮಾನಿಗಳ ಅಸಭ್ಯ ವರ್ತನೆ: ನಟಿಯರ ಗೋಳು ಕೇಳೋರ್ಯಾರು.?

By: ಫಿಲ್ಮಿಬೀಟ್ ಡೆಸ್ಕ್
Subscribe to Filmibeat Kannada

ಸಿನಿಮಾದಲ್ಲಿ ಗ್ಲಾಮರ್ ಗೊಂಬೆಗಳಂತೆ ಮಿಂಚುತ್ತಾರೆ ಎಂದ ಮಾತ್ರಕ್ಕೆ ನಟಿಯರಿಗೆ ಖಾಸಗಿ ಜೀವನ ಇಲ್ಲ ಅಂತಲ್ಲ. 'ಅಭಿಮಾನ'ದ ನೆಪದಲ್ಲಿ ನಟಿಯರ ಜೊತೆ ಅಸಭ್ಯವಾಗಿ ವರ್ತಿಸುವ ಹಕ್ಕು ಯಾರಿಗೂ ಇಲ್ಲ.

ಅಭಿಮಾನಿಗಳ ಅನುಚಿತ ವರ್ತನೆ: ಟ್ವಿಟ್ಟರ್ ನಲ್ಲಿ ಗುಡುಗಿದ ನಟಿ ಇಲಿಯಾನಾ

ಮೊನ್ನೆಮೊನ್ನೆಯಷ್ಟೇ ನಟಿ ಇಲಿಯಾನಾ ಕೂಡ ಇದನ್ನೇ ಹೇಳಿದ್ದರು. ಹೀಗಿದ್ದರೂ, ಕೆಲವರಿಗೆ ಬುದ್ದಿ ಬಂದಿಲ್ಲ. ನಟಿಯರನ್ನು ಕಂಡ ತಕ್ಷಣ 'ಅಭಿಮಾನ'ದ ಹೆಸರಿನಲ್ಲಿ ಮೈಮೇಲೆ ಬಿದ್ದು, ಅಸಭ್ಯವಾಗಿ ವರ್ತಿಸುವವರ ಸಂಖ್ಯೆ ಕಮ್ಮಿ ಆಗಿಲ್ಲ. ಅದಕ್ಕೆ ಸಾಕ್ಷಿ 'ಜುಡ್ವಾ-2' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ. ಮುಂದೆ ಓದಿರಿ....

ಜಾಕ್ವೆಲಿನ್ ಜೊತೆ ಅಭಿಮಾನಿಗಳ ಅನುಚಿತ ವರ್ತನೆ

'ಜುಡ್ವಾ-2' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆದಿತ್ತು. ಟ್ರೈಲರ್ ಲಾಂಚ್ ಜೊತೆಗೆ 50 ಅವಳಿ-ಜವಳಿ ಸಹೋದರರಿಗಾಗಿ ವಿಶೇಷ ಸ್ಪರ್ಧೆ ಕೂಡ ಆಯೋಜಿಸಲಾಗಿತ್ತು. ಸ್ಪರ್ಧೆ ಶುರು ಆಗುವ ಮುನ್ನವೇ 'ಜುಡ್ವಾ-2' ಚಿತ್ರದ ನಾಯಕಿ ಜಾಕ್ವೆಲಿನ್ ಗೆ ಕಿರಿಕಿರಿ ಆಗುವ ಘಟನೆ ನಡೆದು ಹೋಯ್ತು.

ಮೊನ್ನೆ ಹರಿಪ್ರಿಯಾ, ಇಂದು ಅನುಶ್ರೀ...ನಟಿಯರ ಪಾಡು ಯಾಕ್ ಕೇಳ್ತೀರಾ?

ಅಸಭ್ಯ 'ಸೆಲ್ಫಿ'

50 ಅವಳಿ-ಜವಳಿ ಸಹೋದರರ ಪೈಕಿ ಒಬ್ಬರು ನಟಿ ಜಾಕ್ವೆಲಿನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಭರದಲ್ಲಿ ಅಸಭ್ಯವಾಗಿ ವರ್ತಿಸಿದರು. ಸೆಕ್ಯೂರಿಟಿ ಹಾಗೂ ಬಾಡಿಗಾರ್ಡ್ ಗಳನ್ನು ಸೈಡಿಗೆ ತಳ್ಳಿದ ಅವಳಿ ಸಹೋದರರು, ನಟಿ ಜಾಕ್ವೆಲಿನ್ ಬಳಿ ತೆರಳಿ ಸೆಲ್ಫಿ ಹೆಸರಿನಲ್ಲಿ ಅನುಚಿತವಾಗಿ ವರ್ತಿಸಿದರು.

ಪ್ರೋಗ್ರಾಂ ಕ್ಯಾನ್ಸಲ್ ಆಯ್ತು

ಅವಳಿ ಸಹೋದರರ ಈ ವರ್ತನೆ ಕಂಡು ಕಿರಿಕಿರಿಗೊಂಡ ನಟಿ ಜಾಕ್ವೆಲಿನ್ ಅಲ್ಲಿಂದ ಹೊರ ನಡೆದುಬಿಟ್ಟರು. ಪ್ಲಾನ್ ಪ್ರಕಾರ ನಡೆಯಬೇಕಿದ್ದ ಸ್ಪರ್ಧೆ ಕೂಡ ಕ್ಯಾನ್ಸಲ್ ಆಯ್ತು. ಕೂಡಲೆ ಎಚ್ಚೆತ್ತ ಚಿತ್ರತಂಡ, ಸೆಕ್ಯೂರಿಟಿ ಹಾಗೂ ಬಾಡಿಗಾರ್ಡ್ ಗಳು 'ಆ' ಅವಳಿ ಸಹೋದರರನ್ನ ಹೊರಗೆ ಎಳೆದೊಯ್ದರು.

Bengaluru Girl Nidhi Agerwal To Act In Bollywood | Filmibeat Kannada

ನಟಿಯರ ಗೋಳು ಕೇಳೋರ್ ಯಾರು.?

ಸೆಲೆಬ್ರಿಟಿ ಜೀವನದಲ್ಲಿ ಇಂತಹ ಘಟನೆಗಳು ಹೊಸದೇನೂ ಅಲ್ಲ. ಅದರಲ್ಲೂ, ನಟಿಯರಿಗೆ ಇವೆಲ್ಲ ಕಾಮನ್ ಬಿಡಿ ಎಂದು ನೀವಂದುಕೊಳ್ಳಬಹುದು. ಆದ್ರೆ, ನಟಿಯರ ಗೋಳು ಅವರಿಗೆ ಮಾತ್ರ ಗೊತ್ತು. ಅದನ್ನ ಕೇಳೋರ್ ಯಾರು.?

English summary
Jacqueline Fernandez is the latest actress who was misbehaved with by fans. It so happened that at the Judwaa 2 trailer launch.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada