ಕಾಲು ಮುರಿದುಕೊಂಡರೂ ಕಮ್ಮಿಯಾಗದ ರಶ್ಮಿಕಾ 'ಕಮಿಟ್ಮೆಂಟ್', ವೀಲ್ ಚ್ಹೇರ್‌ನಲ್ಲಿಯೇ ಪ್ರಚಾರ..!
ರಶ್ಮಿಕಾ ಮಂದಣ್ಣಗೆ ಈಗ ಚಿನ್ನದಂತಹ ಬೇಡಿಕೆ ಇದೆ. ಆದರೆ, ಈ ಸಮಯದಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಕಾಲು ಮುರಿದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಕಷ್ಟವನ್ನು ಅರ್ಥ ಮಾಡಿಕೊಂಡು ಸಾಕ್ಷಾತ್ ಸಲ್ಮಾನ್ ಖಾನ್ ಅವರೇ ತಮ್ಮ ಸಿಖಂದರ್ ಚಿತ್ರದ ಚಿತ್ರೀಕರಣ ರದ್ದುಗೊಳಿಸಿದ್ದಾರೆ. ಈ ಹಿನ್ನೆಲೆ ಚಿತ್ರತಂಡಕ್ಕೆ ಕ್ಷಮೆಯನ್ನು ಕೇಳಿರುವ ರಶ್ಮಿಕಾ ಸದ್ಯ ವೀಲ್ ಚ್ಹೇರ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಮೂಲಕ ತಮ್ಮ ವೃತ್ತಿಪರತೆಯ ಪ್ರದರ್ಶನ ಮಾಡಿದ್ದಾರೆ.
ಹೌದು, ಅಸಲಿಗೆ ಹಾಡಲು, ಕುಣಿಯಲು ರಶ್ಮಿಕಾ ಅವರಿಗೆ ಈಗ ಸಾಧ್ಯ ಇಲ್ಲ. ಹಾಗಂಥ ಮನೆಯಲ್ಲಿ ಸುಮ್ಮನೆ ಕೂರಲು ಆಗುವುದಿಲ್ಲ. ಯಾಕೆಂದರೆ, ರಶ್ಮಿಕಾ ಮಂದಣ್ಣ ಅಭಿನಯದ ಛಾವ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮೊದಲ ಬಾರಿ ಐತಿಹಾಸಿಕ ಪಾತ್ರವನ್ನು ನಿರ್ವಹಿಸಿದ್ದಾರೆ. ಛತ್ರಪತಿ ಶಿವಾಜಿ ಸೊಸೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು, ರಶ್ಮಿಕಾ ಮಂದಣ್ಣ ಅವರಿಗೆ ಈ ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿವೆ. ಹೀಗಾಗಿಯೇ ತಮ್ಮ ಕಷ್ಟ ಎಲ್ಲ ಮರೆತ ರಶ್ಮಿಕಾ ವೀಲ್ ಚ್ಹೇರ್‌ನಲ್ಲಿಯೇ ಛಾವಾ ಚಿತ್ರದ ಪ್ರಚಾರ ಮಾಡಲು ಹೈದರಾಬಾದ್‌ದಿಂದ ಸೀದಾ ಮುಂಬೈ ವಿಮಾನವನ್ನೇರಿದ್ದಾರೆ. ಛಾವಾ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿತ್ರದ ಮೇಲೆ ರಶ್ಮಿಕಾ ಅವರಿಗೆ ಇರುವ ಶ್ರದ್ದೆಯನ್ನು ಕಂಡು ಅನೇಕರು ರಶ್ಮಿಕಾ ಮಂದಣ್ಣ ಅವರನ್ನು ಸದ್ಯ ಹೊಗಳುತ್ತಿದ್ದಾರೆ. ಕೆಲವರು ರಶ್ಮಿಕಾ ಮಂದಣ್ಣ ಅವರ ಈ ಸ್ಥಿತಿಯನ್ನು ಕಂಡು ಮರುಗುತ್ತಿದ್ದಾರೆ. ನಿಮ್ಮನ್ನು ಈ ಸ್ಥಿತಿಯಲ್ಲಿ ನೋಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ದುಖ ಪಡುತ್ತಿದ್ದಾರೆ. ಇನ್ನು ಕೆಲವರು ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ.
ಇನ್ನುಳಿದಂತೆ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಅಭಿನಯದ ಛಾವಾ ಚಿತ್ರ ಈ ಫೆಬ್ರವರಿ 14ರಂದು ತೆರೆಗೆ ಬರಲಿದೆ. ಮರಾಠ ಮಹಾರಾಜನ ಮಹಾರಾಣಿಯಾಗಿ ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಛತ್ರಪತಿ ಶಿವಾಜಿ ಮಹಾರಾಜರ ಉತ್ತರಾಧಿಕಾರಿ ಛತ್ರಪತಿ ಸಾಂಭಾಜಿ ಮಹಾರಾಜ್ ಅವರ ಜೀವನ ಕಥೆಯನ್ನು ಆಧರಿಸಿದ ಈ ಚಿತ್ರಕ್ಕೆ ಲಕ್ಷ್ಮಣ್ ಉಟೇಕರ್ ನಿರ್ದೇಶನ ಇದೆ. ಈಗಾಗಲೇ ಸ್ತ್ರೀ.. ಬೇಡಿಯಾ.. ಮುಂಜ್ಯಾನಂತಹ ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಗೆದ್ದು, ಹಾರರ್ ವಿಭಾಗದಲ್ಲಿ ತಮ್ಮದೇ ಯುನಿವರ್ಸ್‌ನ ಸೃಷ್ಟಿಸುತ್ತಿರುವ ದಿನೇಶ್ ವಿಜ್ಜನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ಧಾರೆ. ವಿಶೇಷ ಅಂದರೆ ದಿನೇಶ್ ವಿಜ್ಜನ್ ನಿರ್ಮಾಣದ ಮುಂದಿನ ಚಿತ್ರ ಥಾಮಾದಲ್ಲಿ ಕೂಡ ರಶ್ಮಿಕಾ ಮಂದಣ್ಣ ಅವರೇ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಕ್ಷಯ್ ಖನ್ನಾ ಕೂಡ ಚಿತ್ರದಲ್ಲಿ ಇದ್ದು, ಎ.ಆರ್.ರೆಹಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಅಂದ್ಹಾಗೇ ರಶ್ಮಿಕಾ ಮಂದಣ್ಣ ಅವರಿಗೆ ಆದ ಈ ಗಾಯದಿಂದ ಕೇವಲ ಸಿಕಂದರ್ ಚಿತ್ರದ ಚಿತ್ರೀಕರಣ ಮಾತ್ರ ಮುಂದಕ್ಕೆ ಹೋಗಿಲ್ಲ. ಧನುಷ್ ಅಭಿನಯದ ಕುಬೇರ ಮತ್ತು ಆಯುಶ್ಮಾನ್ ಕುರಾನ ಅಭಿನಯದ ಥಾಮಾ ಚಿತ್ರದ ಚಿತ್ರೀಕರಣಕ್ಕೆ ಕೂಡ ಬ್ರೇಕ್ ಬಿದ್ದಿದೆ. ಸದ್ಯ ರಶ್ಮಿಕಾ ಮಂದಣ್ಣ ಹೈದರಾಬಾದ್‌ದಿಂದ ಮುಂಬೈಗೆ ತೆರಳಿದ್ದು ಇಂದು ಸಂಜೆ 05-15ಕ್ಕೆ ನಡೆಯಲಿರುವ ಛಾವಾ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.


Click it and Unblock the Notifications











