ಅನುಷ್ಕಾ ಶರ್ಮಾ ಮಾಡೋ ಕೆಲಸದಿಂದ ಕೊಹ್ಲಿ ಎಷ್ಟೆಲ್ಲಾ ಕಷ್ಟ.!

By Bharath Kumar

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಖಾಸಗಿ ಜೀವನಕ್ಕಿಂತ ಬೇರೆ ಬೇರೆ ವಿಷ್ಯಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗ್ತಿದ್ದಾರೆ. ಟೀ ಇಂಡಿಯಾದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಅನುಷ್ಕಾ ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅನುಷ್ಕಾ ಮಾಡಿರೋ ಈ ಕೆಲಸದಿಂದ ಕೊಹ್ಲಿ ಮುಜಗರ ಎದುರಿಸಬೇಕಾಗಿದೆ. ಅಂದ್ಹಾಗೆ, ಈ ರೀತಿ ಘಟನೆ ಆಗ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಕೂಡ ಅನುಷ್ಕಾ ಎಡವಟ್ಟು ಮಾಡಿದ್ದಾರೆ.

ಅಷ್ಟಕ್ಕೂ, ಟೀಂ ಇಂಡಿಯಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಅನುಷ್ಕಾ ಮೇಲೆ ನೆಟ್ಟಿಗರು ಕಿಡಿಕಾರುತ್ತಿರುವುದೇಕೆ.? ಏನಾಗಿದೆ ಈ ಫೋಟೋದಿಂದ ಎಂಬುದನ್ನ ಪೂರ್ತಿ ತಿಳಿಯಲು ಈ ಸ್ಟೋರಿ ಓದಿ.....

ಕೊಹ್ಲಿ ಪತ್ನಿ ಹೋಗಿದ್ದೇಕೆ.?

ಕೊಹ್ಲಿ ಪತ್ನಿ ಹೋಗಿದ್ದೇಕೆ.?

ಸದ್ಯ, ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರ ಜೊತೆ ಪತ್ನಿಯರು ಹಾಗೂ ಗರ್ಲ್ ಫ್ರೆಂಡ್ ಯಾರೂ ಹೋಗುವಂತಿಲ್ಲ ಎಂದು ಬಿಸಿಸಿಐ ಷರತ್ತು ವಿಧಿಸಿದೆ ಎನ್ನಲಾಗಿದೆ. ಹೀಗಿದ್ದರೂ ಕೊಹ್ಲಿ ಪತ್ನಿಗೇಕೆ ಅವಕಾಶ ಮಾಡಿಕೊಡಲಾಗಿದೆ ಮತ್ತು ಬೇರೆ ಆಟಗಾರರ ಪತ್ನಿಯರು ಯಾರೊಬ್ಬರು ಅಲ್ಲಿಲ್ಲ ಯಾಕೆ ಎಂಬುದು ಮೊದಲ ಪ್ರಶ್ನೆ.?

ಗ್ರೂಫ್ ಫೋಟೋದಲ್ಲಿ ಅನುಷ್ಕಾ ಯಾಕೆ.?

ಗ್ರೂಫ್ ಫೋಟೋದಲ್ಲಿ ಅನುಷ್ಕಾ ಯಾಕೆ.?

ಲಂಡನ್ನಿನಲ್ಲಿರುವ ಭಾರತದ ರಾಯಭಾರಿ ಕಚೇರಿಯಲ್ಲಿ ಟೀಂ ಇಂಡಿಯಾ ಸದಸ್ಯರಿಗೆ ಔತಣ ಕೂಟ ಏರ್ಪಡಿಸಲಾಗಿತ್ತು. ಇದಾದ ಬಳಿಕ, ತಂಡದ ಗ್ರೂಪ್ ಫೋಟೋವೊಂದನ್ನು ಬಿಸಿಸಿಐ ಟ್ವೀಟ್ ಮಾಡಿತ್ತು. ಟೀಂ ಇಂಡಿಯಾ ಗ್ರೂಫ್ ಫೋಟೋದಲ್ಲಿ ಅನುಷ್ಕಾ ಯಾಕೆ.? ಒಂದು ವೇಳೆ ಅನುಷ್ಕಾ ಔತಣಕೂಟದಲ್ಲಿದ್ದರೂ ಗ್ರೂಫ್ ಫೋಟೋದಲ್ಲಿ ನಿಲ್ಲುವ ಅವಶ್ಯಕತೆ ಇರಲಿಲ್ಲ.

ಬಿಸಿಸಿಐ ಪೋಸ್ಟ್ ಮಾಡಬಾರದಿತ್ತು.?

ಬಿಸಿಸಿಐ ಪೋಸ್ಟ್ ಮಾಡಬಾರದಿತ್ತು.?

ಅನುಷ್ಕಾ ಶರ್ಮಾ ಟೀಂ ಇಂಡಿಯಾದ ಜೊತೆ ಇರುವ ಫೋಟೋವನ್ನ ಬಿಸಿಸಿಐ ತನ್ನ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡುವಾಗ ಯೋಚನೆ ಮಾಡಬೇಕಿತ್ತು. ಅದಕ್ಕೆ ಹಾಕಿರುವ ಅಡಿಬರಹರದಲ್ಲಾದ್ರೂ ಬದಲಾವಣೆ ಮಾಡಬಹುದಿತ್ತು. ನಟಿ ಜೊತೆ ಟೀಂ ಇಂಡಿಯಾ ಅಂತಾನಾದರೂ ಹಾಕಬಹುದಿತ್ತು. ಆದ್ರೆ, ಇದು ಟೀಂ ಇಂಡಿಯಾದ ಗ್ರೂಫ್ ಫೋಟೋ ಅಂತಾ ಹಾಕಿದ್ದು, ಇದರಲ್ಲಿ ಅನುಷ್ಕಾ ಇರೋದು ಎಲ್ಲರಿಗೂ ಗೊಂದಲ ಉಂಟು ಮಾಡಿದೆ.

ಕಸ ಎಸೆದಿದ್ದಕ್ಕೆ ಪಾಠ ಹೇಳಿದ್ದರು

ಕಸ ಎಸೆದಿದ್ದಕ್ಕೆ ಪಾಠ ಹೇಳಿದ್ದರು

ಕಾರ್ ನಲ್ಲಿ ಚಲಿಸುವಾಗ ಪಕ್ಕದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಕಸ ಹೊರಗೆ ಹಾಕ್ತಾನೆ. ಇದಕ್ಕೆ ಕೋಪಗೊಂಡ ಅನುಷ್ಕಾ ವಿಡಿಯೋ ಮಾಡ್ಕೊಂಡು ಆತನಿಗೆ ಕ್ಲಾಸ್ ತಗೊಳ್ತಾರೆ. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ಘಟನೆ ನಡೆದಾಗಲೂ ಕೊಹ್ಲಿ, ಅನುಷ್ಕಾ ಜೊತೆಯಲ್ಲೇ ಇದ್ದರು. ಕೊಹ್ಲಿ ಯಾಕೆ ಸುಮ್ಮಿನಿದ್ದರು ಎಂದು ನೆಟ್ಟಿಗರು ಪ್ರಶ್ನಿಸಿದ್ದರು.

ಆರ್.ಸಿ.ಬಿ ಪಂದ್ಯ ಸೋತಾಗ.!

ಆರ್.ಸಿ.ಬಿ ಪಂದ್ಯ ಸೋತಾಗ.!

ಇನ್ನು ಕಳೆದ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಸತತವಾಗಿ ಸೋಲು ಕಂಡಿತ್ತು. ಆರ್.ಸಿ.ಬಿ ಸೋತ ಬಹುತೇಕ ಪಂದ್ಯಗಳ ವೀಕ್ಷಣೆಗೆ ಅನುಷ್ಕಾ ಬಂದಿದ್ದರು. ಹಾಗಾಗಿ, ಅನುಷ್ಕಾ ಬರುತ್ತಿರುವುದೇ ಕೊಹ್ಲಿ ಸೋಲಿಗೆ ಕಾರಣ ಎಂದೆಲ್ಲಾ ನೆಟ್ಟಿಗರು ಟೀಕಿಸಿದ್ದರು.

More from Filmibeat

English summary
anushka sharma The presence of captain Virat Kohli's wife and Bollywood actress anushka sharma in photograph from the indian cricket taem official dinner hosted by high commintion of londan has invited criticism from fans of socail mdeia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X