For Quick Alerts
  ALLOW NOTIFICATIONS  
  For Daily Alerts

  'ತೂಫಾನ್'ಗಾಗಿ 69 ರಿಂದ 85 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದ ಫರ್ಹಾನ್: ಅಚ್ಚರಿ ಮೂಡಿಸಿದ ಈ 3 ಶೇಡ್

  |

  ಫರ್ಹಾನ್ ಅಖ್ತಾರ್ ಬಾಲಿವುಡ್ ಅದ್ಭುತ ಮತ್ತು ಪ್ರತಿಭಾವಂತ ನಟ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಭಾಗ್ ಮಿಲ್ಖಾ ಭಾಗ್ ಮತ್ತು ಇತ್ತೀಚಿಗೆ ಬಿಡುಗಡೆಯಾದ ತೂಫಾನ್. ವಿಭಿನ್ನ ಪಾತ್ರಗಳ ಮೂಲಕ ಚಿತ್ರಪ್ರೇಕ್ಷಕರನ್ನು ರಂಜಿಸುತ್ತಿರುವ ಫರ್ಹಾನ್ ತೂಫಾನ್ ಗಾಗಿ ಸಾಕಷ್ಟು ಶ್ರಮಿಸಿದ್ದಾರೆ, ಕಷ್ಟಪಟ್ಟಿದ್ದಾರೆ. ಅವರ ಶ್ರಮ ಸಿನಿಮಾದಲ್ಲಿ ಎದ್ದು ಕಾಣುತ್ತಿದೆ.

  ಪ್ರತಿ ಪಾತ್ರ ಮಾಡುವಾಗಲು ಫರ್ಹಾನ್ ಸಾಕಷ್ಟು ತಯಾರಿ ನಡೆಸುತ್ತಾರೆ. ಅದರಲ್ಲೂ 'ತೂಫಾನ್' ಬಾಕ್ಸಿಂಗ್ ಆಧಾರಿತ ಸಿನಿಮಾವಾಗಿದ್ದರಿಂದ ಶ್ರಮ ಸ್ವಲ್ಪ ಜಾಸ್ತಿನೆ ಹಾಕಿದ್ದಾರೆ. ಚಿತ್ರದಲ್ಲಿ ಫರ್ಹಾನ್ ಅಜೀಜ್ ಅಲಿ ಎನ್ನುವ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕೆ ನ್ಯಾಯ ಒದಗಿಸಲು ಫರ್ಹಾನ್ ತುಂಬಾ ಕಷ್ಟಪಟ್ಟಿದ್ದು ಸಿಕ್ಕಾಪಟ್ಟೆ ತೂಕ ಕೂಡ ಹೆಚ್ಚಿಸಿಕೊಂಡಿದ್ದರು. ಮುಂದೆ ಓದಿ...

  3 ಶೇಡ್ ನಲ್ಲಿ ಕಾಣಿಸಿಕೊಂಡ ಫರ್ಹಾನ್

  3 ಶೇಡ್ ನಲ್ಲಿ ಕಾಣಿಸಿಕೊಂಡ ಫರ್ಹಾನ್

  ತೂಫಾನ್ ಸಿನಿಮಾದಲ್ಲಿ ಫರ್ಹಾನ್ ಅಖ್ತಾರ್ 3 ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. 3 ಶೇಡ್‌ನಲ್ಲೂ ವಿಭಿನ್ನ ದೇಹ ತೂಕ ಹೊಂದಿದ್ದಾರೆ. ಫರ್ಹಾನ್ ಅಖ್ತಾರ್ ಈ ಸಾಹಸ ಕಂಡು ಹೃತಿಕ್ ರೋಷನ್ ಸೇರಿದಂತೆ ಬಾಲಿವುಡ್‌ನ ಅನೇಕ ಗಣ್ಯರು ಅಚ್ಚರಿ ಪಟ್ಟಿದ್ದಾರೆ.

  69, 85 ಮತ್ತು 76 ಕೆ.ಜಿ ದೇಹ ಪರಿವರ್ತನೆ

  69, 85 ಮತ್ತು 76 ಕೆ.ಜಿ ದೇಹ ಪರಿವರ್ತನೆ

  ಮೂರು ಶೇಡ್ ಗಳಲ್ಲಿ ಕಾಣಿಸಿಕೊಂಡ ಫೋಟೋವನ್ನು ಫರ್ಹಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 69 ಕೆ.ಜಿಯಿಂದ ಬರೋಬ್ಬರಿ 85 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದರು. ಬಳಿಕ ಮತ್ತೆ 76 ಕೆ.ಜಿಗೆ ತೂಕ ಇಳಿಸಿಕೊಂಡಿದ್ದಾರೆ. 6 ವಾರದಲ್ಲಿ 15 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದರು. ಈ ಪರಿವರ್ತನೆಯ ಫೋಟೋಗಳನ್ನು ಫರ್ಹಾನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಫೋಟೋ ಶೇರ್ ಮಾಡಿ ಅಖ್ತಾರ್ ಹೇಳಿದ್ದೇನು?

  ಫೋಟೋ ಶೇರ್ ಮಾಡಿ ಅಖ್ತಾರ್ ಹೇಳಿದ್ದೇನು?

  ಪೋಟೋ ಶೇರ್ ಮಾಡಿ, "ಅಜ್ಜು ಅಲಿಯಾಸ್ ಅಜೀಜ್ ಅಲಿ ಅಲಿಯಾಸ್ ತೂಫಾನ್‌ನ ಹಲವು ಆಕಾರಗಳು. ಎಂಥ ಅದ್ಭುತವಾದ ಪಯಣ. 18 ತಿಂಗಳ ಪಟ್ಟುಹಿಡಿದ ಕೆಲಸ. ಪ್ರತಿ ಹನಿ ಬೆವರು, ಸ್ನಾಯು ನೋವು ಮತ್ತು ತೂಕ ಹೆಚ್ಚಳ ಎಲ್ಲ ಮುಗಿಯಿತು. ತೆರೆಮರೆಯ ಸ್ಟಾರ್" ಎಂದು ಬರೆದು ಫಿಟ್ನೆಸ್ ಟ್ರೇನರ್ ಹೆಸರುಗಳನ್ನು ಟ್ಯಾಗ್ ಮಾಡಿದ್ದಾರೆ.

  ಹೃತಿಕ್ ರೋಷನ್ ಮೆಚ್ಚುಗೆ

  ಹೃತಿಕ್ ರೋಷನ್ ಮೆಚ್ಚುಗೆ

  ತೂಫಾನ್ ಪ್ರಯತ್ನ, ಶ್ರಮಕ್ಕೆ ಬಾಲಿವುಡ್ ಗಣ್ಯರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಫರ್ಹಾನ್ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿ ಶ್ಲಾಘಿಸುತ್ತಿದ್ದಾರೆ. ನಟ ಹೃತಿಕ್ ರೋಷನ್ ಕಾಮೆಂಟ್ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. 'ಮ್ಯಾನ್..! 69 ರಿಂದ 85? ಹುಚ್ಚುತನ' ಎಂದು ಹೇಳಿದ್ದಾರೆ.

  ಚಿತ್ರಕ್ಕಾಗಿ ಸಾಕಷ್ಟು ಶ್ರಮಿಸಿರುವ ಫರ್ಹಾನ್

  ಚಿತ್ರಕ್ಕಾಗಿ ಸಾಕಷ್ಟು ಶ್ರಮಿಸಿರುವ ಫರ್ಹಾನ್

  ತೂಫಾನ್ ಸಿನಿಮಾ ಜುಲೈ 16ಕ್ಕೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದೆ. ಈ ಮೊದಲು ಫರ್ಹಾನ್ ಚಿತ್ರಕ್ಕಾಗಿ ನಡೆಸಿದ ತಯಾರಿಯನ್ನು ಹಂಚಿಕೊಂಡಿದ್ದರು. ಕಠಿಣ ತರಬೇತಿ ಮತ್ತು ಬಾಕ್ಸರ್ ಆಗಿ ಬದಲಾಗಲು ಫರ್ಹಾನ್ ಹಾಕಿದ ಶ್ರಮದ ವಿಡಿಯೋವನ್ನು ಶೇರ್ ಮಾಡಿದ್ದರು. ಇನ್ನು ಚಿತ್ರದಲ್ಲಿ ನಾಯಕಿಯಾಗಿ ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪರೇಶ್ ರಾವಲ್, ಸುಪ್ರಿಯಾ ಪಾಠಕ್ ಕೂಡ ಪ್ರಮುಖ ಆಕರ್ಷಣೆ.

  ಓಂಪ್ರಕಾಶ್ ಮೆಹ್ರಾ ನಿರ್ದೇಶನ

  ಓಂಪ್ರಕಾಶ್ ಮೆಹ್ರಾ ನಿರ್ದೇಶನ

  ಅಂದಹಾಗೆ ನಿರ್ದೇಶಕ ಓಂಪ್ರಕಾಶ್ ಮೆಹ್ರಾ ಮತ್ತು ಫರ್ಹಾನ್ ಅಖ್ತಾರ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. 2013ರಲ್ಲಿ ಮಿಲ್ಖಾ ಸಿಂಗ್ ಜೀವನಾಧಾರಿತ ಸಿನಿಮಾ 'ಭಾಗ್ ಮಿಲ್ಖಾ ಭಾಗ್' ಚಿತ್ರಕ್ಕೂ ಓಂಪ್ರಕಾಶ್ ಮೆಹ್ರಾ ಆಕ್ಷನ್ ಕಟ್ ಹೇಳಿದ್ದರು. ಮಿಲ್ಖಾ ಸಿಂಗ್ ಆಗಿ ಫರ್ಹಾನ್ ಎಲ್ಲರ ಮನಗೆದ್ದಿದ್ದರು. ಇದೀಗ ಮತ್ತೊಮ್ಮೆ ತೂಫಾನ್ ಮೂಲಕ ಮೋಡಿ ಮಾಡಿದ್ದಾರೆ.

  English summary
  Actor Farhan Akhtar's body transformation for Toofaan movie impressed Hrithik Roshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X