For Quick Alerts
  ALLOW NOTIFICATIONS  
  For Daily Alerts

  ರೈತರ ಪ್ರತಿಭಟನೆ: ಅಜಯ್ ದೇವಗನ್ ಕಾರು ಅಡ್ಡಗಟ್ಟಿದ ವ್ಯಕ್ತಿ ಬಂಧನ

  |

  ರೈತರ ಪ್ರತಿಭಟನೆ ಕುರಿತು ತಮ್ಮ ನಿರ್ಧಾರ ತಿಳಿಸಿ ಎಂದು ಆಗ್ರಹಿಸಿ ಬಾಲಿವುಡ್ ನಟ ಅಜಯ್ ದೇವಗನ್ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ.

  ಚಿತ್ರೀಕರಣ ಕಾರಣದಿಂದ ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮುಂಬೈನ ಫಿಲಂ ಸಿಟಿ ಕಡೆ ಹೋಗುತ್ತಿದ್ದ ಅಜಯ್ ದೇವಗನ್ ಕಾರನ್ನು ನಿಲ್ಲಿಸಿ ರೈತರ ಪ್ರತಿಭಟನೆ ಬಗ್ಗೆ ಮಾತಾಡಿ ಎಂದು ವ್ಯಕ್ತಿಯೊಬ್ಬ ಒತ್ತಡ ಹೇರಿದ ಎಂದು ತಿಳಿದು ಬಂದಿದೆ.

  ಕಾಮಾಟಿಪುರದ ನಿಜ ಕತೆಗೆ ಅಜಯ್ ದೇವಗನ್ ಎಂಟ್ರಿಕಾಮಾಟಿಪುರದ ನಿಜ ಕತೆಗೆ ಅಜಯ್ ದೇವಗನ್ ಎಂಟ್ರಿ

  ರಾಷ್ಟ್ರ ರಾಜಧಾನಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಓರ್ವ ಪಂಜಾಬಿಯಾಗಿ ರೈತರ ಕುರಿತು ಹೇಳಿಕೆ ಕೊಟ್ಟಿಲ್ಲ. ನೀನು ಪಂಜಾಬಿ ಶತ್ರು ಎಂದು ಅಜಯ್ ದೇವಗನ್ ಅವರನ್ನು ನಿಂದಿಸಲಾಗಿದೆಯಂತೆ.

  ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಜಯ್ ದೇವಗನ್ ಅವರನ್ನು ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಂತರ ಅಜಯ್ ದೇವಗನ್ ಅವರನ್ನು ಮುಂಬೈ ಫಿಲಂ ಸಿಟಿವರೆಗೂ ಸುರಕ್ಷಿತವಾಗಿ ಕರೆದುಕೊಂಡು ಬಿಡಲಾಗಿದೆ.

  ಅಜಯ್ ದೇವಗನ್ ಕಾರನ್ನು ನಿಲ್ಲಿಸಿದ ವ್ಯಕ್ತಿಯನ್ನು ರಾಜದೀಪ್ ಸಿಂಗ್ ಎಂದು ಗುರುತಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಐಪಿಸಿ ಸೆಕ್ಷನ್ 341, 504, 506 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

  ರೈತರ ಪ್ರತಿಭಟನೆ ಕುರಿತು ಅಂತಾರಾಷ್ಟ್ರೀಯ ಸೆಲೆಬ್ರಿಟಿ ರಿಹಾನ್ನಾ ಟ್ವೀಟ್ ಮಾಡಿದ ವೇಳೆ ಅಜಯ್ ದೇವಗನ್ ಟ್ವಿಟ್ಟರ್‌ನಲ್ಲಿ ರಿಹಾನ್ನಾ ಟ್ವೀಟ್ ಖಂಡಿಸಿದ್ದರು. ಇದು ಸಹಜವಾಗಿ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.

  ತೆಲುಗು ನೆಲದಲ್ಲಿ ಭರ್ಜರಿಯಾಗಿ ಅಬ್ಬರಿಸಲಿದ್ದಾರೆ ರಾಕಿ ಭಾಯ್ | KGF 2 | PrashanthNeel | Yash
  English summary
  Farmers Protest: Man Arrested in Mumbai for Stopping Ajay Devgn’s Car.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X