ಪಾತ್ರ ಬೇಕೆಂದರೆ ಮಂಚ ಹಂಚಿಕೊಳ್ಳಬೇಕು ಎಂದಿದ್ದರಂತೆ ದಂಗಲ್ ನಟಿಗೆ!

'ದಂಗಲ್' ಸಿನಿಮಾದಲ್ಲಿ ಕುಸ್ತಿ ಪಟುವಾಗಿ ಜನ-ಮನ ಗೆದ್ದ ನಟಿ ಫಾತಿಮಾ ಸನಾ ಶೇಖ್. ಬಬ್ಲಿ ಗರ್ಲ್, ಗ್ಲಾಮರಸ್ ಪಾತ್ರಗಳು ಪಾತ್ರವಲ್ಲ, ಎಲ್ಲಾ ರೀತಿಯ ಪಾತ್ರಗಳನ್ನೂ ಸಹ ಮಾಡಬಲ್ಲೆ ಎಂದು ತೋರಿಸಿಕೊಟ್ಟರು.

ಬಾಲಿವುಡ್ ಬೇಡುವ ಬಿಳಿ ತೊಗಲಿನ, ಸಪೂರ ಮೈಮಾಟದ ಚೆಲುವೆ ಆಗಿದ್ದರೂ ಸಹ ಫಾತಿಮಾ ಸನಾ ಶೇಖ್ ಸಿನಿ ಉದ್ಯಮದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಹಲವು ಮೂದಲಿಕೆಗಳು, ನಿರಾಕರಣೆಗಳು ಜೊತೆಗೆ ಪಾತ್ರಕ್ಕೆ ಪಲ್ಲಂಗ ಏರುವ ಬೇಡಿಕೆಯನ್ನೂ ಸಹ ಎದುರಿಸಿದ್ದಾರಂತೆ.

ಈ ಬಗ್ಗೆ ಧೈರ್ಯವಾಗಿ ಮಾತನಾಡಿರುವ ಫಾತಿಮಾ ಸನಾ ಶೇಖ್. ತಾನು ಎದುರಿಸಿದ ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಅನುಭವವನ್ನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸಣ್ಣ ವಯಸ್ಸಿನಲ್ಲಿಯೇ ತಾವೆದುರಿಸಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆಯೂ ಮಾತನಾಡಿದ್ದಾರೆ.

'ಪಾತ್ರ ಬೇಕೆಂದರೆ 'ಕಾಂಪ್ರೊಮೈಸ್' ಆಗಬೇಕು'

'ಪಾತ್ರ ಬೇಕೆಂದರೆ 'ಕಾಂಪ್ರೊಮೈಸ್' ಆಗಬೇಕು'

'ನಿನಗೆ ಪಾತ್ರ ಸಿಗಬೇಕೆಂದರೆ ಸೆಕ್ಸ್‌ ಗೆ ಒಪ್ಪಿಕೊಳ್ಳಬೇಕು' ಎಂದು ನೇರವಾಗಿ ಹೇಳಲಾಗಿತ್ತಂತೆ ಫಾತಿಮಾ ಸನಾ ಶೇಖ್‌ಗೆ. ಇದೇ ಕಾರಣಕ್ಕೆ ಹಲವು ಸಿನಿಮಾಗಳನ್ನು ತಪ್ಪಿಸಿಕೊಂಡರಂತೆ ಸನಾ.

ಆಯ್ಕೆ ಆಗಿದ್ದ ಸಿನಿಮಾಗಳಿಂದ ಹೊರದಬ್ಬಿಸಿಕೊಂಡಿದ್ದೇನೆ: ಸನಾ

ಆಯ್ಕೆ ಆಗಿದ್ದ ಸಿನಿಮಾಗಳಿಂದ ಹೊರದಬ್ಬಿಸಿಕೊಂಡಿದ್ದೇನೆ: ಸನಾ

ಎಷ್ಟೋ ಬಾರಿ ನಾನು ಆಯ್ಕೆ ಆಗಿದ್ದ ಸಿನಿಮಾಗಳಿಂದ ನನ್ನ ಹೊರಗೆ ಕಳುಹಿಸಲಾಗಿದೆ. ಯಾರದ್ದೋ ಮಾತು ಕೇಳಿ, ಅಥವಾ ಬೇರೆ ಯಾರೋ ನಟಿ ಅವರು ಹೇಳಿದ್ದನ್ನು ಒಪ್ಪಿದ್ದಕ್ಕೆ ನನ್ನ ಪಾತ್ರವನ್ನು ಅವರಿಗೆ ನೀಡಿದ ಉದಾಹರಣೆಗಳೂ ಇವೆ ಎಂದಿದ್ದಾರೆ ಸನಾ ಶೇಖ್.

ಬಾಲ್ಯದಲ್ಲಿಯೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ: ಸನಾ

ಬಾಲ್ಯದಲ್ಲಿಯೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ: ಸನಾ

ಬಾಲ್ಯದಲ್ಲಿ ಅನುಭವಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆಯೂ ಮಾತನಾಡಿರುವ ಸನಾ ಶೇಖ್. ನಾನು ಸಣ್ಣ ಹುಡುಗಿಯಾಗಿದ್ದಾಗಲೇ ಲೈಂಗಿನ ದೌರ್ಜನ್ಯಕ್ಕೆ ಒಳಗಾಗಿದ್ದೆ. ಆದರೆ ಆಗೆಲ್ಲಾ ಈ ರೀತಿಯ ವಿಷಯಗಳನ್ನು ಬಹಿರಂಗವಾಗಿ ಯಾರೂ ಹೇಳುತ್ತಿರಲಿಲ್ಲ, ಆದರೆ ಈಗ ಸಮಾಜ ಬದಲಾಗಿದೆ ಎಂದಿದ್ದಾರೆ ಸನಾ.

Recommended Video

ಮುನಿರತ್ನ ಬೆಂಬಲಕ್ಕೆ ಅಣ್ಣ ದರ್ಶನ್ ಜೊತೆಗೆ ಬಂದ ಅಮೂಲ್ಯ | Darshan | Amulya | Munirathna
ಹಲವು ಸಿನಿಮಾಗಳಲ್ಲಿ ಫಾತಿಮಾ ಬ್ಯುಸಿ

ಹಲವು ಸಿನಿಮಾಗಳಲ್ಲಿ ಫಾತಿಮಾ ಬ್ಯುಸಿ

ಫಾತಿಮಾ, ಅನುರಾಗ್ ಬಸು ನಿರ್ದೇಶನದ ಲೂಡೊ, ಲೈಫ್ ಇನ್‌ ಮೆಟ್ರೋ ಸಿನಿಮಾದ ಎರಡನೇ ಭಾಗ, ಸೈಫ್ ಅಲಿ ಖಾನ್ ನಟನೆಯ ಭೂತ್ ಪೊಲೀಸ್ ಮತ್ತು ಸೂರಜ್ ಪೆ ಮಂಗಲ್ ಭಾರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Dangal actress Fatima Sana Shaikh opened up about her casting couch experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X