ಎಲ್ಲದಕ್ಕೂ ರೆಡಿನಾ ಎಂದು ತೆಲುಗು ಚಿತ್ರರಂಗದ ಆ ವ್ಯಕ್ತಿ ನನಗೆ ನೇರವಾಗಿಯೇ ಕೇಳಿದ್ದ, ಬಾಂಬ್ ಎಸೆದ ಅಮೀರ್ ಖಾನ್ ನಟಿ..!
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ದ ಮನಸ್ಸುಗಳು ಖೆಡ್ಡಾ ಎಂಬ ಅರಿವು ಇದ್ದರೂ ಬಿದ್ದು ಏಳುವ ಸೀಚುವೇಷನ್ನುಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಒದ್ದು ನಡೆದ ಪ್ರಸಂಗಗಳೂ ಇವೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಇದಕ್ಕೆ ಫಾತಿಮಾ ಸನಾ ಶೇಖ್ ಸದ್ಯದ ಉದಾಹರಣೆ.
ಹೌದು, ಫಾತಿಮಾ ಸನಾ ಶೇಖ್.. ಅಮೀರ್ ಖಾನ್ ಅಭಿನಯದ ದಂಗಲ್‌ನ ಧಾಕಡ್ ಚೆಲುವೆ. ಗೀತಾ ಪೋಗಟ್ ಪಾತ್ರವನ್ನುಅಕ್ಷರಶಃ ಜೀವಿಸಿದ್ದ ಫಾತಿಮಾ ಸದ್ಯ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಾಲಿವುಡ್ ಅಲ್ಲ ಪಾತ್ರದ ಆಮಿಷವೊಡ್ಡಿ ಮಂಚಕ್ಕೇರುವಂತೆ ನನಗೆ ದಕ್ಷಿಣ ಭಾರತೀಯ ಚಿತ್ರರಂಗದವರು ಎಂದು ಹೇಳಿದ್ದಾರೆ. ಈ ಮೂಲಕ ಸೌತ್ ಫಿಲ್ಮ್ ಇಂಡಸ್ಟ್ರೀಯ ಮೇಲೆ ಬಾಂಬ್ ಎಸೆದಿದ್ದಾರೆ ಫಾತಿಮಾ ಸನಾ ಶೇಖ್.

ಬಾಲಿವುಡ್ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಫಾತಿಮಾ ದಕ್ಷಿಣದ ಚಿತ್ರಗಳಿಗೆ ಬಣ್ಣ ಹಚ್ಚಿದರೆ ಹಿಂದಿ ಚಿತ್ರರಂಗದಲ್ಲಿ ಅವಕಾಶ ಸಿಗುತ್ತೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಹೀಗಾಗಿಯೇ ನಾನು ಸೌತ್ ಕಡೆ ಮುಖ ಮಾಡಿದ್ದೆ, ದಕ್ಷಿಣ ಭಾರತದ ಚಿತ್ರಗಳಲ್ಲಿ ಅಭಿನಯಿಸುವ ಮನಸ್ಸು ಮಾಡಿದ್ದೆ, ಇದಕ್ಕೆ ಪೂರಕವಾಗಿ ನನ್ನ ಆಪ್ತರೊಬ್ಬರು ಹೈದರಾಬಾದ್‌ನಲ್ಲಿ ಚಿತ್ರವೊಂದರ ಆಡಿಷನ್ ನಡೆಯಲಿದೆ, ಪ್ರೊಫೈಲ್ ಕಳಿಸಿ ನೋಡಿ ಎಂದು ಸಲಹೆ ನೀಡಿದರು, ಅವರು ಹೇಳಿದಂತೆಯೇ ನಾನು ಕೂಡ ನನ್ನ ಫೋಟೊಗಳನ್ನು ಕಳಿಸಿದೆ ಎಂದು ಹೇಳಿದ್ದಾರೆ.
ಮುಂದುವರೆದು ಆ ನಂತರ ವ್ಯಕ್ತಿಯೊಬ್ಬ ನನಗೆ ಕರೆ ಮಾಡಿ ಈ ಪಾತ್ರಕ್ಕೆ ನೀವು ಏನು ಬೇಕಾದರೂ ಮಾಡ್ತೀರಾ ? ಎಂಬ ಪ್ರಶ್ನೆ ಕೇಳಿದ ಎಂದಿರುವ ಫಾತಿಮಾ ಈ ಪ್ರಶ್ನೆ ಕೇಳಿದ ಕೂಡಲೇ ನನಗೆ ಅವನ ಉದ್ದೇಶ ಅರ್ಥವಾಗಿತ್ತು ಆದರೂ ಕೂಡ ನನಗೇನು ಗೊತ್ತಾಗಲಿಲ್ಲ ಎಂಬಂತೆ ನಾನು ಪಾತ್ರಕ್ಕೆ ಬೇಕಾದ ತಯಾರಿಗಳನ್ನು ನಾನು ಮಾಡಿಕೊಳ್ಳುತ್ತೇನೆ ಪಾತ್ರಕ್ಕೆ ಜೀವ ತುಂಬ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದೆ ಎಂದಿದ್ದಾರೆ. ಆ ನಂತರ ಕೂಡ ಅವನು ಮತ್ತದೇ ಪ್ರಶ್ನೆ ಏನು ಬೇಕಾದರೂ ಮಾಡಲು ತಯಾರಿದ್ದೀರಾ ಎಂದು ಕೇಳುತ್ತಲೇ ಇದ್ದ ಅವನು ಎಷ್ಟು ಕೆಳ ಮಟ್ಟಕ್ಕೆ ಇಳಿಯುತ್ತಾನೆ ಎಂದು ನೋಡೋಣ ಎಂದು ನಾನು ನಿರ್ಧಾರ ಮಾಡಿ ನಾನು ಮತ್ತದೇ ಉತ್ತರವನ್ನು ರಿಫೀಟ್ ಮಾಡಲು ಶುರುಮಾಡಿದೆ ಎಂದಿರುವ ಫಾತಿಮಾ ಕೊನೆ ಕೊನೆಗೆ ಅವನಿಗೆ ಕಿರಿಕಿರಿಯಾಗಿ ಅವನೇ ಫೋನ್ ಕಟ್ ಮಾಡಿದ ಎಂದು ಹೇಳಿದ್ದಾರೆ.
ಇನ್ನು ಅದೊಂದು ದಿನ ಹೈದರಾಬಾದ್‌ನಲ್ಲಿ ಪಾರ್ಟಿಯೊಂದರಲ್ಲಿ ನಾನು ಭಾಗವಹಿಸಿದ್ದೆ ಅಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ನಿರ್ಮಾಪಕರು ಇದ್ದರು. ಅಲ್ಲಿ ಕೂಡ ಪಾತ್ರಕ್ಕಾಗಿ ಪಲ್ಲಂಗದ ಕುರಿತ ಚರ್ಚೆಯನ್ನೇ ನಿರ್ಮಾಪಕರು ಮಾಡಿದರು ಎಂದು ಹೇಳಿರುವ ಫಾತಿಮಾ ನೇರವಾಗಿ ನಿಮ್ಮ ಬಳಿ ಅವರು ಕೇಳುವುದಿಲ್ಲ ಆದರೆ ಪರೋಕ್ಷವಾಗಿ ಈ ಕುರಿತು ಅವರು ಮಾತನಾಡುತ್ತಾರೆ, ಮಂಚಕ್ಕೇರಿದರೆ ಪಾತ್ರ ಎನ್ನುವ ಸುಳಿವನ್ನು ನೀಡುತ್ತಾರೆ ಎಂದು ಹೇಳಿದ್ದಾರೆ. ನಾನು ಅಲ್ಲಿನವರನ್ನು ನೋಡಿದಂತೆ ನಟಿಯರ ಜೊತೆ ಅಲ್ಲಿ ಮಂಚಕ್ಕೇರುವುದೇ ಚಿಂತೆ ಬಹುತೇಕರನ್ನು ಕಾಡುತ್ತೆ ಎಂದು ಹೇಳಿದ್ದಾರೆ. ಹಾಗಂಥ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ಅಳೆಯುವುದು ಕೂಡ ತಪ್ಪು ಎಂದಿದ್ದಾರೆ ಫಾತಿಮಾ ಸನಾ ಶೇಖ್. ಸದ್ಯಕ್ಕೆ ಫಾತಿಮಾ ಮಾತನಾಡಿದ ಮಾತಿನ ಬಗ್ಗೆ ತೆಲುಗು ಉದ್ಯಮದಲ್ಲಿ ವ್ಯಾಪಕವಾದ ಚರ್ಚೆ ನಡೆಯುತ್ತಿದೆ.


Click it and Unblock the Notifications











