For Quick Alerts
  ALLOW NOTIFICATIONS  
  For Daily Alerts

  'ಲಿಪ್‌ಸ್ಟಿಕ್' ಗೆ ಎದುರಾಗಿದ್ದ ಕಂಟಕಕ್ಕೆ ಕೊನೆಗೂ ಮುಕ್ತಿ

  By Suneel
  |

  ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ(ಸಿಬಿಎಫ್ ಸಿ) ಪ್ರಮಾಣ ಪತ್ರ ಪಡೆಯುವ ಹಿನ್ನೆಲೆಯಲ್ಲಿ ತೀವ್ರ ವಿವಾದ ಸೃಷ್ಟಿಸಿರುವ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರಕ್ಕೆ ಎದುರಾಗಿದ್ದ ಕಂಟಕವೀಗ ಮುಕ್ತಾಯಗೊಂಡಿದೆ.

  ಲಾಸ್ ಏಂಜಲೀಸ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಕ್ಕೆ ಆಯ್ಕೆ ಆಗಿ ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದ್ದ ಅಲಂಕೃತ ಶ್ರೀವತ್ಸವ ನಿರ್ದೇಶನದ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರಕ್ಕೆ ಸಿಬಿಎಫ್ ಸಿ ಅಧ್ಯಕ್ಷ ಪಹ್ಲಜ್ ನಿಹಲಾನಿ ರವರು ಪ್ರಮಾಣ ಪತ್ರ ನೀಡಲು ತಿರಸ್ಕರಿಸಿದ್ದರು. ಇದೇ ಚಿತ್ರಕ್ಕೆ ಈಗ 'ಎ' ಪ್ರಮಾಣ ಪತ್ರ ನೀಡುವಂತೆ ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ಮಂಡಳಿ(ಎಫ್ ಸಿಎಟಿ). ಸಿಬಿಎಫ್ ಸಿಗೆ ನಿರ್ದೇಶನ ನೀಡಿದೆ.[ಭಾರತದಲ್ಲಿ ಅವಮಾನಗೊಂಡ ಚಿತ್ರಕ್ಕೆ ವಿದೇಶದಲ್ಲಿ ಸನ್ಮಾನ]

  'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರದ ನಿರ್ಮಾಪಕ ಪ್ರಕಾಶ್ ಝಾ ಮತ್ತು ನಿರ್ದೇಶಕಿ ಅಲಂಕೃತ ಶ್ರೀವತ್ಸವ ರವರು ಸಿಬಿಎಫ್ ಸಿ ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದ ಕಾರಣ, ಭಾರತದಲ್ಲಿ ಚಿತ್ರ ಬಿಡುಗಡೆಗೆ ಪ್ರಮಾಣ ಪತ್ರಕ್ಕಾಗಿ ಎಫ್ ಸಿಎಟಿ ಮೋರೆ ಹೋಗಿದ್ದರು. ಎಫ್ ಸಿಎಟಿ ಈಗ ಚಿತ್ರದ ಉದ್ದೇಶಕ್ಕೆ ಯಾವುದೇ ತೊಂದರೆಯಾಗದಂತೆ ಕೆಲವು ದೃಶ್ಯಗಳನ್ನು ಮಾತ್ರ ತೆಗೆದು 'ಎ' ಪ್ರಮಾಣ ಪತ್ರ ನೀಡುವಂತೆ ಸಿಬಿಎಫ್ ಸಿ ಗೆ ಆದೇಶ ನೀಡಿದೆ.

  ಅಂದಹಾಗೆ ಭಾರತದಲ್ಲಿ ಪ್ರದರ್ಶನಕ್ಕೆ ತಿರಸ್ಕರಿಸಲ್ಪಟ್ಟ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರ, ಹಾಲಿವುಡ್ ಫಾರಿನ್ ಪ್ರೆಸ್ ಅಸೋಶಿಯೇಷನ್(ಎಚ್ಎಫ್‌ಪಿಎ) ವತಿಯಿಂದ, ಲಾಸ್ ಏಂಜಲೀಸ್ ನಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಅಧಿಕೃತವಾಗಿ ಎಂಟ್ರಿ ಪಡೆದಿದೆ.

  English summary
  The Film Certification Appellate Tribunal (FCAT) has directed the Central Board of Film Certification (CBFC) to grant an ‘A certificate to Lipstick Under My Burkha, which was denied a certificate for its sexual content earlier this year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X