ಫ್ಯಾನ್ ಪೇಜ್ ನಡೆಸುತ್ತಿದ್ದವನಿಂದಲೇ ಡೀಪ್‌ಫೇಕ್ ವೀಡಿಯೊ: ಆರೋಪಿ ಬಂಧನಕ್ಕೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಕಳೆದ ವರ್ಷ ನವೆಂಬರ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಸಕತ್ ಸದ್ದು ಮಾಡಿತ್ತು. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಈಗ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ನಟಿ ರಶ್ಮಿಕಾ ಮಂದಣ್ಣ ಶನಿವಾರ ದೆಹಲಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಆಂಧ್ರಪ್ರದೇಶದ ಈಮನಿ ನವೀನ್ ಆರೋಪಿಯಾಗಿದ್ದು, ಇವರೇ ಡೀಪ್‌ಫೇಕ್ ವೀಡಿಯೊದ ಹಿಂದಿನ ಮಾಸ್ಟರ್‌ಮೈಂಡ್ ಎಂದು ಹೇಳಲಾಗಿದೆ. ಪ್ರಕರಣ ಭೇದಿಸಿದ ಮತ್ತು ತನ್ನನ್ನು ಬೆಂಬಲಿಸಿದವರಿಗೆ ಧನ್ಯವಾದ ಹೇಳಿರುವ ನಟಿ ರಶ್ಮಿಕಾ ಮಂದಣ್ಣ "ನಿಜವಾಗಿಯೂ ಕೃತಜ್ಞಳಾಗಿದ್ದೇನೆ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

 Feeling truly grateful: Actress Rashmika Mandanna thanks police for deepfake video accuseds arrest

ಡೀಪ್‌ಫೇಕ್ ವಿಡಿಯೋ ಆರೋಪಿ ಬಂಧನ; ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

ನಟಿ ರಶ್ಮಿಕಾ ಮಂದಣ್ಣ ತಮ್ಮ ಟ್ವಿಟರ್‌ನಲ್ಲಿ, "ದೆಹಲಿ ಪೊಲೀಸ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಘಟನೆಗೆ ಕಾರಣರಾದವರನ್ನು ಬಂಧಿಸಿದ್ದಕ್ಕಾಗಿ ಧನ್ಯವಾದಗಳು. ನನಗೆ ಪ್ರೀತಿ, ಬೆಂಬಲ ಮತ್ತು ನನ್ನ ರಕ್ಷಣೆಗೆ ಬಂದ ಸಮುದಾಯಕ್ಕೆ ನಿಜವಾಗಿಯೂ ಕೃತಜ್ಞಳಾಗಿರುತ್ತೇನೆ" ಎಂದು ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡಿದ್ದಾರೆ.

ಇದರ ಜೊತೆಗೆ, ಹುಡುಗರೇ ಮತ್ತು ಹುಡುಗುಯರೇ ನಿಮ್ಮ ಚಿತ್ರವನ್ನು ನಿಮ್ಮ ಒಪ್ಪಿಗೆಯಿಲ್ಲದೆ ಎಲ್ಲಿಯಾದರೂ ಬಳಸಿದರೆ ಅಥವಾ ಮಾರ್ಫ್ ಮಾಡಿದ್ದರೆ. ಅದು ತಪ್ಪು!. ಯಾವಾಗಲು ನಿಮ್ಮನ್ನು ಸಪೋರ್ಟ್ ಮಾಡುವ ಜನರ ಜೊತೆಗೆ ನೀವಿದ್ದಿರಿ ಎಂದು ನಾನು ಭಾವಿಸುತ್ತೇನೆ" ಇಂತಹ ಘಟನೆಗಳಾದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದ ಯುವ ಜನರಿಗೆ ಸಂದೇಶವನ್ನು ನೀಡಿದ್ದಾರೆ.

ಯಾರು ಈಮನಿ ನವೀನ್..?

ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ದೆಹಲಿ ಪೊಲೀಸರ ವಿಶೇಷ ಘಟಕದ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ಘಟಕ ನಟಿ ರಶ್ಮಿಕಾ ಮಂದಣ್ಣ ಅವರ ನಕಲಿ ವೀಡಿಯೊಗಳನ್ನು ರಚಿಸಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ ಆರೋಪದ ಮಾಸ್ಟರ್ ಮೈಂಡ್ ಈಮಾನಿ ನವೀನ್ ಎಂಬುವವನನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಬಂಧಿತ ವ್ಯಕ್ತಿ ಈಮಾನಿ ನವೀನ್ 24 ವರ್ಷದವನಾಗಿದ್ದು, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿವಾಸಿಯಾಗಿದ್ದು, ಚೆನ್ನೈನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ-ಟೆಕ್ ಪದವಿ ಪಡೆದಿದ್ದಾರೆ.

 Feeling truly grateful: Actress Rashmika Mandanna thanks police for deepfake video accuseds arrest

ಪ್ರಕರಣ ಕುರಿತು ಐಎಫ್‌ಎಸ್‌ಒ ಘಟಕದ ಉಪ ಪೊಲೀಸ್ ಆಯುಕ್ತ ಹೇಮಂತ್ ತಿವಾರಿ ಮಾತನಾಡಿ, "ಆರೋಪಿ ನವೀನ್, ರಶ್ಮಿಕಾ ಮಂದಣ್ಣ ಅವರ ಫ್ಯಾನ್ ಪೇಜ್ ಅನ್ನು ನಡೆಸುತ್ತಿದ್ದರು. ಇದರ ಜೊತೆಗೆ ಇಬ್ಬರು ಪ್ರಸಿದ್ಧ ಸೆಲೆಬ್ರಿಟಿಗಳಿಗಾಗಿ ಇನ್ನೂ ಎರಡು ಫ್ಯಾನ್ ಪೇಜ್‌ಗಳನ್ನು ರಚಿಸಿದ್ದಾರೆ. ಬಳಿಕ ಅವರೇ ಡೀಪ್‌ಫೇಕ್ ವಿಡಿಯೋ ಮಾಡಿದ್ದಾರೆ" ಎಂದಿದ್ದಾರೆ.

ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?

ತಾನು ಮಾಡಿದ ಡೀಪ್‌ಫೇಕ್ ವೀಡಿಯೊಗಳು ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿವೆ ಎಂದು ತಿಳಿದ ನಂತರ 24 ವರ್ಷದ ಈಮಾನಿ ನವೀನ್ ಭಯಗೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. "ಈ ವಿಷಯಕ್ಕೆ ರಾಷ್ಟ್ರದಲ್ಲಿ ಎಲ್ಲೆಡೆ ಚರ್ಚೆಯಾಗುತ್ತಿದೆ ಎಂದು ತಿಳಿದ ತಕ್ಷಣ ಪ್ರಸಿದ್ಧ ಚಲನಚಿತ್ರ ತಾರೆಯರ ಟ್ವೀಟ್‌ಗಳನ್ನು ಸಹ ನೋಡಿದ್ದಾರೆ. ಗಾಬರಿಗೊಂಡ ಅವರು ಇನ್‌ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್‌ಗಳನ್ನು ಅಳಿಸಿದ್ದಾರೆ. ಜೊತೆಗೆ ಇನ್‌ಸ್ಟಾ ಚಾನಲ್‌ನ ಹೆಸರನ್ನು ಸಹ ಬದಲಾಯಿಸಿದ್ದಾರೆ. ಇದಲ್ಲದೇ ವಿಡಿಯೋಗೆ ಸಂಬಂಧಿಸಿದ ಡಿಜಿಟಲ್ ಡೇಟಾವನ್ನು ಸಹ ಅಳಿಸಿದ್ದಾರೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

More from Filmibeat

English summary
Actress Rashmika Mandanna thanks police for deepfake accused's arrest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X