For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಆಗುತ್ತಿದೆ ಭಾರತದ ಮೊದಲ ಫೀಲ್ಡ್ ಮಾರ್ಷಲ್ ಜೀವನ: ಹೆಸರು ಘೋಷಣೆ

  |

  ಭಾರತದ ಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಅವರ ಜೀವನ ಸಿನಿಮಾ ಆಗುತ್ತಿದೆ. ಈಗಾಗಲೇ ಅನೇಕ ಬಯೋಪಿಕ್‌ಗಳು ಬಾಲಿವುಡ್ ನಲ್ಲಿ ಬಿಡುಗಡೆಯಾಗಿ ಯಶಸ್ಸುಗಳಿಸಿವೆ. ಇನ್ನು ಅನೇಕ ಬಯೋಪಿಕ್ ಗಳು ತಯಾರಾಗುತ್ತಿವೆ.

  ಕ್ರೀಡೆ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರ ಜೀವನ ಚರಿತ್ರೆ ತೆರೆಮೇಲೆ ಬಂದಿದೆ. ಇದೀಗ ಭಾರತ ಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಜೀವನ ತೆರೆಮೇಲೆ ಬರಲು ಸಜ್ಜಾಗಿದೆ. ಈ ಸಾಹಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕಿ ಮೇಘನಾ ಗುಲ್ಜರ್. ವಿಶೇಷ ಎಂದರೆ ತೆರೆಮೇಲೆ ಸ್ಯಾಮ್ ಮಾಣಿಕ್ ಶಾ ಆಗಿ ಬಾಲಿವುಡ್ ಖ್ಯಾತ ನಟ ವಿಕ್ಕಿ ಕೌಶಲ್ ಕಾಣಿಸಿಕೊಳ್ಳುತ್ತಿದ್ದಾರೆ.

  ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರುಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು

  ಇಂದು (ಏಪ್ರಿಲ್ 3) ಸ್ಯಾಮ್ ಮಾಣಿಕ್ ಶಾ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಟೈಟಲ್ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ 'ಸ್ಯಾಮ್ ಬಹದ್ದೂರ್' ಎಂದು ಹೆಸರಿಡಲಾಗಿದೆ. ಕಳೆದ ವರ್ಷವೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ಚಿತ್ರಾಭಿಮಾನಿಗಳ ಗಮನ ಸೆಳೆಯಲಾಗಿತ್ತು. ಆದರೆ ಚಿತ್ರಕ್ಕಿನ್ನು ಟೈಟಲ್ ಫಿಕ್ಸ್ ಆಗಿರಲಿಲ್ಲ. ಇಂದು ಶೀರ್ಷಿಕೆ ರಿವೀಲ್ ಆಗಿದೆ.

  ಚಿತ್ರದ ಶೀರ್ಷಿಕೆ ಶೇರ್ ಮಾಡಿ ನಟ ವಿಕ್ಕಿ ಕೌಶಲ್, 'ದಂತಕತೆ, ಕೆಚ್ಚೆದೆಯ ಹೃದಯ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಜನ್ಮ ದಿನಾಚರಣೆಯಂದು ಅವರ ಜೀವನಾಧಾರಿತ ಚಿತ್ರಕ್ಕೆ ಹೆಸರು ಸಿಕ್ಕಿದೆ, ಶೀರ್ಷಿಕೆ 'ಸ್ಯಾಮ್ ಬಹದ್ದೂರ್' ಎಂದು ಬರೆದುಕೊಂಡಿದ್ದಾರೆ.

  ಸ್ಯಾಮ್ ಮಾಣಿಕ್ ಶಾ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದರು. ಮಾಣಿಕ್ ಶಾ ತಮ್ಮ ಸೇನಾ ವೃತ್ತಿ ಜೀವನ 4 ದಶಕಗಳಲ್ಲಿ ಐದು ಯುದ್ಧಗಳನ್ನು ಮಾಡಿದ್ದಾರೆ. ಫಿಲ್ಡ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದ ಮೊದಲ ಭಾರತೀಯ ಸೇನಾ ಅಧಿಕಾರಿ ಮಾಣಿಕ್ ಶಾ.

  ಯುವರತ್ನ ಸಕ್ಸಸ್ ಪುನೀತ್ ರಾಜ್ ಕುಮಾರ್ ಗೆ ಸಾಥ್ ಕೊಟ್ಟ ಜಗ್ಗೇಶ್ | Filmibeat Kannada

  ಮಾಣಿಕ್ ಶಾ ಜೀವನವನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ನಟ ವಿಕ್ಕಿ ಕೌಶಲ್ ಮತ್ತು ನಿರ್ದೇಶಕಿ ಮೇಘನಾ ಗುಲ್ಜರ್ ರಾಝಿ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿರುವುದು ವಿಶೇಷ. ಸಿನಿಮಾ ಹೇಗೆ ಮೂಡಿಬರಲಿದೆ ಎನ್ನುವ ಕುತೂಹಲದಲ್ಲಿ ಕಾಯುತ್ತಿದ್ದಾರೆ ಸಿನಿ ಅಭಿಮಾನಿಗಳು.

  English summary
  Bollywood actor Vicky Kaushal to act in Field Marshal Sam Manekshaw biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X