For Quick Alerts
  ALLOW NOTIFICATIONS  
  For Daily Alerts

  ಹೃತಿಕ್-ದೀಪಿಕಾ ಸಿನಿಮಾ: ಈ ಸಾಹಸ ಭಾರತದಲ್ಲಿ ಇದೇ ಮೊದಲು!

  |

  ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸುತ್ತಿರುವ ಹಿಂದಿ ಸಿನಿಮಾ 'ಫೈಟರ್' ವಿನೂತನ ದಾಖಲೆ ಸೃಷ್ಟಿಸಲು ತಯಾರಾಗಿದೆ.

  ಅಕ್ಷನ್ ಸಿನಿಮಾಗಳಿಂದಲೇ ಖ್ಯಾತಿಗಳಿಸಿರುವ ಸಿದ್ಧಾರ್ಥ್ ಆನಂದ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಭಾರತದ ಯಾವ ಸಿನಿಮಾದಲ್ಲಿಯೂ ಮಾಡಿರದ ಭಿನ್ನವಾದ ಸ್ಟಂಟ್ ಅನ್ನು ಈ ಸಿನಿಮಾದಲ್ಲಿ ಮಾಡಲಾಗುತ್ತಿದೆ.

  'ಫೈಟರ್' ಎಂಬುದು ಫೈಟರ್ ಜೆಟ್‌ ಪೈಲೆಟ್‌ನ ಕತೆಯಾಗಿದೆ. ಸಿನಿಮಾದಲ್ಲಿ ಆಕಾಶದಲ್ಲಿ ಫೈಟರ್ ಜೆಟ್‌ಗಳನ್ನು ಬಳಸಿಕೊಂಡು ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಈ ರೀತಿ ಹಿಂದೆ ಇನ್ಯಾಯ ಭಾರತೀಯ ಸಿನಿಮಾದಲ್ಲಿಯೂ ಮಾಡಲಾಗಿಲ್ಲ.

  'ಫೈಟರ್' ಸಿನಿಮಾವನ್ನು ವೈಯೊಕಾಮ್ 18 ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದ್ದು, ನಿರ್ದೇಶಕ ಸಿದ್ಧಾರ್ಥ್ ಆನಂದ್ ಮತ್ತು ಪತ್ನಿ ಮಮತಾ ಸಹ ನಿರ್ಮಾಪಕರಾಗಿದ್ದಾರೆ.

  ''ಆಕಾಶದಲ್ಲಿ ಆಕ್ಷನ್ ದೃಶ್ಯ ಭಿನ್ನ ಅನುಭೂತಿಯನ್ನು ಪ್ರೇಕ್ಷಕನಿಗೆ ನೀಡಲಿದೆ. ಹಾಲಿವುಡ್‌ನ 'ಟಾಪ್ ಗನ್' ಸಿನಿಮಾದ ಅಭಿಮಾನಿಯಾದ ನಾನು ಹೀಗೊಂದು ಏರಿಯಲ್ ಆಕ್ಷನ್ ದೃಶ್ಯಗಳುಳ್ಳ ಚಿತ್ರಕತೆಗಾಗಿ ಕಾಯುತ್ತಿದ್ದೆ. ಸಿದ್ಧಾರ್ಥ್ ಆ ರೀತಿಯ ಚಿತ್ರಕತೆ ತಂದಿದ್ದಾರೆ. ಅವರಿಗೆ ಚಿತ್ರಕತೆಯ ಮೇಲೆ ಹಿಡಿತವಿದ್ದು, ತಾವು ಏನು ಮಾಡುತ್ತಿದ್ದೀವಿ ಎಂಬ ಅರಿವಿದೆ'' ಎಂದಿದ್ದಾರೆ ವೈಯೊಕಾಮ್ 18 ನ ಸಿಒಒ.

  ಸಿದ್ಧಾರ್ಥ್ ಆನಂದ್ ಮಾತನಾಡಿ ''ಫೈಟರ್' ಸಿನಿಮಾವು ಭಾರತೀಯ ಸಿನಿಮಾವನ್ನು ವಿಶ್ವ ಸಿನಿಮಾ ದರ್ಜೆಗೆ ಏರಿಸುತ್ತದೆ. ಆ ಮಾದರಿಯ ಆಕ್ಷನ್ ದೃಶ್ಯಗಳು ಸಿನಿಮಾಗಳಲ್ಲಿ ಇರಲಿದೆ. ನನ್ನ ಜೊತೆ ದೂರದೃಷ್ಟಿಯ ಪಾಲುದಾರರು (ವೈಯೊಕಾಮ್ 18) ಇರುವುದು ಸಂತಸದ ವಿಚಾರ'' ಎಂದಿದ್ದಾರೆ.

  ಕೆಲವರು ಮಾಡಿದ ನೀಚ ಕೆಲಸಕ್ಕೆ ಬೇಸರಗೊಂಡ ವಿನೋದ್ ಪ್ರಭಾಕರ್ | Filmibeat Kannada

  ಸಿನಿಮಾ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ನಿರ್ದೇಶಕ ಸಿದ್ಧಾರ್ಥ್ ಆನಂದ್ ಒಟ್ಟಿಗೆ ಇರುವ ಚಿತ್ರ ಹಂಚಿಕೊಂಡು, ''ಹಾರಲು ಸಜ್ಜಾಗಿದ್ದೇವೆ'' ಎಂದಿದ್ದಾರೆ.

  ಸಿದ್ಧಾರ್ಥ್ ಆನಂದ್ ಪ್ರಸ್ತುತ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲಿಯೂ ದೀಪಿಕಾ ಪಡುಕೋಣೆ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಅಂತಿಮ ಹಂತದಲ್ಲಿದ್ದು, ಅದು ಮುಗಿದ ಬಳಿಕ 'ಫೈಟರ್' ಪ್ರಾರಂಭವಾಗಲಿದೆ. ಅದರ ನಂತರ ಪ್ರಭಾಸ್ ನಟನೆಯ ಸಿನಿಮಾವನ್ನು ಸಿದ್ಧಾರ್ಥ್ ನಿರ್ದೇಶನ ಮಾಡಲಿದ್ದಾರೆ.

  English summary
  Hritik Roshan's new movie 'fighter' will have arial action sequence. This will be the first Indian movie to have arial action sequence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X