ನೀಲಿ ತಾರೆಯ ಕೆಂಪು ಕಾರು ನೋಡಿ ತಂಪಾದ ಪಡ್ಡೆ ಹುಡುಗರು; ದಿಢೀರನೇ ಫೋಟೊ-ವಿಡಿಯೋ ವೈರಲ್

By ಫಿಲ್ಮಿಬೀಟ್ ಡೆಸ್ಕ್

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವವ ಪಡ್ಡೆ ಹುಡುಗರಿಗೆ ಈಕೆಯ ಹೆಸರು ಹೇಳಬೇಕಿಲ್ಲ. ಭಾರತ ಮೂಲದ ಈಕೆ ಫಿಜಿಯಲ್ಲಿ ನಲೆಸಿದ್ದು, ನೀಲಿ ಚಿತ್ರ ಪ್ರಪಂಚದಲ್ಲಿ ಸ್ಟಾರ್ ನಟಿ. ಹೀಗಾಗಿ ಕೇವಲ ಸೋಶಿಯಲ್ ಮೀಡಿಯಾ ಅಷ್ಟೇ ಅಲ್ಲ. ಆ ಪ್ರಪಂಚದಲ್ಲೂ ಫೇಮಸ್. ಪಡ್ಡೆ ಹೈಕಳ ನಿದ್ದೆ ಕದಿಯುತ್ತಿರುವ ಈಕೆ ಇತ್ತೀಚೆಗೆ ಹೊಸ ಕಾರನ್ನು ಖರೀದಿ ಮಾಡಿದ್ದಳು. ಆ ಫೋಟೋ ಹಾಗೂ ವಿಡಿಯೋಗಳು ದಿಢೀರನೇ ವೈರಲ್ ಆಗುವುದಕ್ಕೆ ಶುರುವಾಗಿವೆ.

ಸಶಾ ಪ್ರಸಾದ್ ಸದ್ಯ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಅದಕ್ಕೆ ಕಾರಣ ಆಕೆಯ ನೀಲಿ ಚಿತ್ರಗಳು ಅಲ್ಲ. ಬದಲಿಗೆ ಆಕೆ ಖರೀದಿಸಿದ ಹೊಸ ಕಾರು. ನೀಲಿ ಚಿತ್ರತಾರೆಯ ಕೆಂಪು ಬಣ್ಣದ ಕಾರಿನೊಂದಿಗೆ ಇರುವ ಫೋಟೊ ಹಾಗೂ ವಿಡಿಯೋಗಳು ಏಕಾಏಕಿ ಟ್ರೆಂಡ್ ಆಗುತ್ತಿವೆ. ಅಂದ್ಹಾಗೆ ಈ ಫೋಟೊ ಹಾಗೂ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಐದು ವಾರಗಳ ಹಿಂದೆಯೇ ಖರೀದಿ ಮಾಡಿದ್ದರು.

Fijian Indian Sasha Prasad buys Maruti Suzuki Jimny Here is full details

ವಿದೇಶಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿರುವ ಸಶಾ ಪ್ರಸಾದ್ ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲೂ ತನ್ನ ಜನಪ್ರಿಯತೆಯನ್ನು ವಿಸ್ತರಿಸಿಕೊಂಡಿದ್ದಾರೆ. ಇತ್ತೀಚೆಗಂತೂ ಈಕೆಯ ಬಗ್ಗೆ ಪಡ್ಡೆ ಹುಡುಗರಿಗೆ ಕಾಳಜಿ ಹೆಚ್ಚಾಗಿದೆ ಅನ್ನೋ ಮಾತು ಕೂಡ ಕೇಳಿಬರುತ್ತಿದೆ. ಅಷ್ಟಕ್ಕೂ ಈಕೆ ಖರೀದಿಸಿದ್ದು ಮಾರುತಿ ಸುಜುಕಿ ಜಿಮ್ನಿ ಕಾರು. ಈ ಕಾರು ಭಾರತದ ಜೊತೆಗೆ ಬೇರೆ ದೇಶಗಳಲ್ಲೂ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಅಷ್ಟಕ್ಕೂ ಈ ಕಾರಿನ ವಿಶೇಷತೆ ಏನು? ತಿಳಿಯಲು ಮುಂದೆ ಓದಿ.

ಸಶಾ ಪ್ರಸಾದ್ ಖರೀದಿಸಿದ ಕಾರಿನ ಬಣ್ಣಕ್ಕೆ ಪಡ್ಡೆ ಹುಡುಗರು ಮಾರು ಹೋಗಿದ್ದಾರೆ. ಅಷ್ಟೇ ಅಲ್ಲದೆ ಸಶಾ ಪ್ರಸಾದ್ ಕೂಡ ತುಂಬಾನೇ ಖುಷಿಯಲ್ಲಿ ತನ್ನ ಕಾರಿನ ಬಗ್ಗೆ ವಿಡಿಯೋ ಮಾಡಿ ಅದನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಅದನ್ನು ನೋಡಿ ಪಟ್ಟೆ ಹುಡುಗರು ಕರಗಿ ನೀರಾಗಿ ಹೋಗಿದ್ದಾರೆ. ಅಷ್ಟೇ ಅಲ್ಲ ಪಡ್ಡೆ ಹುಡುಗರು ಈಕೆಯ ಕಾರಿನ ವಿಡಿಯೋ ಲೈಕ್ ಮಾಡಿದ್ದು ಕೂಡ ಅಷ್ಟೇ ಅಚ್ಚರಿಯನ್ನು ಹುಟ್ಟಿಸಿದೆ.

Fijian Indian Sasha Prasad buys Maruti Suzuki Jimny Here is full details

ಆ ವಿಡಿಯೋದಲ್ಲಿ " ನಾನು ಖರೀದಿ ಮಾಡಿದ ಹೊಸ ಕಾರು ಇದು. ನಾನು ನಿಮ್ಮೊಂದಿಗೆ ಒಂದಿಷ್ಟು ಸಂಗತಿಗಳನ್ನು ಹಂಚಿಕೊಳ್ಳಬೇಕು. ಆದರೆ, ಅದಕ್ಕೂ ಮುನ್ನ ನಾನು ಖರೀದಿಸಿದ ಹೊಸ ಕಾರನ್ನು ನೋಡಿ. ಅವಳು ನೋಡಿ ಎಷ್ಟು ಸುಂದರವಾಗಿದ್ದಾಳೆ. ಆಕೆಯನ್ನು ನಾನು ತುಂಬಾನೇ ಇಷ್ಟ ಪಡುತ್ತೇನೆ." ಎಂದು ಆ ವಿಡಿಯೋ ಸಶಾ ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರು ಮಾಡಿದೆ.

ಅಂದ್ಹಾಗೆ ಈ ಕಾರಿನ ಬೆಲೆ ಏನು? ವಿಶೇಷತೆ ಏನು? ಅನ್ನೋದನ್ನು ನೋಡುವುದಾದರೇ, ಮಾರುತಿ ಸುಜುಕಿ ಜಿಮ್ನಿ ಭಾರತ ಅಷ್ಟೇ ಅಲ್ಲ. ಆಫಿಕಾ, ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯಗಳ ಜನರಿಗೂ ಖರೀದಿ ಮಾಡಲು ಲಭ್ಯವಿದೆ. ಈ ಕಾರು ಯುವ ಸಮುದಾಯದ ಫೇವರಿಟ್ ಕಾರು ಎನಿಸಿಕೊಂಡಿದೆ. ಭಾರತದಲ್ಲಿ ಈ ಕಾರಿನ ಆರಂಭಿಕ ಬೆಲೆ 12.74 ಲಕ್ಷ ರೂಪಾಯಿಂದ ಆರಂಭ ಆಗುತ್ತೆ. ಹೀಗಾಗಿ ಸಶಾ ಈ ಕಾರನ್ನು ಎಲ್ಲಿ ಖರೀದಿ ಮಾಡಿದ್ದಾರೆಂಬುವುದಕ್ಕೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಭಾರತದಲ್ಲಿ ಆಫ್‌ ರೋಡ್‌ಗೆ ಅಂತಲೇ ಡಿಸೈನ್ ಮಾಡಿರುವ ಈ ಕಾರು ಭಾರತದಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ. ಆದರೆ, ವಿದೇಶದಲ್ಲಿ ಈ ಕಾರಿಗೆ ಹೆಚ್ಚು ಬೇಡಿಕೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಸಶಾ ಪ್ರಸಾದ್‌ಗೆ ಅವರ ಅಪ್ಪಟ ಅಭಿಮಾನಿಗಳು ಮನದಾಳದಿಂದ ಶುಭಾಶಯವನ್ನು ಕೋರುತ್ತಿದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಫಾಲೋವರ್ಸ್‌ ಕೂಡ ವಿಶ್ ಮಾಡಿ ಖುಷಿ ಪಟ್ಟಿದ್ದಾರೆ.

More from Filmibeat

English summary
Fijian Indian Sasha Prasad buys Maruti Suzuki Jimny Here is full details;
Read more about: actress car filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X