For Quick Alerts
  ALLOW NOTIFICATIONS  
  For Daily Alerts

  ತೆರೆಗೆ ಬರುತ್ತಿದೆ ಸುಶಾಂತ್ ಸಿಂಗ್ ಜೀವನ: ಸಿನಿಮಾದ ಹೆಸರೇನು?

  |

  ಪ್ರತಿಭಾವಂತ ನಟ ಸುಶಾಂತ್ ಸಿಂಗ್ ಜೀವನ ಅರ್ಧಕ್ಕೆ ಮುಗಿದಿದೆ. ಸುಶಾಂತ್ ಸಿಂಗ್ ಸಾವು ಚಿತ್ರರಂಗದಲ್ಲಿ ಹುಟ್ಟುಹಾಕಿರುವ 'ಸ್ವಜನಪಕ್ಷಪಾತ' (ನೆಪೊಟಿಸಮ್) ಚರ್ಚೆ ಸಾಗುತ್ತಲೇ ಇದೆ.

  ಎಲ್ಲಾ ಸೆಲೆಬ್ರಿಟಿಗಳನ್ನು ಅನ್ ಫಾಲೋ ಮಾಡಿದ ಕರಣ್ ಜೋಹರ್ | Karan johar | Filmibeat Kannada

  ಸುಶಾಂತ್ ಸಿಂಗ್ ಸಾವು ಬಾಲಿವುಡ್ ಅನ್ನು ಎರಡು ಹೋಳು ಮಾಡಿದೆ. ಸ್ವಜನಪಕ್ಷಪಾತದ ಪರವಾಗಿ ಕೆಲವರಾದರೆ ಅದನ್ನು ಉಗ್ರವಾಗಿ ವಿರೋಧಿಸುತ್ತಿರುವವರು ಇನ್ನೊಂದು ಬದಿಯಲ್ಲಿದ್ದಾರೆ. ವಿರೋಧಿಸುವವರ ಧ್ವನಿ ಜೋರಾಗಿದ್ದರೆ, ಪರವಾಗಿರುವವರ ಅಹಂ ಇನ್ನೂ ಜೋರಿದೆ.

  ಸುಶಾಂತ್ ಸಾವಿನ ಬಗ್ಗೆ ಹತ್ತು ಗಂಟೆ ವಿಚಾರಣೆ: ಪೊಲೀಸರಿಗೆ ರಿಯಾ ತಿಳಿಸಿದ್ದೇನು?ಸುಶಾಂತ್ ಸಾವಿನ ಬಗ್ಗೆ ಹತ್ತು ಗಂಟೆ ವಿಚಾರಣೆ: ಪೊಲೀಸರಿಗೆ ರಿಯಾ ತಿಳಿಸಿದ್ದೇನು?

  ಇದೆಲ್ಲವುದರ ನಡುವೆ ಸುಶಾಂತ್ ಸಿಂಗ್ ಅನುಭವಿಸಿದ ಮಾನಸಿಕ ಹಿಂಸೆ, ಆತನ ನೋವು, ತೊಳಲಾಟ, ಅನುಭವಿಸಿದ ಅವಮಾನ, ಏರಿದ ಎತ್ತರ ಎಲ್ಲವೂ ಒಟ್ಟಾಗಿ ಸಿನಿಮಾ ಆಗಲಿದೆ.

  ಸಿನಿಮಾ ಆಗಲು ಸೂಕ್ತವಾಗಿದೆ

  ಸಿನಿಮಾ ಆಗಲು ಸೂಕ್ತವಾಗಿದೆ

  ಮಧ್ಯಮ ವರ್ಗದ ಸಾಮಾನ್ಯ ಹುಡುಗ, ಅತ್ಯುತ್ತಮ ವಿದ್ಯಾರ್ಥಿಯಾಗಿದ್ದವ ಕನಸುಗಳ ಬೆನ್ನುಹತ್ತಿ ಕಾಲೇಜು ಬಿಟ್ಟು, ಮೂಲೆಯಲ್ಲಿ ಹೀರೋಗಳ ಹಿಂದೆ ನರ್ತಿಸುತ್ತಿದ್ದ ಸುಶಾಂತ್ ಸಿಂಗ್ ಏರಿದ ಎತ್ತರ ಸ್ಪೂರ್ತಿಯಾಗುವಂತಹದ್ದು. ಸುಶಾಂತ್ ಸಿಂಗ್ ಜೀವನ ಸಿನಿಮಾ ಆಗಲು ಸೂಕ್ತವಾಗಿದೆ. ನಂತರ ಸುಶಾಂತ್ ಬಿದ್ದ ಆಳ ಹಲವರಿಗೆ ಎಚ್ಚರಿಕೆ.

  ಸಿನಿಮಾಕ್ಕೆ ಹೆಸರೂ ಇಡಲಾಗಿದೆಸ

  ಸಿನಿಮಾಕ್ಕೆ ಹೆಸರೂ ಇಡಲಾಗಿದೆಸ

  ಸುಶಾಂತ್ ಸಿಂಗ್ ಜೀವನ ಆಧರಿಸಿ ತಯಾರಾಗುತ್ತಿರುವ ಸಿನಿಮಾಕ್ಕೆ 'ಸೂಸೈಡ್ ಆರ್ ಮರ್ಡರ್' ಹೆಸರನ್ನು ಇಡಲಾಗಿದೆ. ಇದನ್ನು ವಿಎಸ್‌ಬಿ ಬಿಂಗೆ ಎಂಬ ಸಂಸ್ಥೆ ನಿರ್ಮಿಸುತ್ತಿದೆ. ಪೋಸ್ಟರ್ ಅನ್ನು ಇನ್‌ಸ್ಟಾಗ್ರಾಂ ನಲ್ಲಿ ಬಿಡುಗಡೆ ಮಾಡಲಾಗಿದೆ.

  ಸುಶಾಂತ್ ಸಾವು ಪೂರ್ವನಿಯೋಜಿತ ಹತ್ಯೆ?: ಮಹೇಶ್ ಭಟ್, ರಿಯಾ ವಿರುದ್ಧವೇ ಅನುಮಾನಸುಶಾಂತ್ ಸಾವು ಪೂರ್ವನಿಯೋಜಿತ ಹತ್ಯೆ?: ಮಹೇಶ್ ಭಟ್, ರಿಯಾ ವಿರುದ್ಧವೇ ಅನುಮಾನ

  ಶಾಮಿಕ್ ಮೌಲಿಕ್ ನಿರ್ದೇಶಕ

  ಶಾಮಿಕ್ ಮೌಲಿಕ್ ನಿರ್ದೇಶಕ

  ಸಿನಿಮಾವನ್ನು ವಿಜಯ್ ಶೇಖರ್ ಗುಪ್ತಾ ಎಂಬುವರು ನಿರ್ಮಾಣ ಮಾಡುತ್ತಿದ್ದು, ನಿರ್ದೇಶನದ ಜವಾಬ್ದಾರಿಯನ್ನು ಶಾಮಿಕ್ ಮೌಲಿಕ್ ಎಂಬುವರು ಹೊತ್ತಿದ್ದಾರೆ. ಸುಶಾಂತ್‌ ಸಿಂಗ್‌ ಕತೆಯ ಮೂಲಕ ಅಂತಹಾ ಹಲವರ ಕತೆ ಹೇಳುತ್ತೇವೆ ಎಂದಿದ್ದಾರೆ ನಿರ್ದೇಶಕ.

  ಯಾವುದೇ ಸ್ಟಾರ್ ಮಕ್ಕಳಿಗೆ ಅವಕಾಶ ಕೊಡುವುದಿಲ್ಲ

  ಯಾವುದೇ ಸ್ಟಾರ್ ಮಕ್ಕಳಿಗೆ ಅವಕಾಶ ಕೊಡುವುದಿಲ್ಲ

  ಈ ಸಿನಿಮಾವು ಸುಶಾಂತ್‌ ಸಿಂಗ್ ಜೀವನಾಧಾರಿತ ಸಿನಿಮಾ ಆಗಿರುವುದಿಲ್ಲ ಬದಲಿಗೆ ಸುಶಾಂತ್ ಸಿಂಗ್ ಬದುಕಿನಿಂದ ಪ್ರೇರಣೆಗೊಂಡು ಕತೆಯನ್ನು ಸಿದ್ಧಪಡಿಸಲಾಗುತ್ತದೆ ಎಂದಿದ್ದಾರೆ ನಿರ್ದೇಶಕ ಶಾಮಿಕ್. ಸಿನಿಮಾದ ನಾಯಕನ್ನಾಗಿ ಹೊಸಬರನ್ನು ಪರಿಚಯಿಸಲಾಗುವುದು ಯಾವುದೇ ಸ್ಟಾರ್ ಮಕ್ಕಳಿಗೆ ಸಿನಿಮಾದಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂದಿದ್ದಾರೆ.

  ರಣ್ವೀರ್ ಸಿಂಗ್ ದೊಡ್ಡ ಸ್ಟಾರ್ ಆಗಲು ಸುಶಾಂತ್ ಸಿಂಗ್ ಕಾರಣ!?ರಣ್ವೀರ್ ಸಿಂಗ್ ದೊಡ್ಡ ಸ್ಟಾರ್ ಆಗಲು ಸುಶಾಂತ್ ಸಿಂಗ್ ಕಾರಣ!?

  English summary
  Film based on actor Sushant Singh's life. Poster is already out in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X