ಲಾಲ್ ಬಹದ್ದೂರ್ ಶಾಸ್ತ್ರಿ ಕುರಿತ ಸಿನಿಮಾ

ವಿಕ್ಟೋರಿಯಸ್ ಎಂಟರ್ ಪ್ರೈಸಸ್ ಹಾಗೂ ಕರಿಜ್ಮಾ ಸೆರಾಮಿಕ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ 'ಜೈ ಜವಾನ್ ಜೈ ಕಿಸಾನ್' ಎಂದು ಹೆಸರಿಡಲಾಗಿದೆ. ಮಿಲನ್ ಅಜ್ಮೆರಾ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಓಂ ಪುರಿ, ರತಿ ಅಗ್ನಿಹೋತ್ರಿ ಹಾಗೂ ಪ್ರೇಮ್ ಚೋಪ್ರಾ ಅಭಿನಯಿಸುತ್ತಿದ್ದಾರೆ.
ರಂಗಭೂಮಿ ಕಲಾವಿದ ಜೈಹಿಲೇಶ್ ಜೈನ್ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪಾತ್ರವನ್ನು ಪೋಷಿಸಲಿದ್ದಾರೆ. ಜತಿನ್ ಖುರಾನ ಎಂಬುವವರು ಚಂದ್ರಶೇಖರ್ ಆಜಾದ್ ಅವರ ಪಾತ್ರವನ್ನು ಪೋಷಿಸಲಿದ್ದಾರೆ. ಈಗಾಗಲೆ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಅಲಹಾಬಾದ್, ಮುಂಬೈ, ದೆಹಲಿ ಹಾಗೂ ರಷ್ಯಾದಲ್ಲಿ ಚಿತ್ರೀಕರಣ ನಡೆಯಲಿದೆ. ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತ ಕಂಡಂತಹ ಅತ್ಯಂತ ಪ್ರಾಮಾಣಿಕ ಪ್ರಧಾನಿ ಎನ್ನಿಸಿಕೊಂಡಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾದ ಸಂದರ್ಭದಲ್ಲಿ ಭಾರತಕ್ಕೆ ತೀವ್ರ ಬರಗಾಲ ಬಂದೊದಗಿತ್ತು. ವಿದೇಶದಿಂದ ಆಹಾರ ಆಮದು ಮಾಡಿಕೊಳ್ಳಬೇಕಾದ ದುಸ್ಥಿತಿ ಇತ್ತು. ಅದಕ್ಕಾಗಿ ಶಾಸ್ತ್ರಿ ಅವರು ವಾರದಲ್ಲಿ ಒಂದು ದಿನ ಉಪವಾಸ ಇದ್ದರೆ ಎಷ್ಟು ಆಹಾರ ಸಂಗ್ರಹವಾಗುತ್ತದೆ ಎಂದು ಲೆಕ್ಕ ಹಾಕಿದರು.
ಅದರಂತೆ ಅವರು ಪ್ರತಿ ಸೋಮವಾರ ಊಟ ತ್ಯಜಿಸಿದರು. ಇಂದಿಗೂ ಅದನ್ನು ಶಾಸ್ತ್ರಿ ಅವರ ಸೋಮವಾರ ಎಂದೇ ಜನಜನಿತವಾಗಿದೆ. ಇದು ಅವರ ಸ್ವಾಭಿಮಾನಕ್ಕೆ ಕೊಡಬಹುದಾದ ಒಂದು ಸಣ್ಣ ನಿದರ್ಶನ. ಇನ್ನು ಚಿತ್ರದ ವಿಚಾರಕ್ಕೆ ಬರುವುದಾದರೆ ಈ ರೀತಿಯ ಇನ್ನೆಷ್ಟು ಸಂಗತಿಗಳಿರುತ್ತವೋ ಏನೋ ಕಾದುನೋಡಬೇಕು. (ಏಜೆನ್ಸೀಸ್)


Click it and Unblock the Notifications











