Just In
Don't Miss!
- News
ಉದ್ಯಮಿ ಅಜೀಂ ಪ್ರೇಮ್ಜಿ ವಿರುದ್ಧದ ಪ್ರಕರಣ ರದ್ದು
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ನಿಧನಕ್ಕೆ ಕಂಬನಿ ಮಿಡಿದ ಸಿನಿ ತಾರೆಯರು
ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಇನ್ನಿಲ್ಲ. 1986ವಿಶ್ವಕಪ್ ವಿಜೇತ ಮರಡೋನಾ ಅರ್ಜೆಂಟೀನಾದ ಖಾಸಗಿ ಆಸ್ಪತ್ರೆಯಲ್ಲಿ ನವೆಂಬರ್ 25ರಂದು ಕೊನೆಯುಸಿರೆಳೆದಿದ್ದಾರೆ. ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮರಡೋನಾ ಇತ್ತೀಚಿಗಷ್ಟೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.
ಇನ್ನೇನು ಆಸ್ಪತ್ರೆಯಿಂದ ಮನೆಗೆ ತೆರಳುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಡಿಯಾಗೋ ಸಾವು ಆಘಾತ ತಂದಿದೆ. ಮರಡೋನಾ ನಿಧನದಿಂದ ಇಡೀ ಕ್ರೀಡಾ ಲೋಕ ದುಃಖ ಸಾಗರದಲ್ಲಿ ಮುಳುಗಿದೆ. ಮರಡೋನಾ ನಿಧನಕ್ಕೆ ಕ್ರೀಡಾ ದಿಗ್ಗಜರು ಸಂತಾಪ ಸೂಚಿಸುತ್ತಿದ್ದಾರೆ. ಕ್ರೀಡೆ ಮಾತ್ರವಲ್ಲದೆ ಸಿನಿಮಾ ತಾರೆಯರು ಶೋಕವ್ಯಕ್ತಪಡಿಸಿದ್ದಾರೆ. ಮುಂದೆ ಓದಿ..
ನಟ ತವಸಿಯ ಜೀವ ಉಳಿಸಲಿಲ್ಲ ರಜನೀಕಾಂತ್, ವಿಜಯ್ ಸೇತುಪತಿ ನೆರವು

ತೆಲುಗು ನಟ ಮಹೇಶ್ ಬಾಬು
ಕ್ರೀಡಾ ಲೋಕ ಮಾತ್ರವಲ್ಲದೆ ಸಿನಿಮಾ ತಾರೆಯರು ಸಹ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಹೇಶ್ ಬಾಬು, 'ಲೆಜೆಂಡ್ ಅನ್ನು ಕಳೆದುಕೊಂಡಿದ್ದೀವಿ. ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಹೇಳಿದ್ದಾರೆ.

ಶಾರುಖ್ ಖಾನ್ ಟ್ವೀಟ್
ಇನ್ನು ಬಾಲಿವುಡ್ ನಟ ಶಾರುಖ್ ಖಾನ್ ಟ್ವೀಟ್ ಮಾಡಿ, 'ಡಿಯಾಗೊ ಮರಡೋನಾ ನೀವು ಫುಟ್ಬಾಲ್ ಅನ್ನು ಮತ್ತಷ್ಟು ಸುಂದರಗೊಳಿಸಿದ್ದೀರಿ. ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನೀವು ಈ ಜಗತ್ತನ್ನು ರಂಜಿಸಿದ್ದಂತೆ ಸ್ಪರ್ಗವನ್ನು ಆಕರ್ಷಿಸಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಹೇಳಿದ್ದಾರೆ.
ಬೆಂಗಾಲಿಯ ಸೂಪರ್ ಸ್ಟಾರ್ ಸೌಮಿತ್ರಾ ಚಟರ್ಜಿ ಕೋವಿಡ್ಗೆ ಬಲಿ

ಸುಮಲತಾ ಅಂಬರೀಶ್
ಸ್ಯಾಂಡಲ್ ವುಡ್ ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್ ಸಹ ಡಿಯಾಗೊ ಮರಡೋನಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಶಾರುಖ್ ಖಾನ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿ, 2020ರಲ್ಲಿ ಮತ್ತೋರ್ವ ಲೆಜೆಂಡ್ ಅನ್ನು ಕಳೆದುಕೊಂಡಿರಿವುದಾಗಿ ಹೇಳಿದ್ದಾರೆ.

ಮಹೋನ್ ಲಾಲ್, ರಣ್ವೀರ್ ಸಿಂಗ್
ನಟ ಮೋಹನ್ ಲಾಲ್, ಪೃಥ್ವಿ ರಾಜ್ ಸುಕುಮಾರ್, ರಣ್ವೀರ್ ಸಿಂಗ್, ಕರೀನಾ ಕಪೂರ್ ಸೇರಿದಂತೆ ಅನೇಕರು ಡಿಯಾಗೊ ಮರಡೋನಾ ನಿಧನಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.

2018ರಲ್ಲಿ ಭಾರತಕ್ಕೆ ಬಂದಿದ್ದ ಮರಡೋನಾ
ಡಿಯಾಗೊ ಮರಡೋನಾ 2018ರಲ್ಲಿ ಭಾರತಕ್ಕೆ ಬಂದಿದ್ದರು. ಶ್ರೀಭೂಮಿ ಸ್ಫೋರ್ಟಿಂಗ್ ಕ್ಲಬ್ ಹಮ್ಮಿಕೊಂಡಿದ್ದ ದಾನ ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ 2008ರಲ್ಲಿ ಕೋಲ್ಕತಾಗೆ ಭೇಟಿ ನೀಡಿದ್ದನ್ನು ಸ್ಮರಿಸಿದ್ದರು. 1986ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿರುವ ತಮ್ಮ ಪ್ರತಿಮೆಯನ್ನು ಕೋಲ್ಕತಾದ ಪಾರ್ಕೊಂದರಲ್ಲಿ ಅನಾವರಣಗೊಳಿಸಿ, ನನ್ನ ಪ್ರತಿಮೆ ನೋಡಿ ಖುಷಿಯಾಗುತ್ತಿದೆ ಎಂದಿದ್ದರು.