ನಟ ಸುಶಾಂತ್ ಸಿಂಗ್ ಆತ್ಮಹತ್ಯೆ: ಕಂಬನಿ ಮಿಡಿದ ಸಿನಿ ತಾರೆಯರು

ಬಾಲಿವುಡ್ ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಬಾಂದ್ರ ನಿವಾಸದಲ್ಲಿ ಸುಶಾಂತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 34 ವರ್ಷದ ನಟ ಸುಶಾಂತ್ ನಿಧನದ ಸುದ್ದಿ ಕೇಳಿ ಇಡೀ ಬಾಲಿವುಡ್ ಗೆ ಶಾಕ್ ಆಗಿದೆ.

Recommended Video

ರೀಲ್ ನಲ್ಲಿ ಪರಿಹಾರ ಕೊಟ್ಟ ಸುಶಾಂತ್ ರಿಯಲ್ ಲೈಫ್ ನಲ್ಲಿ ಸೋತಿದ್ಯಾಕೆ? |Sushant Singh Rajput|FILMIBEAT KANNADA

ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಆದರೆ ಸುಶಾಂತ್ ಕಳೆದ ಕೆಲವು ತಿಂಗಳಿಂದ ಖಿನ್ನತೆಗೆ ಒಳಗಾಗಿದ್ರು ಎಂದು ಹೇಳಲಾಗುತ್ತಿದೆ. ಎಂ.ಎಸ್ ಧೋನಿ ಸಿನಿಮಾ ಮೂಲಕ ಪ್ರಖ್ಯಾತಿಗಳಿಸಿದ್ದ ನಟ ಸುಶಾಂತ್ ಸಿಂಗ್ 11 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಳೆದ ವರ್ಷ ಚಿಚೋರೆ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಚಿಚೋರೆ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಬಹುಬೇಡಿಕೆಯ ನಟ ಸುಶಾಂತ್ ಆತ್ಮಹತ್ಯೆ ಸುದ್ದಿ ಇಡೀ ಬಾಲಿವುಡ್ ಗೆ ಆಘಾತವುಂಟು ಮಾಡಿದೆ. ಸುದ್ದಿ ಕೇಳಿ ಸಿನಿತಾರೆಯರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

"ನಿಜವಾಗಿಯೂ ಈ ಸುದ್ದಿ ನನಗೆ ಆಘಾತವುಂಟುಮಾಡಿದೆ. ಏನು ಹೇಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಸುಶಾಂತ್ ಸಿಂಗ್ ಅವರ ಚಿಚೋರೆ ಸಿನಿಮಾ ನೋಡಿದ್ದೇನೆ. ತುಂಬಾ ಎಂಜಾಯ್ ಮಾಡಿದ್ದೇನೆ. ನಾನು ಆ ಸಿನಿಮಾದ ಭಾಗವಾಗಬೇಕೆಂದು ಬಯಸಿದ್ದೆ. ತುಂಬಾ ಪ್ರತಿಭಾವಂತ ನಟ. ದುಃಖ ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ" ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ರಿತೇಶ್ ದೇಶಮುಖ್

ರಿತೇಶ್ ದೇಶಮುಖ್

"ಸುಶಾಂತ್ ಸಿಂಗ್ ಇನ್ನಿಲ್ಲ ಎನ್ನುವ ಸುದ್ದಿ ಆಘಾತವುಂಟು ಮಾಡಿದೆ. ಮಾತುಗಳೆ ಬರುತ್ತಿಲ್ಲ. ತುಂಬಾ ದುಃಖವಾಗುತ್ತಿದೆ" ಎಂದು ರಿತೇಶ್ ದೇಶಮುಖ್ ಟ್ವೀಟ್ ಮಾಡಿದ್ದಾರೆ.

ರವೀನಾ ಟಂಡನ್

ರವೀನಾ ಟಂಡನ್

"ಈ ಸುದ್ದಿ ನಿಜಕ್ಕು ದೊಡ್ಡ ಆಘಾತವುಂಟು ಮಾಡಿದೆ. ಮಾತುಗಳೆ ಬರುತ್ತಿಲ್ಲ. ತುಂಬ ಚಿಕ್ಕ ವಯಸ್ಸು ಮತ್ತು ಪ್ರತಿಭಾವಂತ ನಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ರವೀನಾ ಟಂಡನ್ ಹೇಳಿದ್ದಾರೆ.

ದುಲ್ಕರ್ ಸಲ್ಮಾನ್

ದುಲ್ಕರ್ ಸಲ್ಮಾನ್

"ಸುದ್ದಿ ಕೇಳಿ ಹೃದಯಛಿದ್ರವಾಗಿದೆ. ನನಗೆ ವೈಯಕ್ತಿಕವಾಗಿ ತಿಳಿದಿರುವ ವ್ಯಕ್ತಿಯಲ್ಲ. ಆದರೆ ಇದು ನಿಜವಾಗಿಯು ಆಘಾತವುಂಟು ಮಾಡಿದೆ. ಚಿಕ್ಕ ವಯಸ್ಸು ಮತ್ತು ಪ್ರತಿಭಾವಂತ ನಟ. ಆತ್ಮಕ್ಕೆ ಶಾಂತಿ ಸಿಗಲಿ." ಎಂದು ಮಲಯಾಳಂ ನಟ ದುಲ್ಕರ್ ಸಲ್ಮಾನ್ ಟ್ವೀಟ್ ಮಾಡಿದ್ದಾರೆ.

ನಟಿ ರಕ್ಷಿತಾ ಪ್ರೇಮ್

ನಟಿ ರಕ್ಷಿತಾ ಪ್ರೇಮ್

"ಇಂದು ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏನಾಗಿದೆ. ನಿಜಕ್ಕು ತುಂಬಾ ದುಃಖವಾಗುತ್ತಿದೆ. 2020 ಸಾಕಾಗಿದೆ" ಎಂದು ನಟಿ ರಕ್ಷಿತಾ ಪ್ರೇಮ್ ಟ್ವೀಟ್ ಮಾಡಿದ್ದಾರೆ.

ನಟಿ ತಮನ್ನಾ

ನಟಿ ತಮನ್ನಾ

"ಈ ಸುದ್ದಿ ಆಘಾತವುಂಟುಮಾಡಿದೆ ಮತ್ತು ಹೃದಯಛಿದ್ರವಾಗಿದೆ. ಚಿಕ್ಕವಯಸ್ಸಿನ ಪ್ರತಿಭಾವಂತ ನಟ ಇಷ್ಟು ಬೇಗ ಹೋಗಬಾರದಿತ್ತು. ಆತ್ಕ್ಕೆ ಶಾಂತಿ ಸಿಗಲಿ" ಎಂದು ನಟಿ ತಮನ್ನಾ ಟ್ವೀಟ್ ಮಾಡಿದ್ದಾರೆ.

More from Filmibeat

English summary
Film stars mourn to Actor Sushant Singh Rajput death. Actor Sushant Singh Rajput commit suicide at his Mumbai residence.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X