twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಆಗಲಿದೆ ಅಪ್ಪನನ್ನು ಕೂರಿಸಿಕೊಂಡು 1200 ಕಿ.ಮೀ. ಸೈಕಲ್ ತುಳಿದ ಬಾಲಕಿಯ ಕಥೆ

    |

    ಅಪಘಾತದಲ್ಲಿ ಗಾಯಗೊಂಡಿದ್ದ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು 1,200 ಕಿ.ಮೀ. ದೂರದಲ್ಲಿರುವ ತನ್ನೂರಿಗೆ ಕರೆದೊಯ್ದಿದ್ದ 15ರ ಬಾಲಕಿಯ ಸಾಹಸಗಾಥೆ, ದೇಶದಾದ್ಯಂತ ಸುದ್ದಿಯಾಗಿತ್ತು. ಈ ಘಟನೆ ಅನೇಕರ ಮನಕಲಕಿತ್ತು. ಆ ಕಥೆ ಕೇಳಿದ್ದ ಅನೇಕರು ಬಾಲಕಿಯ ಕುಟುಂಬಕ್ಕೆ ಸಹಾಯ ಮಾಡಲು ಮುಂದಾಗಿದ್ದರು.

    Recommended Video

    Navya Swamy, Corona Positive:ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ವೈರಸ್ ಪಾಸಿಟಿವ್ | Filmibeat Kannada

    ಲಾಕ್ ಡೌನ್ ಅವಧಿಯಲ್ಲಿ 15 ವರ್ಷದ ಜ್ಯೋತಿ ಕುಮಾರಿ ಪಾಸ್ವಾನ್, ಗಾಯಾಳು ತಂದೆಯನ್ನು ದೆಹಲಿಯಿಂದ 1,200 ಕಿ.ಮೀ. ದೂರದಲ್ಲಿರುವ ತನ್ನ ಹಳ್ಳಿಗೆ ಸೈಕಲ್ ಮೇಲೆ ಕೂರಿಸಿಕೊಂಡು ಕರೆದುತಂದಿದ್ದಳು. ಆಕೆಯ ಮಾನಸಿಕ ಹಾಗೂ ದೈಹಿಕ ಶಕ್ತಿ ಮತ್ತು ಸ್ಥೈರ್ಯ, ಬದುಕಿನ ಛಲ ಹಾಗೂ ಎದೆಗಾರಿಕೆ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಹಾಗೆಯೇ ಸ್ಫೂರ್ತಿ ನೀಡಿತ್ತು. ತಂದೆಯ ಮೇಲಿನ ಪ್ರೀತಿ ಹೃದಯಕ್ಕೆ ನಾಟುವಂತಿತ್ತು.

    ತಮ್ಮ ಜೀವನಾಧಾರಿತ ಸಿನಿಮಾದಲ್ಲಿ ಯಾರು ನಟಿಸಬೇಕು? ಅಚ್ಚರಿಯ ನಟನನ್ನು ಆರಿಸಿದ ಸುರೇಶ್ ರೈನಾತಮ್ಮ ಜೀವನಾಧಾರಿತ ಸಿನಿಮಾದಲ್ಲಿ ಯಾರು ನಟಿಸಬೇಕು? ಅಚ್ಚರಿಯ ನಟನನ್ನು ಆರಿಸಿದ ಸುರೇಶ್ ರೈನಾ

    ಇ-ರಿಕ್ಷಾ ಚಾಲಕನಾಗಿದ್ದ ಜ್ಯೋತಿ ತಂದೆ ಮೋಹನ್ ಪಾಸ್ವಾನ್ ಅಪಘಾತದಲ್ಲಿ ಗಾಯಗೊಂಡಿದ್ದರು. ಇದರಿಂದ ಕೆಲಸ ಮಾಡಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅವರು ಬಾಡಿಗೆ ಪಾವತಿಸಲು ಪರದಾಡಿದ್ದರು. ಇದರಿಂದ ಮನೆ ಮಾಲೀಕ ಬೆದರಿಕೆ ಹಾಕಿದ್ದ. ಮೋಹನ್ ಜತೆಗೆ ವಾಸಿಸುತ್ತಿದ್ದ ಜ್ಯೋತಿ ಹಠಕಟ್ಟಿ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಬಿಹಾರದ ತಮ್ಮ ಹಳ್ಳಿಗೆ ಕರೆತಂದಿದ್ದರು. ಮುಂದೆ ಓದಿ...

    ತನ್ನದೇ ಕಥೆಯಲ್ಲಿ ನಟನೆ

    ತನ್ನದೇ ಕಥೆಯಲ್ಲಿ ನಟನೆ

    ಈಗ ಆಕೆಯ ಈ ಸಾಹಸ ಮತ್ತು ಬದುಕಿನ ಕಥೆ ಸಿನಿಮಾ ರೂಪ ತಾಳುತ್ತಿದೆ. ಮತ್ತೂ ಒಂದು ವಿಶೇಷವೆಂದರೆ ಈ ಚಿತ್ರದಲ್ಲಿ ತನ್ನ ಪಾತ್ರವನ್ನು ಆಕೆಯೇ ನಿರ್ವಹಿಸಲಿದ್ದಾಳೆ. ಚಿತ್ರಕ್ಕೆ 'ಆತ್ಮನಿರ್ಭರ್' ಎಂಬ ಶೀರ್ಷಿಕೆ ಇಡಲಾಗಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಂಕಷ್ಟದ ನಡುವೆ ಬೆಳಕಿನಂತೆ ಕಾಣಿಸಿದ್ದ ಜ್ಯೋತಿ, ತನ್ನದೇ ಕಥೆ ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದಾಳೆ. ಇದು ಬಹಳ ಖುಷಿ ನೀಡಿದೆ ಎಂದು ಹೇಳಿಕೊಂಡಿದ್ದಾಳೆ.

    ಆಗಸ್ಟ್‌ನಲ್ಲಿ ಚಿತ್ರೀಕರಣ

    ಆಗಸ್ಟ್‌ನಲ್ಲಿ ಚಿತ್ರೀಕರಣ

    ವಿ ಮೇಕ್ ಫಿಲಂಸ್ ನಿರ್ಮಾಣ ಸಂಸ್ಥೆ ಈ ಚಿತ್ರ ನಿರ್ಮಿಸುತ್ತಿದೆ. ಶೈನ್ ಕೃಷ್ಣ ನಿರ್ದೇಶನ ಮಾಡಲಿದ್ದು, ಆಗಸ್ಟ್ ವೇಳೆ ಸಿನಿಮಾ ಚಟುವಟಿಕೆಗಳು ಆರಂಭವಾಗಲಿವೆ. ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುತ್ತಿರುವ ಮಿರಾಜ್ ಮತ್ತು ಫೈರೋಜ್ ಹಾಗೂ ಕೃಷ್ಣ ಮತ್ತು ಸಜಿತ್ ನಂಬಿಯಾರ್ ಎಂಬುವವರ ಚಿತ್ರದ ಹಕ್ಕುಗಳನ್ನು ಈಗಾಗಲೇ ಪಡೆದುಕೊಂಡಿದ್ದಾರೆ.

    ಪ್ರಯಾಣದ ದಾರಿಯಲ್ಲೇ ಚಿತ್ರೀಕರಣ

    ಪ್ರಯಾಣದ ದಾರಿಯಲ್ಲೇ ಚಿತ್ರೀಕರಣ

    ಇದು ಫಿಕ್ಷನಲ್ ರೂಪದಲ್ಲಿ ಮೂಡಿಬರುವ ಸಿನಿಮಾ. ಜ್ಯೋತಿ ಅನುಭವಿಸಿದ ಸಂಕಷ್ಟಗಳನ್ನಷ್ಟೇ ಸಾಕ್ಷ್ಯಚಿತ್ರದ ರೂಪದಲ್ಲಿ ನೀಡುವುದಿಲ್ಲ. ಮೇ ತಿಂಗಳಿನಲ್ಲಿ ದೆಹಲಿಯಿಂದ ಬಿಹಾರದ ಹಳ್ಳಿಯವರೆಗೆ ಸೈಕಲ್‌ ಓಡಿಸಿದ ಬಹಳ ತ್ರಾಸದಾಯಕ ಪ್ರಯಾಣದ ನಡುವೆ ಎದುರಾದ ವ್ಯವಸ್ಥೆಯ ಸಮಸ್ಯೆಗಳನ್ನೂ ಇದು ಚಿತ್ರಿಸಲಿದೆ. ಗುರುಗ್ರಾಮದಿಂದ ದರ್ಬಾಂಗಾದವರೆಗೆ ಜ್ಯೋತಿ ಪ್ರಯಾಣಿಸಿದ ನೈಜ ಸ್ಥಳಗಳಲ್ಲಿಯೇ ಚಿತ್ರೀಕರಣ ನಡೆಯಲಿದೆ.

    ಮೂರು ಭಾಷೆಗಳಲ್ಲಿ ಸಿನಿಮಾ

    ಮೂರು ಭಾಷೆಗಳಲ್ಲಿ ಸಿನಿಮಾ

    ಈ ಚಿತ್ರ ಹಿಂದಿ, ಇಂಗ್ಲಿಷ್ ಹಾಗೂ ಮೈಥಿಲಿ ಭಾಷೆಗಳಲ್ಲಿ ತಯಾರಾಗಲಿದ್ದು, ಬಳಿಕ ಇತರೆ ಭಾಷೆಗಳಿಗೆ ಡಬ್ ಆಗಲಿದೆ. ಅಂತಾರಾಷ್ಟ್ರೀಯ ವಲಯದ ಪ್ರೇಕ್ಷಕರಿಗಾಗಿ ಈ ಚಿತ್ರದ ಶೀರ್ಷಿಕೆಯನ್ನು 'ಎ ಜರ್ನಿ ಆಪ್ ಎ ಮೈಗ್ರೆಂಟ್' ಎಂದು ಹೆಸರಿಡಲಾಗಿದೆ. 20 ಭಾಷೆಗಳಲ್ಲಿ ಉಪ ಶೀರ್ಷಿಕೆ ಇರಲಿದೆ ಎಂದು ಕೃಷ್ಣ ತಿಳಿಸಿದ್ದಾರೆ.

    ಪ್ರಸಿದ್ಧ ಕ್ರೀಡಾಪಟುವಿನ ಬಯೋಪಿಕ್ ಸಿನಿಮಾ ತಿರಸ್ಕರಿಸಿದರೇ ನಿತ್ಯಾ ಮೆನನ್?ಪ್ರಸಿದ್ಧ ಕ್ರೀಡಾಪಟುವಿನ ಬಯೋಪಿಕ್ ಸಿನಿಮಾ ತಿರಸ್ಕರಿಸಿದರೇ ನಿತ್ಯಾ ಮೆನನ್?

    English summary
    15 year old girl Jyoti Kumari who cycled 12,000 KM with injured father from Delhi to Bihar to star in a film based on her journey.
    Wednesday, July 8, 2020, 23:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X