ಫಿಲಂಫೇರ್: 'ದಂಗಲ್' ಚಿತ್ರಕ್ಕೆ ನಾಲ್ಕು ಪ್ರಶಸ್ತಿಗಳ ಸಂಭ್ರಮ

ಸಂಕ್ರಾಂತಿಯಂದು ಶನಿವಾರ ನಡೆದ 62ನೇ ಜಿಯೋ ಫಿಲಂ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಕಳೆದ ವರ್ಷಾಂತ್ಯಕ್ಕೆ ತೆರೆಕಂಡು ಬಾಲಿವುಡ್ ನ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವ ದಂಗಲ್ ಚಿತ್ರ ನಾಲ್ಕು ಪ್ರಶಸ್ತಿಗಳನ್ನು ಬಾಚಿದೆ.

ಸಂಕ್ರಾಂತಿಯಂದು ಶನಿವಾರ ನಡೆದ 62ನೇ ಜಿಯೋ ಫಿಲಂ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಕಳೆದ ವರ್ಷಾಂತ್ಯಕ್ಕೆ ತೆರೆಕಂಡು ಬಾಲಿವುಡ್ ನ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವ ದಂಗಲ್ ಚಿತ್ರ ನಾಲ್ಕು ಪ್ರಶಸ್ತಿಗಳನ್ನು ಬಾಚಿದೆ.
ಇದರೊಂದಿಗೆ, 'ನೀರ್ಜಾ' ಹಾಗೂ 'ಕಪೂರ್ ಅಂಡ್ ಸನ್ಸ್ (ಸಿನ್ಸ್ 1920)' ಚಿತ್ರಗಳೂ ತಲಾ ನಾಲ್ಕು ಪ್ರಶಸ್ತಿಗಳನ್ನು ಬಾಚಿವೆ.

ಈ ಚಿತ್ರದ ನಾಯಕ ಅಮೀರ್ ಖಾನ್ ಶ್ರೇಷ್ಠ ನಟ ಪ್ರಶಸ್ತಿಗೆ ಭಾಜನವಾಗಿದ್ದರೆ, ಚಿತ್ರಕ್ಕೆ ಆ್ಯಕ್ಷನ್- ಕಟ್ ಹೇಳಿದ್ದ ನಿತೇಶ್ ತಿವಾರಿ ಶ್ರೇಷ್ಠ ನಿರ್ದೇಶಕ, ಶ್ಯಾಮ್ ಕೌಶಲ್ ಅವರಿಗೆ ಶ್ರೇಷ್ಠ ಸಾಹಸ ನಿರ್ದೇಶಕ ಪ್ರಶಸ್ತಿ ಪ್ರಶಸ್ತಿಗಳು ಲಭ್ಯವಾಗಿದೆಯಲ್ಲದೆ, ಚಿತ್ರಕ್ಕೆ ಶ್ರೇಷ್ಠ ಸಿನಿಮಾ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ.

ಇನ್ನು, ಈ ಬಾರಿಯ ಶ್ರೇಷ್ಠ ನಟಿ ಪ್ರಶಸ್ತಿಯು ಆಲಿಯಾ ಭಟ್ ಪಾಲಾಗಿದೆ. ಉಡ್ತಾ ಪಂಜಾಬ್ ಚಿತ್ರದ ನಟನೆಗಾಗಿ ಅವರು ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Filmfare Awards 2017: Full Winners List!

ಇನ್ನು, ನಟ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಅವರು 'ನೀರ್ಜಾ' ಚಿತ್ರದ ಅಭಿನಯಕ್ಕಾಗಿ ವಿಮರ್ಶಕರ ವಿಭಾಗದ ಶ್ರೇಷ್ಠ ಕಲಾವಿದೆ ಪ್ರಶಸ್ತಿಗೆ ಭಾಜನವಾಗಿದ್ದಾರೆ. ನಟರಾದ ಶಾಹೀದ್ ಕಪೂರ್ (ಉಡ್ತಾ ಪಂಜಾಬ್) , ಮನೋಜ್ ಬಾಜಪೇಯಿ (ಅಲೀಗಢ್) ಅವರಿಗೂ ವಿಮರ್ಶಕರ ಶ್ರೇಷ್ಠ ನಟ ಪ್ರಶಸ್ತಿಗಳು ಲಭಿಸಿವೆ.

ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ...

ಶ್ರೇಷ್ಠ ನಟ - ಆಮೀರ್ ಖಾನ್ (ದಂಗಲ್)

ಶ್ರೇಷ್ಠ ನಟಿ - ಆಲಿಯಾ ಭಟ್ (ಉಡ್ತಾ ಪಂಜಾಬ್)

ಶ್ರೇಷ್ಠ ಚಿತ್ರ - ದಂಗಲ್

ಶ್ರೇಷ್ಠ ನಿರ್ದೇಶಕ - ನಿತೇಶ್ ತಿವಾರಿ (ದಂಗಲ್)

ಶ್ರೇಷ್ಠ ಹೊಸ ನಟ - ದಲ್ಜೀತ್ ದೋಸಂಜ್ (ಉಡ್ತಾ ಪಂಜಾಬ್)

ಶ್ರೇಷ್ಠ ಹೊಸ ನಟಿ - ರಿತಿಕಾ ಸಿಂಗ್ ( ಸಾಲಾ ಖಡೂಸ್)

ಶ್ರೇಷ್ಠ ಸಂಭಾಷಣೆ - ರಿತೇಶ್ ಶಾ (ಪಿಂಕ್)

ಶ್ರೇಷ್ಠ ಚಿತ್ರಕತೆ - ಶಕುನ್ ಬಾತ್ರಾ ಹಾಗೂ ಆಯೇಷಾ ದೇವತ್ರೆ ದಿಲ್ಲೋನ್ (ಕಪೂರ್ ಆ್ಯಂಡ್ ಸನ್ಸ್ - ಸಿನ್ಸ್ 1921)

Filmfare Awards 2017: Full Winners List!

ಶ್ರೇಷ್ಠ ಪೋಷಕ ನಟ - ರಿಷಿ ಕಪೂರ್ (ಕಪೂರ್ ಆ್ಯಂಡ್ ಸನ್ಸ್ - ಸಿನ್ಸ್ 1920)

ಶ್ರೇಷ್ಠ ಪೋಷಕ ನಟಿ - ಶಬಾನಾ ಆಜ್ಮಿ (ನೀರ್ಜಾ)

ಶ್ರೇಷ್ಠ ಸಂಗೀತ - ಪ್ರೀತಮ್ (ಏ ದಿಲ್ ಹೇ ಮುಷ್ಕಿಲ್)

ಶ್ರೇಷ್ಠ ಗೀತೆ ರಚನೆ - ಅಮಿತಾಭ್ ಭಟ್ಟಾಚಾರ್ಯ (ಏ ದಿಲೇ ಹೇ ಮುಷ್ಕಿಲ್ ಚಿತ್ರದ 'ಚನ್ನಾ ಮೆರೇಯಾ' ಹಾಡಿಗಾಗಿ )

ಶ್ರೇಷ್ಠ ಹಿನ್ನೆಲೆ ಗಾಯಕ - ಅರ್ಜೀತ್ ಸಿಂಗ್ (ಎ ದಿಲ್ ಹೈ ಮುಷ್ಕಿಲ್ ಚಿತ್ರದ ಟೈಟಲ್ ಹಾಡಿಗಾಗಿ)

ಶ್ರೇಷ್ಠ ಹಿನ್ನೆಲೆ ಗಾಯಕಿ - ನೇಹಾ ಭಾಸಿನ್ (ಸುಲ್ತಾನ್ ಚಿತ್ರದ 'ಜಗ್ ಘೂಮೇಯಾ ಹಾಡಿಗಾಗಿ')

ಫಿಲಂಫೇರ್ ಜೀವಮಾನ ಸಾಧನೆ ಪ್ರಶಸ್ತಿ - ಶತ್ರುಜ್ಞ ಸಿನ್ಹಾ


ವಿಮರ್ಶಕರ ವಿಭಾಗ:

ವಿಮರ್ಶಕ ವಿಭಾಗದ ಶ್ರೇಷ್ಠ ಚಿತ್ರ - ನೀರ್ಜಾ

ವಿಮರ್ಶಕರ ವಿಭಾಗದ ಶ್ರೇಷ್ಠ ನಟಿ - ಸೋನಮ್ ಕಪೂರ್ (ನೀರ್ಜಾ)

ವಿಮರ್ಶಕರ ವಿಭಾಗದ ಶ್ರೇಷ್ಠ ನಟರು - ಶಾಹೀದ್ ಕಪೂರ್ (ಉಡ್ತಾ ಪಂಜಾಬ್), ಮನೋಜ್ ಬಾಜ್ ಪೇಯಿ (ಆಲಿಗಢ)


ಕಿರು ಚಿತ್ರಗಳ ವಿಭಾಗ:

ಕಿರು ಚಿತ್ರದ ಶ್ರೇಷ್ಠ ನಟ - ಮನೋಜ್ ಬಾಜ್ ಪೇಯಿ (ತಾಂಡವ್)

ಕಿರು ಚಿತ್ರದ ಶ್ರೇಷ್ಠ ನಟಿ - ಟಿಸ್ಕಾ ಚೋಪ್ರಾ (ನಿಲ್ ಬ್ಯಾಟರಿ ಸನ್ನಾಟ)

ಶ್ರೇಷ್ಠ ಕಿರು ಚಿತ್ರ - ಚಟ್ನಿ

ಶ್ರೇಷ್ಠ ಕಿರುಚಿತ್ರ (ಪೀಪಲ್ಸ್ ಚಾಯ್ಸ್) - ಖಮಖಾ

ಶ್ರೇಷ್ಠ ಕಿರುಚಿತ್ರ (ನಾನ್ ಫಿಕ್ಷನ್) - ಮಟಿಟಾಲಿ ಕುಸ್ತಿ.

More from Filmibeat

English summary
Aamir Khan bagged the Best Actor Award for his performance in 'Dangal'. Alia Bhatt was honoured with the Best Actress Award for her gritty portrayal of a Bihari migrant in 'Udta Punjab'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X