For Quick Alerts
  ALLOW NOTIFICATIONS  
  For Daily Alerts

  ಫಿಲಂಫೇರ್ ಪ್ರಶಸ್ತಿ ಗೆದ್ದ 'ಲವ್ ಬರ್ಡ್ಸ್' ರಣಬೀರ್, ಆಲಿಯಾ ಭಟ್

  By ಜೇಮ್ಸ್ ಮಾರ್ಟಿನ್
  |

  64ನೇ ವಿಮಲ್ ಫಿಲಂ ಫೇರ್ ಪ್ರಶಸ್ತಿ 2019 ಪಟ್ಟಿ ಪ್ರಕಟಗೊಂಡಿದೆ. ಮಾರ್ಚ್ 23, 2019 ರಂದು ಜಿಯೋ ಗಾರ್ಡನ್ ನಲ್ಲಿ ಕಿಂಗ್ ಖಾನ್ ಶಾರುಖ್ ನಿರೂಪಣೆಯಲ್ಲಿ ತಾರೆಗಳ ತೋಟ ಮೇಳೈಸಿತ್ತು. ಮೇಘನಾ ಗುಲ್ಜಾರ್ ನಿರ್ದೇಶನದ ರಾಜಿ ಚಿತ್ರ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಅದರಲ್ಲೂ ಚಿತ್ರದ ನಾಯಕಿ ಆಲಿಯಾ ಭಟ್ ಅವರು ಅತ್ಯುತ್ತಮ ನಾಯಕಿ ಪ್ರಶಸ್ತಿ ಗೆದ್ದರೆ, ಅತ್ಯುತ್ತಮ ನಾಯಕ ಪ್ರಶಸ್ತಿಯನ್ನು 'ಸಂಜು' ಪಾತ್ರ ನಿರ್ವಹಿಸಿದ ರಣಬೀರ್ ಕಪೂರ್ ಗೆದ್ದರು. ಪ್ರೇಮಿಗಳಾದ ರಣಬೀರ್ -ಆಲಿಯಾ ಈ ಬಾರಿಯ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು.

  ಈ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಣವೀರ್ ಸಿಂಗ್, 'ಉರಿ' ಖ್ಯಾತಿಯ ವಿಕಿ ಕೌಶಲ್, ಕೃತಿ ಸನೋನ್, ಜಾನ್ವಿ ಕಪೂರ್, ರಾಜ್ ಕುಮಾರ್ ರಾವ್ ಅವರೊಂದಿಗೆ ಹಲವು ನಟ/ನಟಿಯರು ಕುಣಿದು ಕುಪ್ಪಳಿಸಿ ಎಲ್ಲರನ್ನು ರಂಜಿಸಿದರು.

  64ನೇ ಫಿಲಂಫೇರ್ ಪ್ರಶಸ್ತಿ ರೇಸಿನಲ್ಲಿ ಅಕ್ಷಯ್, ರಣಬೀರ್, ಅಲಿಯಾ64ನೇ ಫಿಲಂಫೇರ್ ಪ್ರಶಸ್ತಿ ರೇಸಿನಲ್ಲಿ ಅಕ್ಷಯ್, ರಣಬೀರ್, ಅಲಿಯಾ

  ಕಳೆದ ಹಲವಾರು ವರ್ಷಗಳಿಂದ, ಫಿಲಂ ಫೇರ್ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ವಿಮಲ್ ಅವರ ಮೊದಲ ಸಹಭಾಗಿತ್ವದಲ್ಲಿ, ಈ ಬಾರಿ ತನ್ನ 64 ನೇ ವರ್ಷದ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

  ಫಿಲಂಫೇರ್ ಪ್ರಶಸ್ತಿ ಗೆದ್ದ 'ಲವ್ ಬರ್ಡ್ಸ್' ರಣಬೀರ್, ಆಲಿಯಾ
  ಅತ್ಯುತ್ತಮ ಚಿತ್ರ: ರಾಜಿ

  ಮೇಘನಾ ಗುಲ್ಜಾರ್ ನಿರ್ದೇಶನದ ರಾಜಿ ಚಿತ್ರ ಅತ್ಯುತ್ತಮ ಚಿತ್ರವೆನಿಸಿದೆ. ಅಂಧಾಧುನ್, ಬಧಾಯಿ ಹೋ, ಪದ್ಮಾವತ್, ಸಂಜು ಹಾಗೂ ಸ್ತ್ರೀ ಚಿತ್ರಗಳನ್ನು ಆಲಿಯಾ ಭಟ್ ಅಭಿನಯದ 'ರಾಜಿ' ಹಿಂದಿಕ್ಕಿದೆ.

  ಅತ್ಯುತ್ತಮ ನಟಿ : ಆಲಿಯಾ ಭಟ್

  ಅತ್ಯುತ್ತಮ ನಟಿ : ಆಲಿಯಾ ಭಟ್

  ಆಲಿಯಾ ಭಟ್ ಅವರು ರಾಜಿ ಚಿತ್ರದ ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿ ಗೆದ್ದಿದ್ದಾರೆ. ಇದು ಆಲಿಯಾ ಅವರಿಗೆ ಇದು ಎರಡನೇ ಫಿಲಂಫೇರ್ ಆಗಿದೆ. ಪ್ರಶಸ್ತಿ ಗೆದ್ದ ನಂತರ ಮಾತನಾಡಿದ ಆಲಿಯಾ, ಮೇಘನಾ ಈ ಪ್ರಶಸ್ತಿ ನಿಮಗೆ ಅರ್ಪಣೆ, ನನ್ನ ಮೆಂಟರ್ ಕರಣ್, ತಂದೆ ಹಾಗೂ ಕುಟುಂಬದ ಸಹಕಾರಕ್ಕೆ ಧನ್ಯವಾದ ಎಂದರು, ಕೊನೆಯಲ್ಲಿ ಐ ಲವ್ ಯೂ ರಣಬೀರ್ ಎಂದಿದ್ದು, ಸಮಾರಂಭದಲ್ಲಿ ಕಿಚ್ಚೆಬ್ಬಿಸಿತು.

  ಅಲಿಯಾ ಅವರಿಗೆ ದೀಪಿಕಾ ಪಡುಕೋಣೆ, ನೀನಾ ಗುಪ್ತಾ, ರಾಣಿ ಮುಖರ್ಜಿ, ತಬು ಅವರು ಪೈಪೋಟಿ ನೀಡಿದ್ದರು.

  ಸಂಜು ಪಾತ್ರಧಾರಿ ರಣಬೀರ್

  ಸಂಜು ಪಾತ್ರಧಾರಿ ರಣಬೀರ್

  ಸಂಜಯ್ ದತ್ ಅವರ ಜೀವನಾಧಾರಿತ ಚಿತ್ರ 'ಸಂಜು' ಪಾತ್ರಧಾರಿ ರಣಬೀರ್ ಕಪೂರ್ ಅವರು ಫಿಲಂಫೇರ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ರಣಬೀರ್ ಅವರಿಗೆ ಅಕ್ಷಯ್ ಕುಮಾರ್, ಆಯುಷ್ಮಾನ್ ಖುರಾನ, ರಾಜ್ ಕುಮಾರ್, ರಣವೀರ್ ಸಿಂಗ್, ಶಾರುಖ್ ಖಾನ್ ಅವರು ಪೈಪೋಟಿ ನೀಡಿದ್ದರು.' ಇದು ಅಭಿಮಾನಿಗಳು ಗೆಲ್ಲಿಸಿಕೊಟ್ಟ ಪ್ರಶಸ್ತಿ ಇದನ್ನು ಅವರಿಗೆ ಅರ್ಪಿಸುತ್ತೇನೆ' ಎಂದು ರಣಬೀರ್ ಕಪೂರ್ ಅವರು ಹೇಳಿದರು.

  64ನೇ ಫಿಲಂಫೇರ್ ಪ್ರಶಸ್ತಿ, ಶಾರುಖ್ ನಿರೂಪಣೆ, ರಣವೀರ್ ಆಕರ್ಷಣೆ 64ನೇ ಫಿಲಂಫೇರ್ ಪ್ರಶಸ್ತಿ, ಶಾರುಖ್ ನಿರೂಪಣೆ, ರಣವೀರ್ ಆಕರ್ಷಣೆ

  ರಣವೀರ್ ಹಾಗೂ ಆಯುಷ್ಮಾನ್ ಗೂ ಪ್ರಶಸ್ತಿ

  ರಣವೀರ್ ಹಾಗೂ ಆಯುಷ್ಮಾನ್ ಗೂ ಪ್ರಶಸ್ತಿ

  ಅತ್ಯುತ್ತಮ ನಾಯಕ ನಟ ಪ್ರಶಸ್ತಿಗೂ ಸ್ಪರ್ಧಿಸಿದ್ದ ರಣವೀರ್ ಸಿಂಗ್ ಹಾಗೂ ಆಯುಷ್ಮಾನ್ ಖುರಾನಾ ಅವರಿಗೆ ವಿಮರ್ಶಕರ ಮೆಚ್ಚುಗೆಯ ನಟ ಪ್ರಶಸ್ತಿ ಸಿಕ್ಕಿದೆ. ಬಧಾಯಿ ಹೋ ಚಿತ್ರದ ಅಭಿನಯಕ್ಕಾಗಿ ನೀನಾ ಗುಪ್ತಾ ಅವರಿಗೆ ವಿಮರ್ಶಕರ ಮೆಚ್ಚುಗೆಯ ನಟಿ ಪ್ರಶಸ್ತಿ ಲಭಿಸಿದೆ.

  ಫಿಲಂಫೇರ್ ಪ್ರಶಸ್ತಿಗಳ ಪಟ್ಟಿ 1

  ಫಿಲಂಫೇರ್ ಪ್ರಶಸ್ತಿಗಳ ಪಟ್ಟಿ 1

  * ಚೊಚ್ಚಲ ಚಿತ್ರ ಅತ್ಯುತ್ತಮ ನಟಿ: ಸಾರಾ ಅಲಿ ಖಾನ್, ಕೇದರಾನಾಥ್
  * ಚೊಚ್ಚಲ ಚಿತ್ರ ಅತ್ಯುತಮ ನಟ: ಇಶಾನ್ ಖಟ್ಟರ್, ಬಿಯಾಂಡ್ ದಿ ಕ್ಲೌಡ್ಸ್
  * ಅತ್ಯುತ್ತಮ ನಿರ್ದೇಶಕಿ : ಮೇಘನಾ ಗುಲ್ಜಾರ್, ರಾಜಿ
  * ಅತ್ಯುತ್ತಮ ನಿರ್ದೇಶಕ (ಚೊಚ್ಚಲ ಚಿತ್ರ): ಅಮರ್ ಕೌಶಿಕ್, ಸ್ತ್ರೀ
  * ಪೋಷಕ ನಟ : ಗಜರಾಜ್ ರಾವ್, ಬಧಾಯಿ ಹೋ ಹಾಗೂ ವಿಕ್ಕಿ ಕೌಶಲ್, ಸಂಜು
  * ಪೋಷಕ ನಟಿ: ಸುರೇಖಾ ಸಿಕ್ರಿ, ಬಧಾಯಿ ಹೋ
  * ಅತ್ಯುತ್ತಮ ಡೈಲಗ್ : ಅಕ್ಷತ್ ಘಿಲ್ದಿಡಿಯ್ಲ್, ಬಧಾಯಿ ಹೋ

  ಪ್ರಶಸ್ತಿಗಳ ಪಟ್ಟಿ 2

  ಪ್ರಶಸ್ತಿಗಳ ಪಟ್ಟಿ 2

  * ಅತ್ಯುತ್ತಮ ಮ್ಯೂಸಿಕ್ ಅಲ್ಬಂ: ಪದ್ಮಾವತ್
  * ಅತ್ಯುತ್ತಮ ಗಾಯಕ : ಅರ್ಜಿತ್ ಸಿಂಗ್, ಏ ವತನ, ರಾಜಿ
  * ಅತ್ಯುತ್ತಮ ಗಾಯಕಿ : ಶ್ರೇಯಾ ಘೋಷಾಲ್ , ಘೂಮಾರ್, ಪದ್ಮಾವತ್
  * ಅತ್ಯುತ್ತಮ ಸಾಹಿತ್ಯ : ಏ ವತನ್, ರಾಜಿ
  * ಹಿನ್ನಲೆ ಸಂಗೀತ : ಡೇನಿಯಲ್ ಜಾರ್ಜ್, ಅಂಧಾಧುನ್
  * ನೃತ್ಯ ಸಂಯೋಜನೆ: ಪದ್ಮಾವತ್ ಚಿತ್ರಕ್ಕಾಗಿ ಕೃತಿ ಮಹೇಶ್, ಜ್ಯೋತಿ ತೋಮಾರ್
  * ಛಾಯಾಗ್ರಹಣ; ಪಂಕಜ್ ಕುಮಾರ್, ತುಂಬಾಡ್
  * ಸೌಂಡ್ ಡಿಸೈನ್: ಕುನಾಲ್ ಶರ್ಮ, ತುಂಬಾಡ್

  English summary
  The complete list of winners of the Filmfare Awards 2019 is out. best part of the event was when lovebirds Alia Bhatt and Ranbir Kapoor took home the black lady for the Best Actor (female and male respectively). Check out the complete list of the winners of the Filmfare Awards 2019 below.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X