Filmfare Awards 2024: ಆಲಿಯಾ ಭಟ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿಗೆ ನೆಟ್ಟಿಗರ ಬೇಸರ, ಅಯ್ಯೋ ಯಾಕಿಂಗೆ?

69ನೇ ಫಿಲ್ಮ್‌ಫೇರ್ ಅವಾರ್ಡ್ಸ್ 2024 ಭಾನುವಾರ (ಜನವರಿ 28) ರಾತ್ರಿ ಗುಜರಾತ್‌ನ ಗಾಂಧಿನಗರದಲ್ಲಿ ನಡೆದಿದೆ. ಈ ಅದ್ದೂರಿ ಕಾರ್ಯಕ್ರಮವನ್ನು ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಮತ್ತು ಆಯುಷ್ಮಾನ್ ಖುರಾನಾ ನಡೆಸಿಕೊಟ್ಟಿದ್ದಾರೆ. ನಟಿ ಕರೀನಾ ಕಪೂರ್ ಖಾನ್, ವರುಣ್ ಧವನ್, ಸಾರಾ ಅಲಿ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ವಿಕ್ರಾಂತ್ ಮಾಸ್ಸೆ, ಮೃಣಾಲ್ ಠಾಕೂರ್, ಜಾನ್ವಿ ಕಪೂರ್ ಮತ್ತು ಇತರರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇಡೀ ಬಾಲಿವುಡ್ ತಾರೆಯರು ತುಂಬಿದ ಈ ಸಮಾರಂಭದಲ್ಲಿ ಹೆಚ್ಚಿನ ಪ್ರಶಸ್ತಿಗಳನ್ನು ಅರ್ಹ ಕಲಾವಿದರಿಗೆ ಸಿಕ್ಕಿದೆ ಎಮದು ನೆಟ್ಟಿಗರು ಹೇಳುತ್ತಾರೆ. ಆದರೆ, ಸೋಶಿಯಲ್ ಮಿಡಿಯಾದಲ್ಲಿ ಒಂದು ಪ್ರಶಸ್ತಿ ಬಗ್ಗೆ ಮಾತ್ರ ತಕರಾರು ಎದ್ದಿದೆ. ಹೌದು... ನಟಿ ಆಲಿಯಾ ಭಟ್ ಅವರಿಗೆ ಅತ್ಯುತ್ತಮ ನಟಿ (ಜನಪ್ರಿಯ) ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದ್ದು, ಇದು ನರ ಬೇಸರಕ್ಕೆ ಕಾರಣವಾಗಿದೆ.

Filmfare Awards 2024: Why Netizens Upset With Alia Bhatts Best Actress Win?

ಆಲಿಯಾಗೆ ಅತ್ಯುತ್ತಮ ನಟಿ, ನೆಟ್ಟಿಗರ ಬೇಸರ!

ಕಳೆದ ವರ್ಷ ಬೊಡುಗಡೆಯಾಗಿ ಸೂಪರ್ ಹಿಟ್ ಆದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಆಲಿಯಾ ಭಟ್ ಅವರಿಗೆ ಅತ್ಯುತ್ತಮ ನಟಿ (ಜನಪ್ರಿಯ) ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಏಕೆಂದರೆ, 'ಮಿಸೆಸ್ ಚಟರ್ಜಿ Vs ನಾರ್ವೆ' ಚಿತ್ರದಲ್ಲಿನ ಅಭಿನಯಕ್ಕಾಗಿ ರಾಣಿ ಮುಖರ್ಜಿಗೆ ಆ ಪ್ರಶಸ್ತಿ ಸಿಗಬೇಕಿತ್ತು. ಅವರು ಆ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಅವರ ಗೆಲುವಿನಿಂದ ಸಂತೋಷವಾಗಿಲ್ಲ.

ರಾಣಿ ಮುಖರ್ಜಿ ಅವರಿಗೆ ಮಿಸೆಸ್ ಚಟರ್ಜಿ Vs ನಾರ್ವೆ' ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ (ವಿಮರ್ಶಕರು) ಪ್ರಶಸ್ತಿಯನ್ನು ನೀಡಲಾಗಿದೆ. ರಾಣಿ ಮುಖರ್ಜಿ ಅಥವಾ ಕಿಯಾರಾ ಅಡ್ವಾಣಿ ಅಥವಾ ತಾಪ್ಸೀ ಪನ್ನು ಈ ಮೂವರಲ್ಲಿ ಒಬ್ಬರು ಅತ್ಯುತ್ತಮ ನಟಿ (ಜನಪ್ರಿಯ) ಪ್ರಶಸ್ತಿಗೆ ಅರ್ಹರು. ಆಲಿಯಾ ಭಟ್ ಅಲ್ಲ ಎಂದು ಹಲವು ನೆಟ್ಟಿಗರು ಅಭೀಪ್ರಾಯ ಹೊರಹಾಕಿದ್ದಾರೆ.

ಆಲಿಯಾ ಭಟ್ ಅವರ ಗೆಲುವಿಗೆ ನೆಟ್ಟಿಗರ ಪ್ರತಿಕ್ರಿಯೆ

ಸೋಶಿಯಲ್ ಮಿಡಿಯಾದಲ್ಲಿ ವಿಧ ವಿಧವಾಗಿ ಕಾಮೆಂಟ್ ಮಾಡುತ್ತಿರುವ ಜನರು, "ಗಂಗೂಬಾಯಿ ಕಾಥಿಯಾವಾಡ ಸಿನಿಮಾಕ್ಕಾಗಿ ಅವರು ಪ್ರಶಸ್ತಿ ಗೆದ್ದಾಗ ಯಾರೂ ಏನನ್ನೂ ಹೇಳಲಿಲ್ಲ. ಏಕೆಂದರೆ ಅದಕ್ಕೆ ಅವರು ಅರ್ಹರು. ಆದರೆ ಈ ಪ್ರಶಸ್ತಿಗೆ ಅವರು ಅರ್ಹರಲ್ಲ. ಅವರಿಗಿಂತ ಬೆಸ್ಟ್ ನಾಮಿನೇಟ್‌ಗಳು ಇದ್ದಾರೆ ಎಂದಿದ್ದಾರೆ.

Filmfare Awards 2024: Why Netizens Upset With Alia Bhatts Best Actress Win?

ಮತ್ತೊಬ್ಬರು, "ಆಲಿಯಾ ಭಟ್ ಅವರು ನಾಚಿಕೆಯಿಲ್ಲದ ಫಿಕ್ಸಿಂಗ್ ಮೂಲಕ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎಂಬುದು ಸಾಬೀತಾಗಿದೆ, ರಾಣಿ ಮುಖರ್ಜಿ ಆ ಪ್ರಶಸ್ತಿಗೆ ಸಂಪೂರ್ಣವಾಗಿ ಅರ್ಹರು" ಎಂದು ಟೀಕಿಸಿದ್ದಾರೆ. ಮತ್ತೊಬ್ಬ ನೆಟ್ಟಿಗರು "ಚುಂಬಿಸುವುದನ್ನು ಹೊರತುಪಡಿಸಿ ಈ ಸಿನಿಮಾದಲ್ಲಿ ಅವರು ಬೇರೆ ಏನು ಮಾಡಿದ್ದಾರೆ..? ಗಂಗೂಬಾಯಿ ಚೆನ್ನಾಗಿತ್ತು. ಆದರೆ ಇದು ಏನು? ಕಿಯಾರಾ, ತಾಪ್ಸಿ, ರಾಣಿ..??" ಎಂದು ಆಲಿಯಾ ಮೇಲೆ ಕೋಪ ಹೊರಹಾಕಿದ್ದಾರೆ.

ಆಲಿಯಾ ಭಟ್ ಜೊತೆಗೆ ಭೂಮಿ ಪೆಡ್ನೇಕರ್, ಕಿಯಾರಾ ಅಡ್ವಾಣಿ, ದೀಪಿಕಾ ಪಡುಕೋಣೆ ಮತ್ತು ರಾಣಿ ಮುಖರ್ಜಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಆಲಿಯಾ ಅತ್ಯುತ್ತಮ ನಟಿ (ಜನಪ್ರಿಯ) ಪ್ರಶಸ್ತಿ ಪಡೆದರೆ, ಅನಿಮಲ್ ಚಿತ್ರದ ಅಭಿನಯಕ್ಕಾಗಿ ರಣಬೀರ್ ಕಪೂರ್ ಅತ್ಯುತ್ತಮ ನಟ (ಜನಪ್ರಿಯ) ಪ್ರಶಸ್ತಿ ಪಡೆದಿದ್ದಾರೆ.

12 ನೇ ಫೇಲ್‌ನಲ್ಲಿನ ಅದ್ಭುತ ಅಭಿನಯಕ್ಕಾಗಿ ವಿಕ್ರಾಂತ್ ಮಾಸ್ಸೆ ಅವರಿಗೆ ಅತ್ಯುತ್ತಮ ನಟ (ವಿಮರ್ಶಕರು) ಪ್ರಶಸ್ತಿಯನ್ನು ನೀಡಲಾಯಿತು. ಅತ್ಯುತ್ತಮ ನಟಿ (ವಿಮರ್ಶಕರು) ಪ್ರಶಸ್ತಿಯನ್ನು ತ್ರೀ ಆಫ್ ಅಸ್‌ಗಾಗಿ ಶೆಫಾಲಿ ಶಾ ಮತ್ತು ಮಿಸೆಸ್ ಚಟರ್ಜಿ Vs ನಾರ್ವೆಗಾಗಿ ರಾಣಿ ಮುಖರ್ಜಿ ಇಬ್ಬರಿಗೆ ನೀಡಿದ್ದಾರೆ.

More from Filmibeat

English summary
Why netizens upset with Alia Bhatt's win in Filmfare Awards 2024?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X