Filmfare Awards 2025 ; ಯಾರಿಗೆ ಒಲಿದಳು ಕಪ್ಪು ಸುಂದರಿ?ಇಲ್ಲಿದೆ ಫಿಲ್ಮ್‌ಫೇರ್ ಪ್ರಶಸ್ತಿ ವಿಜೇತರ ಸಂಪೂರ್ಣ ಲಿಸ್ಟ್
ಫಿಲ್ಮ್ ಫೇರ್ ಮತ್ತು ಸೈಮಾ [ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಅವಾರ್ಡ್] ಈ ಎರಡು ಪ್ರಶಸ್ತಿಗಳನ್ನು ಭಾರತೀಯ ಚಿತ್ರರಂಗ ತುಂಬಾ ಗಂಭೀರವಾಗಿಯೇ ಪರಿಗಣಿಸುತ್ತೆ. ಕೆಲವರ ಪಾಲಿಗೆ ಇವೆರಡು ಪ್ರಶಸ್ತಿಗಳು ಯಾವ ಆಸ್ಕರ ಪ್ರಶಸ್ತಿಗಿಂತ ಕಡಿಮೆ ಇಲ್ಲ. ಹೀಗಾಗಿಯೇ ಈ ಎರಡರಲ್ಲಿ ಒಂದು ಪ್ರಶಸ್ತಿಯನ್ನೂ ಪಡೆದರು ಸಾಕು, ಚಿತ್ರರಂಗದಲ್ಲಿ ಅನೇಕರು ಕುಣಿದು ಕುಪ್ಪಳಿಸುತ್ತಾರೆ. ಸಂಭ್ರಮ ಪಡುತ್ತಾರೆ.
ಈ ಬಾರಿ ಕೂಡ ಇಂತಹದ್ದೇ ವಾತಾವರಣ ಅಹಮದಾಬಾದ್‌ನ ಎಕೆಎ ಅರೇನಾ, ಕಂಕರಿಯಾ ಲೇಕ್‌ನಲ್ಲಿ ನಿರ್ಮಾಣವಾಗಿತ್ತು. ಬಾಲಿವುಡ್‌ನವರಿಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ನೀಡಲಾಯ್ತು. ವಿಶೇಷ ಅಂದರೆ 17 ವರ್ಷಗಳ ನಂತರ ಈ ಕಾರ್ಯಕ್ರಮದ ನಿರೂಪಣೆಯನ್ನು ಶಾರುಖ್ ಖಾನ್ ಮಾಡಿದರು. ಕರಣ್ ಜೋಹರ್ ಇವರಿಗೆ ಸಾಥ್ ನೀಡಿದರು. ಮನೀಶ್ ಪಾಲ್ ಕೂಡ ಶಾರುಖ್ ಮತ್ತು ಕರಣ್ ಜೊತೆ ವೇದಿಕೆ ಹಂಚಿಕೊಂಡರು.
ಇನ್ನು ಈ ಝಗಮಗ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ನಿರ್ಮಾಣದಲ್ಲಿ ತಯಾರಾದ, ಆಸ್ಕರ್ ಅಂಗಳದವರೆಗೆ ಕೂಡ ಹೋಗಿ ಬಂದಿದ್ದ ''ಲಾಪತಾ ಲೇಡಿಸ್'' ಚಿತ್ರ ಮಿಂಚಿತು. 13 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.
ಹಿರಿಯ ನಟಿ ಜೀನತ್ ಅಮಾನ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಶ್ಯಾಮ್ ಬೆನಗಲ್ ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ನೀಡುವ ಮೂಲಕ ಗೌರವ ಸಲ್ಲಿಸಲಾಯ್ತು. ಹಾಗಿದ್ದರೆ 70ನೇ ಫಿಲ್ಮ್ ಫೇರ್ ಪ್ರಶಸ್ತಿ ಯಾರಿಗೆಲ್ಲಾ ಸಿಕ್ಕಿತು. ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ಯಾರು ? ಎಂದು ತಿಳಿಯಲು ಮುಂದೆ ಓದಿ.
70ನೇ ಫಿಲ್ಮ್‌ಫೇರ್ ಪ್ರಶಸ್ತಿ ವಿಜೇತರ ಸಂಪೂರ್ಣ ಲಿಸ್ಟ್ ಈ ಕೆಳಗಿನಂತೆ ಇದೆ.
ಅತ್ಯುತ್ತಮ ನಟ- ಅಭಿಷೇಕ್ ಬಚ್ಚನ್ - ಚಿತ್ರದ ಹೆಸರು - ಐ ವಾಂಟ್ ಟು ಟಾಕ್
ಮತ್ತು
ಕಾರ್ತಿಕ್ ಆರ್ಯನ್ - ಚಿತ್ರದ ಹೆಸರು - ಚಂದು ಚಾಂಪಿಯನ್
ಅತ್ಯುತ್ತಮ ನಟಿ - ಆಲಿಯಾ ಭಟ್ - ಚಿತ್ರದ ಹೆಸರು - ಜಿಗ್ರಾ
ವಿಮರ್ಶಕರು ಮೆಚ್ಚಿದ ಅತ್ಯುತ್ತಮ ನಟ - ರಾಜ್ ಕುಮಾರ್ ರಾವ್ - ಚಿತ್ರದ ಹೆಸರು- ಶ್ರೀಕಾಂತ್
ವಿಮರ್ಶಕರು ಮೆಚ್ಚಿದ ಅತ್ಯುತ್ತಮ ನಟಿ - ಪ್ರತಿಭಾ ರಾಂಟಾ - ಚಿತ್ರದ ಹೆಸರು- ಲಾಪತಾ ಲೇಡೀಸ್

ಅತ್ಯುತ್ತಮ ಪೋಷಕ ನಟ - ರವಿ ಕಿಶನ್ - ಚಿತ್ರದ ಹೆಸರು- ಲಾಪತಾ ಲೇಡೀಸ್
ಅತ್ಯುತ್ತಮ ಪೋಷಕ ನಟಿ - ಛಾಯಾ ಕದಮ್ - ಚಿತ್ರದ ಹೆಸರು- ಲಾಪತಾ ಲೇಡೀಸ್
ವಿಮರ್ಶಕರು ಮೆಚ್ಚಿದ ಅತ್ಯುತ್ತಮ ಚಿತ್ರ - ಐ ವಾಂಟ್ ಟು ಟಾಕ್ - ನಿರ್ದೇಶನ - ಶೂಜಿತ್ ಸಿರ್ಕಾರ್
ಅತ್ಯುತ್ತಮ ನಟ [ ಚೊಚ್ಚಲ ಚಿತ್ರ ] - ಲಕ್ಷ್ಯ - ಚಿತ್ರದ ಹೆಸರು -ಕಿಲ್
ಅತ್ಯುತ್ತಮ ನಟಿ [ಚೊಚ್ಚಲ ಚಿತ್ರ ] ನಿತಾನ್ಷಿ ಗೋಯೆಲ್- ಚಿತ್ರದ ಹೆಸರು- ಲಾಪತಾ ಲೇಡೀಸ್
ಅತ್ಯುತ್ತಮ ನಿರ್ದೇಶಕ [ ಚೊಚ್ಚಲ ಚಿತ್ರ ] ಕುನಾಲ್ ಖೇಮು - ಚಿತ್ರದ ಹೆಸರು- ಮಡ್ಗಾಂವ್ ಎಕ್ಸ್‌ಪ್ರೆಸ್
ಮತ್ತು
ಆದಿತ್ಯ ಸುಹಾಸ್ ಜಾಂಬಳೆ - ಚಿತ್ರದ ಹೆಸರು - ಆರ್ಟಿಕಲ್ 370
ಅತ್ಯುತ್ತಮ ಚಿತ್ರ - 'ಲಾಪತಾ ಲೇಡೀಸ್
ಅತ್ಯುತ್ತಮ ನಿರ್ದೇಶಕ - ಕಿರಣ್ ರಾವ್ - ಚಿತ್ರದ ಹೆಸರು - ಲಾಪತಾ ಲೇಡೀಸ್
ಅತ್ಯುತ್ತಮ ಕಥೆ - ಆದಿತ್ಯ ಧರ್ ಮತ್ತು ಮೋನಲ್ ಥಕ್ಕರ್ - ಚಿತ್ರದ ಹೆಸರು- ಆರ್ಟಿಕಲ್ 370
ಅತ್ಯುತ್ತಮ ಚಿತ್ರಕಥೆ - ಸ್ನೇಹಾ ದೇಸಾಯಿ - ಚಿತ್ರದ ಹೆಸರು - ಲಾಪತಾ ಲೇಡೀಸ್
ಅತ್ಯುತ್ತಮ ಚಿತ್ರಕಥೆ - ರಿತೇಶ್ ಶಾ ಮತ್ತು ತುಷಾರ್ ಶೀತಲ್ ಜೈನ್ - ಚಿತ್ರದ ಹೆಸರು - ಐ ವಾಂಟ್ ಟು ಟಾಕ್
ಅತ್ಯುತ್ತಮ ಸಂಭಾಷಣೆ - ಸ್ನೇಹಾ ದೇಸಾಯಿ - ಚಿತ್ರದ ಹೆಸರು - ಲಾಪತಾ ಲೇಡೀಸ್
ಅತ್ಯುತ್ತಮ ಸಂಗೀತ - ರಾಮ್ ಸಂಪತ್ - ಚಿತ್ರದ ಹೆಸರು - ಲಾಪತಾ ಲೇಡೀಸ್
ಅತ್ಯುತ್ತಮ ಸಾಹಿತ್ಯ - ಪ್ರಶಾಂತ್ ಪಾಂಡೆ- ಚಿತ್ರದ ಹೆಸರು - ಲಾಪತಾ ಲೇಡೀಸ್
ಅತ್ಯುತ್ತಮ ಹಿನ್ನೆಲೆ ಗಾಯಕ - ಅರ್ಜಿತ್ ಸಿಂಗ್ - ಚಿತ್ರದ ಹೆಸರು- ಲಾಪತಾ ಲೇಡೀಸ್
ಅತ್ಯುತ್ತಮ ಹಿನ್ನೆಲೆ ಗಾಯಕಿ- ಮಧುಬಂತಿ ಬಾಗ್ಚಿ - ಚಿತ್ರದ ಹೆಸರು - ಸ್ತ್ರೀ 2
ಅತ್ಯುತ್ತಮ ಹಿನ್ನೆಲೆ ಸಂಗೀತ - ರಾಮ್ ಸಂಪತ್ - ಚಿತ್ರದ ಹೆಸರು - ಲಾಪತಾ ಲೇಡೀಸ್
ಅತ್ಯುತ್ತಮ ಸಾಹಸ - ಸೇಯಾಂಗ್ ಓಹ್ ಮತ್ತು ಪರ್ವೇಜ್ ಶೇಖ್ - ಚಿತ್ರದ ಹೆಸರು- ಕಿಲ್
ಅತ್ಯುತ್ತಮ ಸೌಂಡ್ ಡಿಸೈನ್ - ಸುಭಾಶ್ ಸಾಹೂ- ಚಿತ್ರದ ಹೆಸರು - ಕಿಲ್
ಅತ್ಯುತ್ತಮ ನಿರ್ಮಾಣ ವಿನ್ಯಾಸ - ಮಯೂರ್ ಶರ್ಮಾ- ಚಿತ್ರದ ಹೆಸರು - ಕಿಲ್
ಅತ್ಯುತ್ತಮ ಛಾಯಾಗ್ರಹಣ - ರಫೇ ಮೆಹಮೂದ್- ಚಿತ್ರದ ಹೆಸರು - ಕಿಲ್
ಅತ್ಯುತ್ತಮ ವಸ್ತ್ರ ವಿನ್ಯಾಸ - ದರ್ಶನ್ ಜಲನ್ - ಚಿತ್ರದ ಹೆಸರು -ಲಾಪತಾ ಲೇಡೀಸ್
ಅತ್ಯುತ್ತಮ ನೃತ್ಯ ಸಂಯೋಜನೆ - ಬಾಸ್ಕೋ-ಸೀಸರ್ - ಹಾಡು- ತೌಬಾ ತೌಬಾ- ಚಿತ್ರದ ಹೆಸರು- ಬ್ಯಾಡ್ ನ್ಯೂಸ್.
ಅತ್ಯುತ್ತಮ ವಿಎಫ್‌ಎಕ್ಸ್ - ರೆಡಿಫೈನ್ - ಚಿತ್ರದ ಹೆಸರು - ಮುಂಜ್ಯಾ


Click it and Unblock the Notifications











