twitter
    For Quick Alerts
    ALLOW NOTIFICATIONS  
    For Daily Alerts

    ರುಡಾಲಿ ಖ್ಯಾತಿಯ ನಿರ್ದೇಶಕಿ ಕಲ್ಪನಾ ಲಾಜ್ಮಿ ಇನ್ನಿಲ್ಲ

    By James Martin
    |

    ರುಡಾಲಿಯಂಥ ಸದಭಿರುಚಿ ಚಿತ್ರಗಳ ನೀಡಿದ ಖ್ಯಾತ ನಿರ್ದೇಶಕಿ ಕಲ್ಪನಾ ಲಾಜ್ಮಿ ಅವರು ಮುಂಬೈನಲ್ಲಿ ಭಾನುವಾರ ಬೆಳಗ್ಗೆ 4.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕಲ್ಪನಾ ಅವರ ನಿಧನಕ್ಕೆ ಬಾಲಿವುಡ್ ನ ಗಣ್ಯಾತಿಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

    64 ವರ್ಷ ವಯಸ್ಸಿನ ಲಾಜ್ಮಿ ಅವರು ಕೆಲಕಾಲದಿಂದ ಮೂತ್ರಪಿಂಡದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಸಂಗೀತ ದಿಗ್ಗಜ ಭೂಪೆನ್ ಹಜಾರಿಕಾ ಅವರ ಬಗ್ಗೆ ಕಲ್ಪನಾ ಬರೆದ ಕೃತಿ ಇತ್ತೀಚೆಗೆ ಲೋಕಾರ್ಪಣೆಗೊಂಡಿತ್ತು. ಅನಾರೋಗ್ಯದ ಕಾರಣ ಈ ಕಾರ್ಯಕ್ರಮದಲ್ಲಿ ಕಲ್ಪನಾ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆಸ್ಪತ್ರೆಯಲ್ಲಿದ್ದರು. ಅವರ ಅನುಪಸ್ಥಿತಿಯಲ್ಲಿ ನಿರ್ದೇಶಕ ಶ್ಯಾಂ ಬೆನಗಲ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.

    ಕ್ಯಾನ್ಸರಿಗೆ ಬಲಿಯಾದ ಖ್ಯಾತ ನಿರ್ದೇಶಕಿ ಕಲ್ಪನಾ ಲಾಜ್ಮಿ

    ಮಹಿಳಾ ಪ್ರಧಾನ ಚಿತ್ರಗಳನ್ನು ನಿರ್ದೇಶಿಸಿ, ಸಿನಿವಿಮರ್ಶಕರು ಮೆಚ್ಚಿಗೆ ಗಳಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿದ್ದರು. ರುಡಾಲಿ, ಚಿಂಗಾರಿ, ಏಕ್ ಪಲ್, ದಮನ್ ಮುಂತಾದ ಚಿತ್ರಗಳನ್ನು ಲಾಜ್ಮಿ ಅವರು ನಿರ್ದೇಶಿಸಿದ್ದರು.

    filmmaker kalpana lajmi is no more soni razdan huma qureshi confirm the news

    ಶ್ಯಾಂ ಬೆನಗಲ್ ಅವರ ಜತೆ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಲಾಜ್ಮಿ ಅವರು 2006ರಲ್ಲಿ ಮಿಥುನ್ ಚಕ್ರವರ್ತಿ ಹಾಗೂ ಸುಷ್ಮಿತಾ ಸೇನ್ ಅಭಿನಯದ ಚಿಂಗಾರಿ ಚಿತ್ರವನ್ನು ನಿರ್ದೇಶಿಸಿದ್ದೇ ಕೊನೆ.

    ಕ್ಯಾನ್ಸರಿಗೆ ತುತ್ತಾಗಿ ಆರ್ಥಿಕವಾಗಿ ದುರ್ಬಲರಾದಾಗ, ನಟ ಅಮೀರ್ ಖಾನ್, ಸಲ್ಮಾನ್ ಖಾನ್, ಕರಣ್ ಜೋಹರ್, ಅಲಿಯಾ ಭಟ್, ನೀನಾ ಗುಪ್ತಾ ಸೇರಿದಂತೆ ಅನೇಕ ನಟ, ನಟಿಯರು ಅವರಿಗೆ ನೆರವಾಗಿದ್ದರು.

    English summary
    Noted filmmaker Kalpana Lajmi breathed her last on Sunday morning after a long battle with kidney cancer at the age of 64.
    Sunday, September 23, 2018, 12:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X