ನಟ ವಿದ್ಯುತ್ ಜಮ್ವಾಲ್ ಬೆತ್ತಲೆ ಫೋಟೋಗಳನ್ನು ನೋಡಿ 'ಗ್ರೀಕ್ ದೇವರು' ಎಂದ ರಾಮ್ ಗೋಪಾಲ್ ವರ್ಮಾ!

ತಮ್ಮ ಹುಟ್ಟುಹಬ್ಬವನ್ನು ಹಿಮಾಲಯದ ಮಡಿಲಿನಲ್ಲಿ ವಿಭಿನ್ನವಾಗಿ ಆಚರಿಸಿಕೊಂಡು ನಟ ವಿದ್ಯುತ್ ಜಮ್ವಾಲ್ ಸಕತ್ ಸುದ್ದಿಯಲ್ಲಿದ್ದಾರೆ. 43 ನೇ ವರ್ಷಕ್ಕೆ ಕಾಲಿಟ್ಟಿರುವ ವಿದ್ಯುತ್ ಜಮ್ವಾಲ್, ಹಿಮಾಲಯದ ತಪ್ಪಲಿನಲ್ಲಿ ಬೆತ್ತಲೆಯಾಗಿ ವಾಸಿಸುತ್ತಿದ್ದಾರೆ. ಕೆಲವು ದಿನಗಳು ಹೀಗೆಯೇ ಪ್ರಕೃತಿ ಜೊತೆಗೆ ಬೆರೆಯಬೇಕು ಎಂದು ಹೇಳಿಕೊಂಡಿದ್ದಾರೆ.

ತಮ್ಮ ಬೆತ್ತಲೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯುತ್ ಜಮ್ವಾಲ್ ಹಂಚಿಕೊಂಡಿದ್ದರು. ಇದಾದ ಬಳಿಕ ಈ ಫೋಟೋಗಳು ಸಕತ್ ವೈರಲ್ ಆಗುತ್ತಿವೆ. ಇದರ ಬೆನ್ನಲ್ಲೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿದ್ಯುತ್ ಜಮ್ವಾಲ್ ಅವರ ವೈರಲ್ ಫೋಟೋಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Filmmaker Ram Gopal Varma reacts to Vidyut Jammwals viral nude pics

ಗ್ರೀಕ್ ದೇವರು: ವಿದ್ಯುತ್ ಜಮ್ವಾಲ್ ಫೋಟೋಗೆ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ

43 ನೇ ಹುಟ್ಟುಹಬ್ಬದಂದು, ವಿದ್ಯುತ್ ಜಮ್ವಾಲ್ ಹಿಮಾಲಯದ ಪರ್ವತಗಳಲ್ಲಿನ ತಮ್ಮ ಬದುಕಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇವೆಲ್ಲದರಲ್ಲಿ ಅವರು ನಗ್ನರಾಗಿದ್ದಾರೆ. ಫೋಟೋಗಳು ವೈರಲ್ ಆದ ಬಳಿಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ವಿದ್ಯುತ್ ಜಮ್ವಾಲ್ ಅವರ ಟ್ವೀಟ್ ಅನ್ನು ತಮ್ಮ ಖಾತೆಯಿಂದ ಶೇರ್ ಮಾಡಿಕೊಂಡಿದ್ದಾರೆ.

ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ವಿದ್ಯುತ್ ಜಮ್ವಾಲ್ ಅವರನ್ನು ಗ್ರೀಕ್ ದೇವರು ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ ನಿಮ್ಮೊಳಗಿದ್ದ 'ಅನಿಮಲ್' ಅನ್ನು ಹೊರಗೆ ತಂದಿದ್ದೀರಿ ಎಂದು ಶ್ಲಾಘಿಸಿದ್ದಾರೆ. "ಹೇ ವಿದ್ಯುತ್ ಜಮ್ವಾಲ್ , ನಿಮ್ಮಲ್ಲಿನ 'ಅನಿಮಲ್' ಅನ್ನು ಹೊರ ಎಳೆದಿದ್ದಿರಿ ಎಂದು ನಾನು ಭಾವಿಸುತ್ತೇನೆ, ನೀವು ನಿಜವಾಗಿಯೂ ಗ್ರೀಕ್ ದೇವರಂತೆ ಕಾಣುತ್ತಿದ್ದೀರಿ" ಎಂದಿದ್ದಾರೆ.

ನಗ್ನ ಫೋಟೋಗಳನ್ನು ಹಂಚಿಕೊಂಡ ವಿದ್ಯುತ್ ಜಮ್ವಾಲ್

ಬಾಲಿವುಡ್, ಕಾಲಿವುಡ್ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ವಿದ್ಯುತ್ ಜಮ್ವಾಲ್ ತಮ್ಮ 43 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಿಮಾಲಯದ ಬೆಟ್ಟಗಳ ಮಧ್ಯೆ, ಹರಿಯುವ ಝರಿಯ ಬಳಿಯಲ್ಲಿ ನಗ್ನರಾಗಿ ಬದುಕುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವರ್ಷದಲ್ಲಿ ಕನಿಷ್ಠ 7 ರಿಂದ 10 ದಿನಗಳನ್ನು ಹೀಗೆ ಕಳೆಯುವುದು ಜೀವನದ ಅವಿಭಾಜ್ಯ ಅಂಗ ಎಂದು ಹೇಳಿಕೊಂಡಿದ್ದಾರೆ.

ಹಿಮಾಲಯ ಮತ್ತು ತಮ್ಮ ಸಂಬಂಧ 14 ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂದು ಹೇಳುವ ಅವರು, ನನ್ನನ್ನು ನಾನು ಅರಿತುಕೊಳ್ಳಿವ ಮೊದಲು ಪ್ರತಿವರ್ಷ ಹೀಗೆ 7-10 ದಿನಗಳನ್ನು ಕಳೆಯುವುದು ನನ್ನ ಜೀವನದ ಅವಿಭಾಜ್ಯ ಅಂಗವಾಯಿತು. ಐಷಾರಾಮಿ ಮತ್ತು ಸೆಲಬ್ರಿಟಿ ಜೀವನದಿಂದ ಈ ಅರಣ್ಯದಲ್ಲಿ ನನ್ನ ಏಕಾಂತತೆಯನ್ನು ಕಂಡುಕೊಳ್ಳುವುದನ್ನು ನಾನು ಆನಂದಿಸುತ್ತೇನೆ ಎಂದು ವಿದ್ಯುತ್ ಜಮ್ವಾಲ್ ಬರೆದುಕೊಂಡಿದ್ದಾರೆ.

ವಿದ್ಯುತ್ ಜಮ್ವಾಲ್ ಸಿನಿಮಾಗಳು

ವಿದ್ಯುತ್ ಜಮ್ವಾಲ್ , ಶಕ್ತಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಹಿಂದಿಗೆ 2012 ರಲ್ಲಿ ಜಾನ್ ಅಬ್ರಹಾಂ ಅವರ 'ಫೋರ್ಸ್' ಸಿನಿಮಾದೊಂದಿಗೆ ಕಾಲಿಟ್ಟರು. ಬಿಲ್ಲಾ II ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಪರಿಚಯವಾದರು. ಕಮಾಂಡೋ ಸಿನಿಮಾ ಮೂಲಕ ಹೆಚ್ಚು ಖ್ಯಾತಿ ಗಳಿಸಿದ ಅವರು, ಅಂಜಾನ್, ತುಪಾಕಿ, ಕಮಾಂಡೋ 2, ಜಂಗ್ಲೀ, ಯಾರಾ, ಕಮಾಂಡೋ 3 ಮತ್ತು ಸನಕ್ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕ್ರಾಕ್ ಸಿನಿಮಾ ಫೆಬ್ರವರಿ 23, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

'ಅನಿಮಲ್' ಬಗ್ಗೆ ರಾಮ್ ಗೋಪಾಲ್ ವರ್ಮಾ ಪ್ರೀತಿ

ನಟ ರಣಬೀರ್ ಕಪೂರ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೋಡಿಯ 'ಅನಿಮಲ್' ಬಿಡುಗಡೆಯಾದಾಗಿನಿಂದ, ರಾಮ್ ಗೋಪಾಲ್ ವರ್ಮಾ ಚಿತ್ರವನ್ನು ಹಲವು ಬಾರಿ ಹೊಗಳುತಿದ್ದಾರೆ. ಜೊತೆಗೆ ಎಲ್ಲ ಕಡೆಯೂ ಸಿನಿಮಾವನ್ನು ಸೇರಿಸಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಸಿನಿಮಾ ಬಗ್ಗೆ ವಿವರವಾದ ವಿಮರ್ಶೆಯನ್ನೂ ಬರೆದಿದ್ದಾರೆ.

More from Filmibeat

English summary
Ram Gopal Varma reacted to Vidyut Jammwal's viral nude photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X