For Quick Alerts
  ALLOW NOTIFICATIONS  
  For Daily Alerts

  'ನನಗೆ ಹಲವು ಬಾರಿ ಲೈಂಗಿಕ ಕಿರುಕುಳ ಆಗಿದೆ': ನಿರ್ಮಾಪಕಿ ತ್ರಿಷಾ ದಾಸ್

  |

  ''ಆರಂಭದ ದಿನಗಳಲ್ಲಿ ನಾನು ಹಲವು ಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ'' ಎಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಕ್ಷ್ಯಚಿತ್ರ ನಿರ್ಮಾಪಕಿ ತ್ರಿಷಾ ದಾಸ್ ಬಹಿರಂಗಪಡಿಸಿದ್ದಾರೆ.

  ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗಿವೆ. ಮೀಟೂ ಅಂತಹ ಕ್ರಾಂತಿಕಾರಿ ಅಭಿಯಾನಗಳು ನಡೆದಿದೆ. ಇದು ಸಮಾಜದಲ್ಲಿ ಜಾಗೃತಿ ಮೂಡಿಸಿದೆ ಎಂದು ಹೇಳಿದ ತ್ರಿಷಾ, ಕೆಲಸ ಮಾಡುವ ಸ್ಥಳದಲ್ಲಿ ಅನೇಕ ರೀತಿ ಕಿರುಕುಳ ಅನುಭವಿಸಿರುವ ಘಟನೆ ಹಂಚಿಕೊಂಡರು.

  ಕೋಣೆಯಲ್ಲಿ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡ: ನಟಿ ಬಿಚ್ಚಿಟ್ಟ ಕರಾಳ ಅನುಭವಕೋಣೆಯಲ್ಲಿ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡ: ನಟಿ ಬಿಚ್ಚಿಟ್ಟ ಕರಾಳ ಅನುಭವ

  "ನಾನು ಸಾಕ್ಷ್ಯಚಿತ್ರ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದ ದಿನದಲ್ಲಿ ಅನೇಕ ಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ. ಕೆಲಸ ಮಾಡುವ ಸ್ಥಳಗಳಲ್ಲಿ ಇದು ಸಾಮಾನ್ಯವಾಗಿಬಿಟ್ಟಿತ್ತು. ಇಂತಹ ಸಂದರ್ಭದಲ್ಲಿ ಮಹಿಳೆಯರು ಇತರೆ ಮಹಿಳೆಯರನ್ನು ಪರಸ್ಪರ ಸಾಂತ್ವನಗೊಳಿಸುವುದು, ಪರಸ್ಪರ ರಕ್ಷಿಸಿಕೊಳ್ಳುವ ಕೆಲಸ ಮಾಡುತ್ತಿದ್ದರು'' ಎಂದು ತ್ರಿಷಾ ಹೇಳಿದ್ದಾರೆ.

  "ತಮ್ಮ ನೋವಿನ ಕಥೆಯನ್ನು ಹಂಚಿಕೊಳ್ಳುವ ಆಗ ಯಾವುದೇ ಸಾಮಾಜಿಕ ಜಾಲತಾಣ ಇರಲಿಲ್ಲ. ಹಾಗಾಗಿ, ಇದರ ಹೊಣೆಗಾರಿಕೆ ಕೂಡ ಇರಲಿಲ್ಲ. ಅಂತಹ ಕಿರುಕುಳವನ್ನು ಎದುರಿಸಿದ ನಂತರ ಮೌನವಾಗಿರುವುದು ಸಾಮಾನ್ಯವಾಗಿತ್ತು. ಪುರುಷರಿಗೆ ಪರಿಣಾಮದ ಭಯವಿರಲಿಲ್ಲ. ಮೀಟೂ ಅಭಿಯಾನ ಬಂದ ಮೇಲೆ ಲೈಂಗಿಕ ಕಿರುಕುಳದ ಬಗ್ಗೆ ಗಟ್ಟಿಯಾಗಿ ಮಾತನಾಡುವಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುವಂತಾಗಿದೆ'' ಎಂದಿದ್ದಾರೆ.

  ಇನ್ನು ತಮಗೆ ಕಿರುಕುಳ ನೀಡಿದವರ ಬಗ್ಗೆ ಬಹಿರಂಗಪಡಿಸಬಹುದು ಅಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ''ಅವರು ಪ್ರಸಿದ್ಧತೆ ಪಡೆದವರಾಗಿಲಿಲ್ಲ, ಯಾರೊಂದಿಗೂ ನಾನು ಸಂಪರ್ಕದಲ್ಲಿಲ್ಲ, ಈಗ ಅವರು ಎಲ್ಲಿದ್ದಾರೆ ಎಂದು ನನಗೆ ತಿಳಿದಿಲ್ಲ. ಆ ಸಂದರ್ಭದಲ್ಲಿ ಅವರನ್ನು ಹುಡುಕಲು ಸಾಮಾಜಿಕ ಮಾಧ್ಯಮಗಳು ಅಥವಾ ವಾಟ್ಸಾಪ್ ಇರಲಿಲ್ಲ'' ಎಂದು ತಿಳಿಸಿದ್ದಾರೆ.

  Filmmaker Trisha Das Reveals She Was SExually Harassed Several Times At The Start Of Her Career

  ''ಮೀಟೂ ಅಭಿಯಾನದಿಂದ ಮಹಿಳೆಯರ ಸಬಲೀಕರಣ ಆಗುತ್ತಿರಬಹುದು. ಆದರೆ, ಈ ಅಭಿಯಾನ ರಾಜಕೀಯವಾಗಿರುವುದಿಲ್ಲ ಎಂದು ಭಾವಿಸುತ್ತೇನೆ'' ಎಂದು ಅಭಿಪ್ರಾಯ ಪಟ್ಟರು.

  ತ್ರಿಷಾ ದಾಸ್ ಹಲವು ಪುಸ್ತಕಗಳನ್ನು ಬರೆದಿದ್ದು, 'ದ್ರೌಪದಿ ಕುರು: ಅಫ್ಟರ್ ದಿ ಕೌರವಸ್', 'ಕಾಮಾಸ್ ಲಾಸ್ಟ ಸೂತ್ರ', 'ಮಿಸ್ಟರ್ಸ್ ಕುರು: ಎ ರಿಟರ್ನ್ ಟು ಮಹಾಭಾರತ' ಖ್ಯಾತಿ ಗಳಿಸಿದೆ.

  English summary
  National Award-Winner Filmmaker Trisha Das reveals she was sexually harassed several times at the start of her career.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X