For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಜಗ್ಗು ದಾದಾ' ಚಿತ್ರದ ನಟ ರಜತ್ ಬೇಡಿ ವಿರುದ್ಧ FIR ದಾಖಲು

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟ, ಕೊಯಿ ಮಿಲ್ ಗಯಾ ಖ್ಯಾತಿಯ ರಜತ್ ಬೇಡಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಮುಂಬೈನ ಡಿ ಎನ್ ನಗರದ ನಿವಾಸಿ 39 ವರ್ಷದ ವ್ಯಕ್ತಿ ಸೋಮವಾರ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ನಟ ರಜತ್ ಬೇಡಿ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿ ಸದ್ಯ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

  ಗಾಯಕಗೊಂಡ ವ್ಯಕ್ತಿಯ ಕುಟುಂಬದವರು ಮಾಹಿತಿ ನೀಡಿದ ಪ್ರಕಾರ ಕಾರಿನಲ್ಲಿ ಡಿಕ್ಕಿ ಹೊಡೆದ ಬಳಿಕ ನಟ ರಜತ್ ಗಾಯಳು ವ್ಯಕ್ತಿಯನ್ನು ಮುಂಬೈನ ಕೂಪರ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ವ್ಯಕ್ತಿಯ ಆಸ್ಪತ್ರೆಯ ಖರ್ಚನ್ನು ಭರಿಸುವುದಾಗಿ ಹೇಳಿದ್ದರು ಎಂದು ಹೇಳಿದ್ದಾರೆ. ಬಳಿಕ ರಜತ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

  ಸದ್ಯ ಸಂತ್ರಸ್ಥರ ಕುಟುಂಬದವರ ಹೇಳಿಕೆ ಮತ್ತು ಮೋಟಾರ್ ವಾಹನ ಕಾಯ್ದೆಯಡಿ ನಟ ರಜತ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಆದರೆ ಇದುವರೆಗೂ ನಟನ ಬಂಧನವಾಗಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ. ಆಂಗ್ಲ ವೆಬ್ ಪೋರ್ಟಲ್ ವರದಿ ಮಾಡಿರುವ ಪ್ರಕಾರ, ಮುಂಬೈನ ಡಿ ಎನ್ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಈ ಬಗ್ಗೆ ಮಾಹಿತಿ ಖಚಿತಪಡಿಸಿದ್ದು, ಸದ್ಯ ತನಿಖೆ ಹಂತದಲ್ಲಿದೆ ಎಂದು ಹೇಳಿದ್ದಾರೆ ಎಂದು ವರದಿ ಮಾಡಿದೆ.

  ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಬಗ್ಗೆ ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದ್ದು, ಆತನ ಸ್ಥಿತಿ ಗಂಭೀರವಾಗಿದ್ದು, ತಲೆಗೆ ಬಲವಾದ ಏಟು ಬಿದ್ದಿದೆ ಎಂದು ತಿಳಿಸಿದ್ದಾರೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಕೃತಕ ಉಸಿರಾಟದ ಸಹಾಯದಲ್ಲಿದ್ದಾರೆ ಎಂದಿದ್ದಾರೆ.

  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಪತ್ನಿ ಮಾತನಾಡಿ, ತನ್ನ ಪತಿಗೆ ಏನಾದರು ಆದರೆ ರಜತ್ ಬೇಡಿಯನ್ನು ಬಂಧಿಸಬೇಕು ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಘಟನೆ ಬಳಿಕ ರಜತ್ ಬೇಡಿ ತನ್ನ ಕಾರನ್ನು ನಿಲ್ಲಿಸಿ, ಪತಿಯನ್ನು ಆಸ್ರತ್ಪೆಗೆ ದಾಖಲಿಸಿ ಬಳಿಕ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ ಎಂದು ಗಾಯಾಳು ಪತ್ನಿ ಹೇಳಿದ್ದಾರೆ. ಆದರೆ ಸಹಾಯದ ಬರವಸೆ ನೀಡಿದ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದಿದ್ದಾರೆ.

  ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 13 ವರ್ಷದ ಮಗಳು ಅಂಶಿಕಾ ಮತ್ತು 7 ವರ್ಷದ ಮಗ ತೇಜಸ್ವಿ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಈ ಕುಟುಂಬ ಡಿ ಎನ್ ನಗರದ ಕೊಳಗೇರಿಯಲ್ಲಿ ವಾಸಿಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ನಟ ರಜತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಘಟನೆ ಬಳಿಕ ರಜತ್ ಯಾವ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ.

  English summary
  FIR Against actor Rajat Bedi for allegedly hitting man with his car, victim in critical condition.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X