ಕೋವಿಡ್ ನಿಯಮ ಉಲ್ಲಂಘನೆ; ಟೈಗರ್ ಶ್ರಾಫ್ ಮತ್ತು ದಿಶಾ ವಿರುದ್ಧ FIR

ಕೋವಿಡ್ ನಿಯಮವನ್ನು ಉಲ್ಲಂಘಿಸಿ ಮುಂಬೈ ಬೀದಿಯಲ್ಲಿ ರೋಮಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಬಾಲಿವುಡ್ ನ ಜೋಡಿ ಹಕ್ಕಿಗಳಾದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ವಿರುದ್ಧ ಪೊಲೀಸರು ಬುಧವಾರ (ಜೂನ್ 2) ಎಫ್ ಐ ಆರ್ ದಾಖಲಿಸಿದ್ದಾರೆ.

ಲಾಕ್ ಡೌನ್ ಇದ್ದರೂ ಮುಂಬೈನ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಇಬ್ಬರು ಸುತ್ತಾಡುತ್ತಿದ್ದರು ಎಂದು ವರದಿಯಾಗಿದೆ. ಪೊಲೀಸರು ಇಬ್ಬರನ್ನು ತಡೆದು ಕಾರು ನಿಲ್ಲಿಸಿ ಸುತ್ತಾಡುತ್ತಿರುವ ಕಾರಣ ಕೇಳಿದ್ದಾರೆ. ಆದರೆ ಇಬ್ಬರೂ ಸರಿಯಾದ ಕಾರಣ ನೀಡದ ಹಿನ್ನಲ್ಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ ಎಂದು ಎ ಅನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಾಲಿವುಡ್ ನ ಜೋಡಿ ಹಕ್ಕಿಗಳಾದ ಟೈಗರ್ ಶ್ರಾಮಫ್ ಮತ್ತು ದಿಶಾ ಇಬ್ಬರೂ ಮಧ್ಯಾಹ್ನ 2 ಗಂಟೆಯ ಬಳಿಕ ಮನೆಯಿಂದ ಹೊರಬಂದು ಸುತ್ತಾಡುತ್ತಿದ್ದರು. ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಜೂನ್ 15ರ ವರೆಗೂ ಲಾಕ್ ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2 ರವರೆಗೆ ಅವಕಾಶ ನೀಡಲಾಗಿದೆ.

FIR Against Tiger Shroff, Disha Patani for Violating Covid-19 Norms

ಟೈಗರ್ ಶ್ರಾಫ್ ಮತ್ತು ದಿಶಾ ಇಬ್ಬರೂ ಜಿಮ್ ಗೆ ಹೋಗಿ ವಾಪಸ್ ಆಗುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಪೊಲೀಸರು ಅಡ್ಡಗಟ್ಟಿ ಅಧಾರ್ ಕಾರ್ಡ್ ಮತ್ತು ಹೊರಬಂದ ಕಾರಣ ಕೇಳಿದ್ದಾರೆ. ಇಬ್ಬರು ಸರಿಯಾದ ಕಾರಣ ನೀಡಿದ್ದರು, ಹಾಗಾಗಿ ಪೊಲೀಸರು ಇಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ಸರಿಯಾದ ಕಾರಣ ನೀಡದ ಹಿನ್ನಲೆ ನಿನ್ನೆ (ಜೂನ್ 2) ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿರುವುದು ಬಹಿರಂಗವಾಗಿದೆ.

ಟೈಗರ್ ಶ್ರಾಫ್ ಹಾಗೂ ದಿಶಾ ಪಟಾಣಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಇಬ್ಬರೂ ಸಹ ಫಿಟ್ ನೆಸ್ ಫ್ರೀಕ್ ಗಳಾಗಿದ್ದು ಒಟ್ಟಿಗೆ ಜಿಮ್‌ಗೆ ಹೋಗುತ್ತಾರೆ. ತಮ್ಮ ದೈಹಿಕ ಕಸರತ್ತಿನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇಬ್ಬರೂ ಸಹ ಕೆಲವು ತಿಂಗಳ ಹಿಂದೆ ಮಾಲ್ಡೀವ್ಸ್‌ನಲ್ಲಿ ರಜೆ ಕಳೆದು ಬಂದಿದ್ದಾರೆ.

Recommended Video

Yash ಮಾಡಿದ ಒಳ್ಳೆ ಕೆಲಸಕ್ಕೆ Upendra ಫಿದಾ | Filmibeat Kannada

ಸಿನಿಮಾ ವಿಚಾರಕ್ಕೆ ಬರುವುದಾದರೆ ಟೈಗರ್ ಶ್ರಾಫ್, 'ಹೀರೋಪನ್ತಿ 2', 'ಗಣಪತ್ 1', 'ರ್ಯಾಂಬೊ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ದಿಶಾ ಪಟಾಣಿ, 'ಏಕ್ ವಿಲನ್ ರಿಟರ್ನ್ಸ್', 'ಯೋದ್ಧ', 'ಕೆ ಟೀನಾ', 'ಮಲಂಗ್ 2' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
FIR Against Bollywood rumoured couple Disha Patani and Tiger Shroff.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X