Actress: ನಟಿಯ ಮೇಲೆ ಅತ್ಯಾಚಾರ: ಕಾಸ್ಟಿಂಗ್ ಡೈರೆಕ್ಟರ್ ಬಂಧನ

ನಟಿಯರ ಮೇಲೆ, ನಟಿಯಾಗಲು ಅವಕಾಶ ಹುಡುಕಿಕೊಂಡು ಬರುವವರ ಮೇಲೆ ಪ್ರತಿ ದಿನವೂ ಒಂದಲ್ಲ ಒಂದು ಕಡೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ಕೆಲವು ಪ್ರಕರಣಗಳ್ಳಲ್ಲಷ್ಟೆ ದೂರು ದಾಖಲಾಗುತ್ತದೆ.

ಕಾಸ್ಟಿಂಗ್ ಕೌಚ್‌ ಎಲ್ಲ ಚಿತ್ರರಂಗಗಳಲ್ಲಿಯೂ ಇದೆಯಾದರೂ ಬಾಲಿವುಡ್‌ನಲ್ಲಿ ಈ ಸಮಸ್ಯೆ ಹೆಚ್ಚು. ಆಗೊಮ್ಮೆ ಈಗೊಮ್ಮೆ ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಪ್ರಕರಣಗಳು, ನಟಿಯರ ಮೇಲೆ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ.

ಪುಣೆಯಲ್ಲಿ ನಟಿಯೊಬ್ಬರ ಮೇಲೆ ಅತ್ಯಾಚಾರ ನಡೆದಿದ್ದು, ಆರೋಪಿ ಕಾಸ್ಟಿಂಗ್ ಡೈರೆಕ್ಟರ್ ವಿರುದ್ಧ ಪುಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

FIR Against Casting Director In Pune For Allegedly Raping Aspiring Actress

ನಟಿಯಾಗಬೇಕು ಎಂಬ ಆಸೆಯಿಂದಿದ್ದ ಕ್ಯಾರೆಕ್ಟರ್ ಆರ್ಟಿಸ್ಟ್‌ ಅನ್ನು ಕೆಲವು ವರ್ಷಗಳಿಂದಲೂ ಬೆದರಿಸಿ, ಬ್ಲಾಕ್‌ಮೇಲ್ ಮಾಡಿ ಆಕೆಯೊಂದಿಗೆ ಸತತವಾಗಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ನಟಿಯು 17 ವರ್ಷದವಳಾಗಿದ್ದಾಗಿನಿಂದಲೂ ಕಾಸ್ಟಿಂಗ್ ಡೈರೆಕ್ಟರ್‌ನಿಂದ ಬೆದರಿಕೆ, ಅತ್ಯಾಚಾರ ನಡೆದೇ ಇತ್ತಂತೆ.

ಇದೀಗ ನಟಿಗೆ 21 ವರ್ಷ ವಯಸ್ಸಾಗಿದ್ದು, ಕಾಸ್ಟಿಂಗ್ ಡೈರೆಕ್ಟರ್‌ನ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ನಟಿಯು ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಪೋಷಕರೊಟ್ಟಿಗೆ ಸೇರಿ ಪುಣೆಯ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.

ಪೊಲೀಸರು ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಸೇರಿದಂತೆ ಇತರೆ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಬಂಧನ ಇನ್ನೂ ಆಗಿಲ್ಲವೆಂದು ಮಾಧ್ಯಮಗಳಿಗೆ ತಿಳಿಸಿರುವ ಪೊಲೀಸರು, ಪ್ರಕರಣದ ತನಿಖೆ ಜಾರಿಯಲ್ಲಿದೆ ಎಂದಿದ್ದಾರೆ.

More from Filmibeat

English summary
FIR registered against a casting director in Pune for allegedly raping an aspiring actress. POCSO registered against casting director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X