ಐಪಿಸಿ ಸೆಕ್ಷನ್ 409ರ ಅಡಿಯಲ್ಲಿ ಶಾರುಕ್ ಖಾನ್ ಪತ್ನಿ ಗೌರಿ ಖಾನ್ ವಿರುದ್ಧ FIR ದಾಖಲು

ಬಾಲಿವುಡ್ ಸೂಪರ್ ಸ್ಟಾರ್, ಕಿಂಗ್ ಖಾನ್ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಉದ್ಯಮಿ, ಪಬ್ಲಿಕ್ ಫಿಗರ್, ಫ್ಯಾಶನ್ ಡಿಸೈನ್ ಆದ ಗೌರಿ ಖಾನ್‌ ವಿರುದ್ಧ ಮುಂಬೈ ನಿವಾಸಿ ಒಬ್ಬರು ನೀಡಿದ ದೂರಿನ ಅನ್ವಯ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409 ಅಡಿಯಲ್ಲಿ ವಂಚಿಸಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.

ಲಕ್ನೋದ ತುಳಸಿಯಾನಿ ಅಪಾರ್ಟ್‌ಮೆಂಟ್‌ ಕಂಪನಿ ಒಂದಕ್ಕೆ ಗೌರಿ ಖಾನ್ ಬ್ರಾಂಡ್ ಅಂಬಾಸಿಡರ್‌ ಆಗಿದ್ದಾರೆ. ಗೌರಿ ಅವರನ್ನು ನಂಬಿ ನಾನು ಅಪಾರ್ಟ್‌ಮೆಂಟ್ ಫ್ಲಾಟ್ ಖರೀಸಿದಿದ್ದೆ ಎಂದು ಜಶ್ವಂತ್ ಶಾ ಎನ್ನುವ ವ್ಯಕ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಆ ಕಂಪನಿ ಹೇಳಿದ ಸಮಯಕ್ಕೆ ಫ್ಲಾಟ್ ಕೊಟ್ಟಿಲ್ಲ, ಹಾಗಾಗಿ ನಾನು ಕಾನೂನಾತ್ಮವಾಗಿ ಹೋರಾಟಕ್ಕೆ ಇಳಿದಿದ್ದೇನೆ ಎಂದಿದ್ದಾರೆ. ಫ್ಲಾಟ್‌ಗಾಗಿ ಕಂಪನಿ ನನ್ನ ಬಳಿ 84 ಲಕ್ಷ ರೂ. ಹಣ ಪಡೆದಿದೆ ಎಂದು ಜಶ್ವಂತ್ ಶಾ ತಿಳಿಸಿದ್ದಾರೆ.

FIR against Gauri Khan: Shah Rukh Khan’s wife in legal trouble over a property purchase issue

ಲಕ್ನೋದಲ್ಲಿರುವ ಸುಶಾಂತ್ ಗೋಲ್ಫ್ ಸಿಟಿ ಪ್ರದೇಶದಲ್ಲಿ ತುಳಸಿಯಾನಿ ಗೋಲ್ಫ್ ವ್ಯೂವ್‌ನಲ್ಲಿ ಫ್ಲಾಟ್ ಇದೆ. ಆದರೆ ನನ್ನ ಬದಲು ಆ ಫ್ಲಾಟ್ ಅನ್ನು ಬೇರೊಬ್ಬರಿಗೆ ಕಂಪೆನಿ ನೀಡಿದೆ, ಅಲ್ಲದೇ ನನ್ನ ಹಣವನ್ನು ವಾಪಸ್ ನೀಡಿದ್ದಲ್ಲ ಎಂದು ಜಶ್ವಂತ್ ಶಾ ದೂರಿದ್ದಾರೆ. ಲಕ್ನೋ ಪೊಲೀಸರಿಗೆ ಆತ ನೀಡಿರುವ ದೂರಿನಲ್ಲಿ ಬಿಲ್ಡರ್ಸ್ ಹಾಗೂ ಕಂಪನಿಯ ಜೊತೆಗೆ ಇತರರ ಹೆಸರುಗಳು ಇವೆ. ತುಳಸಿಯಾನಿ ಕನ್‌ಸ್ಟ್ರಕ್ಷನ್ ಅಂಡ್ ಡೆವಲಪ್‌ಮೆಂಟ್ ಲಿಮಿಟೆಡ್ ಮುಖ್ಯ ಮೆನೇಜಿಂಗ್ ಡೈರೆಕ್ಟರ್ ಅನಿಲ್ ಕುಮಾರ್ ತುಳಸಿಯಾನಿ, ಡೈರೆಕ್ಟರ್ ಮಹೇಶ್ ತುಸಿಯಾನಿ ವಿರುದ್ಧವೂ ದೂರು ದಾಖಲಾಗಿದೆ.

FIR against Gauri Khan: Shah Rukh Khan’s wife in legal trouble over a property purchase issue

ಕಂಪನಿಯ ಪ್ರಮೋಟ್ ಮಾಡಿ ತಮ್ಮಲ್ಲಿನ ನಂಬಿಕೆಯನ್ನು ಹೆಚ್ಚಿಸಿದ ಬ್ರಾಂಡ್ ಅಂಬಾಸಿಡರ್ ಗೌರಿ ಖಾನ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಈ ದೂರಿನ ಬಗ್ಗೆ ಈವರೆಗೆ ಗೌರಿ ಖಾನ್ ಪರವಾಗಿ ಯಾರು ಪ್ರತಿಕ್ರಿಯೆ ನೀಡಿಲ್ಲ. ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವ ಗೌರಿ ಖಾನ್ ಫ್ಯಾಷನ್ ಲೋಕದಲ್ಲಿ ಬಹಳ ಪ್ರಭಾವಶಾಲಿ ವ್ಯಕ್ತಿಯಾಗಿ ಗುರ್ತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ದೇಶದಲ್ಲಿ ಬಹಳ ಜನಪ್ರಿಯತೆ ಗಳಿಸಿರುವ ಇಂಟೀರಿಯರ್ ಡಿಸೈನರ್‌ಗಳಲ್ಲಿ ಗೌರಿ ಖಾನ್ ಕೂಡ ಒಬ್ಬರಾಗಿದ್ದಾರೆ. ಗೌರಿ ಖಾನ್ ಡಿಸೈನ್ಸ್ ಹೆಸರಿನಲ್ಲಿ ಕಂಪನಿ ಕೂಡ ಇದೆ.

More from Filmibeat

English summary
FIR against Gauri Khan: Shah Rukh Khan’s wife in legal trouble over a property purchase issue. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X