For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸ್ಟಾರ್‌ಗಳ ಪಾರ್ಟಿ ವಿಡಿಯೋ ವೈರಲ್: ಕರಣ್ ಜೋಹರ್ ವಿರುದ್ಧ ದೂರು

  |

  ಸುಶಾಂತ್ ಸಿಂಗ್ ಸಾವಿನ ನಂತರ ಕರಣ್ ಜೋಹರ್ ವಿರುದ್ಧ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ತಿರುಗಿ ಬಿದ್ದಿವೆ.

  ಸುಶಾಂತ್ ಸಾವಿಗೆ ಕರಣ್ ಸಹ ಕಾರಣ ಎಂದು ಆರೋಪಿಸಲಾಗಿತ್ತು. ಸುಶಾಂತ್ ಅನ್ನು ಕರಣ್ ಅಪಮಾನಿಸಿದ್ದರು ಎನ್ನಲಾದ ವಿಡಿಯೋಗಳು ಹರಿದಾಡಿತ್ತು, ಕರಣ್, ಸುಶಾಂತ್ ಗೆ ಸಿನಿಮಾದಲ್ಲಿ ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಲಾಗಿತ್ತು.

  ಆದರೆ ಸುಶಾಂತ್ ಪ್ರಕರಣದಲ್ಲಿ ಕರಣ್ ಜೋಹರ್ ವಿಚಾರಣೆಯಾಗಲಿ, ಚಾರ್ಜ್‌ ಶೀಟ್‌ನಲ್ಲಿ ಹೆಸರಾಗಲಿ ಇರಲಿಲ್ಲ. ಆದರೆ ಸುಶಾಂತ್ ಸಾವು ಪ್ರಕರಣವು ಡ್ರಗ್ಸ್ ಪ್ರಕರಣದ ಕೋನಕ್ಕೆ ತೆರೆದುಕೊಂಡ ಬಳಿಕ, ಕರಣ್ ಜೋಹರ್ ಮನೆಯಲ್ಲಿ ನಡೆದ ಬಾಲಿವುಡ್ ಸ್ಟಾರ್‌ಗಳ ಪಾರ್ಟಿಯ ಹಳೆಯ ವಿಡಿಯೋ ವೈರಲ್ ಆಗಿದ್ದು, ಕರಣ್ ವಿರುದ್ಧ ದೂರು ಸಹ ದಾಖಲಾಗಿದೆ.

  ಕರಣ್ ಜೋಹರ್ ಮನೆ ಪಾರ್ಟಿಯ ಹಳೆ ವಿಡಿಯೋ ವೈರಲ್

  ಕರಣ್ ಜೋಹರ್ ಮನೆ ಪಾರ್ಟಿಯ ಹಳೆ ವಿಡಿಯೋ ವೈರಲ್

  ಕರಣ್ ಜೋಹರ್ ಬಾಲಿವುಡ್‌ನಲ್ಲಿ ದೊಡ್ಡ ಪಾರ್ಟಿಗಳಿಂದ ಖ್ಯಾತರು. ಕರಣ್ ಮನೆಯಲ್ಲಿ ಆಗಾಗ್ಗೆ ಪಾರ್ಟಿಗಳು ನಡೆಯುತ್ತಲೇ ಇರುತ್ತವೆ. ಒಮ್ಮೆ ಸ್ವತಃ ಕರಣ್ ಜೋಹರ್, ತಮ್ಮ ಮನೆಯಲ್ಲಿ ನಡೆದ ಪಾರ್ಟಿಯ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು, ಆದು ಆಗ ವೈರಲ್ ಆಗಿತ್ತು. ಈಗ ಅದೇ ವಿಡಿಯೋ ಆಧಾರದಲ್ಲಿ ಕರಣ್ ವಿರುದ್ಧ ದೂರು ದಾಖಲಾಗಿದೆ.

  ಹಲವು ಖ್ಯಾತನಾಮ ನಟ-ನಟಿಯರು ಪಾರ್ಟಿಯಲ್ಲಿದ್ದರು

  ಹಲವು ಖ್ಯಾತನಾಮ ನಟ-ನಟಿಯರು ಪಾರ್ಟಿಯಲ್ಲಿದ್ದರು

  ವಿಡಿಯೋದಲ್ಲಿ ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ಶಾಹಿದ್ ಕಪೂರ್, ಧಿಯಾ, ವಿಕ್ಕಿ ಕೌಶಲ್, ರಣಬೀರ್ ಕಪೂರ್, ವರುಣ್ ಧವನ್, ಜೋಯಾ ಅಖ್ತರ್ ಇನ್ನೂ ಹಲವು ಖ್ಯಾತ ನಾಮರು ಇದ್ದಾರೆ. ವಿಡಿಯೋದಲ್ಲಿ ಎಲ್ಲರೂ ಮತ್ತಿನಲ್ಲಿರುವಂತೆ ಕಾಣುತ್ತಿದೆ. ಅದು ಡ್ರಗ್ಸ್ ಪಾರ್ಟಿ ಆಗಿತ್ತು ಎಂದು ಆರೋಪಿಸಿ ಈಗ ದೂರು ದಾಖಲಾಗಿದೆ.

  ಬಹುತೇಕರು ಮತ್ತಿನಲ್ಲಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ

  ವಿಡಿಯೋದಲ್ಲಿ ನಟ ವಿಕ್ಕಿ ಕೌಶಲ್ ಮೂಗು ಒರೆಸಿಕೊಳ್ಳುತ್ತಾರೆ, ಅಷ್ಟೇ ಅಲ್ಲದೆ ಕೌಶಲ್ ಹಿಂದೆ ಕೂತಿದ್ದ ವ್ಯಕ್ತಿ ಏನೋ ವಸ್ತುವನ್ನು ಕ್ಯಾಮೆರಾಕ್ಕೆ ಕಾರಣದಂತೆ ಬಚ್ಚಿಟ್ಟುಕೊಳ್ಳುತ್ತಾನೆ. ಅಫ್ತಾಬ್ ಶಿವದಾಸನಿ ಕಣ್ಣುಗಳಂತೂ ಕೆಂಪಗೆ ಉರಿಯುತ್ತಿರುತ್ತವೆ. ಇವೆಲ್ಲವನ್ನೂ ಗಮನಿಸಿದ ಶಿರೋಮಣಿ ಅಖಾಲಿದಳದ ಮಾಜಿ ಶಾಸಕ ಮಂಜೀಂಧರ್ ಸಿಂಗ್ ಸಿರಾ ಎನ್‌ಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

  TRP ಗೋಸ್ಕರ ನನ್ನ ಕುಟುಂಬದ ನೆಮ್ಮದಿ ಹಾಳು ಮಾಡಿದ್ದು ಇಷ್ಟ ಆಗಿಲ್ಲ| Raksh | Filmibeat Kannada
  ಪಾರ್ಟಿಯಲ್ಲಿದ್ದವರಿಗೆಲ್ಲಾ ನೊಟೀಸ್?

  ಪಾರ್ಟಿಯಲ್ಲಿದ್ದವರಿಗೆಲ್ಲಾ ನೊಟೀಸ್?

  ಮಾಜಿ ಶಾಸಕ ಮಂಜೀಂಧರ್ ಸಿಂಗ್ ಸಿರಾ ದೂರಿನ ಅನ್ವಯ ಎನ್‌ಸಿಬಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಲಾಗಿತ್ತೆ ಎಂಬ ಬಗ್ಗೆ ತನಿಖೆ ನಡೆಸಲಿದ್ದಾರೆ. ಪಾರ್ಟಿಯಲ್ಲಿ ಹಾಜರಿದ್ದವರಿಗೂ ಎನ್‌ಸಿಬಿ ಅಧಿಕಾರಿಗಳು ನೊಟೀಸ್ ನೀಡುವ ಸಾಧ್ಯತೆ ಇದೆ.

  English summary
  NCB officers files FIR against Karan Johar related to a old party video that went viral few days back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X