ಕರಣ್ ಜೋಹರ್ & ಶಾರುಖ್ ಪತ್ನಿ ಮೇಲೆ ಎಫ್ ಐಆರ್

By Mahesh

Karan, Gauri, Shahrukh
ಬಾಲಿವುಡ್ ನ ಖ್ಯಾತ ಚಿತ್ರ ನಿರ್ಮಾತೃ ಕರಣ್ ಜೋಹರ್ ಹಾಗೂ ಕಿಂಗ್ ಖಾನ್ ಶಾರುಖ್ ಪತ್ನಿ ಗೌರಿ ಖಾನ್ ಮೇಲೆ ಮುಂಬೈ ಪೊಲೀಸರು ಕ್ರಿಮಿನಲ್ ಕೇಸ್ ಹಾಕಿದ್ದಾರೆ.

ಕರಣ್ ಜೋಹರ್ ಅವರ ಇತ್ತೀಚಿನ ಚಿತ್ರ 'ಸ್ಟೂಡೆಂಟ್ ಆಫ್ ದಿ ಇಯರ್' ನ ಹಾಡೊಂದರಲ್ಲಿ ಭಾರತೀಯರು ಪೂಜ್ಯ ಭಾವನೆಯಿಂದ ಕಾಣುವ ಪಾತ್ರ ರಾಧೆ ಬಗ್ಗೆ ಆಕ್ಷೇಪಾರ್ಹ ಡೈಲಾಗ್ ಹೊಂದಿದೆ ಎಂಬ ಆರೋಪ ಕೇಳಿ ಬಂದಿದೆ. ಶ್ರೀಕೃಷ್ಣ ಪರಮಾತ್ಮನ ಕಾಲದ ಪ್ರಮುಖ ವ್ಯಕ್ತಿ ರಾಧೆ ಅವರನ್ನು 'ಸೆಕ್ಸಿ' ಎಂದು ಕರೆಯಲಾಗಿದೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುಂಬೈನ ಎನ್ ಜಿಒವೊಂದು ಪೊಲೀಸರಿಗೆ ದೂರು ನೀಡಿತ್ತು.

ಪ್ರಕರಣ ಮಾಜಿಸ್ಟ್ರೇಟ್ ಕೋರ್ಟ್ ಮೆಟ್ಟಿಲೇರಿದ್ದು, ನಂತರ ಪೊಲೀಸರು ಕರಣ್ ಜೋಹರ್ ಹಾಗೂ ಗೌರಿ ಖಾನ್ ಮೇಲೆ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

'ಸ್ಟೂಡೆಂಟ್ ಆಫ್ ದಿ ಇಯರ್'ಚಿತ್ರದ ಹಾಡಿನ ಕೆಲವು ಸಾಲುಗಳ ಬಗ್ಗೆ ಶ್ರೀವಿಷನ್ ಸಾಮಾಜಿಕ ಸಬಲೀಕರಣ ಮತ್ತು ಕಲ್ಯಾಣ ಸಂಸ್ಥೆ ಎಂಬ ಸರ್ಕಾರೇತರ ಸಂಸ್ಥೆ ಅಕ್ಟೋಬರ್ ತಿಂಗಳಿನಲ್ಲೇ ಖಾಸಗಿ ದೂರು ದಾಖಲಿಸಿತ್ತು. ಈ ಚಿತ್ರದ ಹಾಡಿನಲ್ಲಿ 'ರಾಧಾ' ರನ್ನು ಸೆಕ್ಸಿ ಎಂದು ಕರೆಯಲಾಗಿದೆ ಈ ಸಾಲುಗಳನ್ನು ತೆಗೆದು ಹಾಕಬೇಕು ಎಂದು ದೂರಿನಲ್ಲಿ ಕೇಳಿಕೊಳ್ಳಲಾಗಿತ್ತು.

ಆದರೆ, ಎನ್ ಜಿಒ ಸಲ್ಲಿಸಿದ ದೂರಿಗೆ ಚಿತ್ರತಂಡ ಕ್ಯಾರೇ ಎನ್ನಲಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ಕೋರ್ಟ್ ಆದೇಶ ನೀಡಿತು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕಾರಣ ಭಾರತೀಯ ದಂಡ ಸಂಹಿತೆ ಸೆಕ್ಷನ್ 295(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಲಾಗಿದೆ ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಓಪಿ ತ್ರಿಪಾಠಿ ಹೇಳಿದ್ದಾರೆ. (ಪಿಟಿಐ)

More from Filmibeat

English summary
A criminal case has been registered against filmmaker Karan Johar, producer Gauri Khan for allegedly hurting the religious feelings of people by referring to mythological figure Radha as "sexy" in a song in the recently released film 'Student of the Year'. The local police lodged the case in plaint by an NGO.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X