For Quick Alerts
  ALLOW NOTIFICATIONS  
  For Daily Alerts

  ನಟ ಶಹಬಾಜ್ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: FIR ದಾಖಲು

  |

  ಬಾಲಿವುಡ್ ನ ಖ್ಯಾತ ಕಿರುತೆರೆ ನಟ ಶಹಬಾಜ್ ಖಾನ್ ವಿರುದ್ಧ ಕಿರುಕುಳ ಆರೋಪದಡಿ ಮುಂಬೈ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಓಶಿವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 354 ಮತ್ತು 509 ಅಡಿಯಲ್ಲಿ ಪ್ರಕರಣ ದಾಖಸಿಲಿಕೊಳ್ಳಲಾಗಿದೆ.

  53 ವರ್ಷದ ಶಹಬಾಜ್ ಖಾನ್ ವಿರುದ್ಧ ಯುವತಿಯೊಬ್ಬಳು ನೀಡಿದ ಲೈಂಗಿಕ ಕಿರುಕುಳ ದೂರಿನ ಅನ್ವಯ ಕೇಸ್ ದಾಖಲಾಗಿದೆ. ಸದ್ಯ ಪೊಲೀಸರು ತನಿಖೆ ನಡೆಸಿದ್ದು, ಮುಂಬೈ ಪೊಲೀಸರು ಶಹಬಾಜ್ ಇನ್ನು ವಶಕ್ಕೆ ಪಡೆದಿಲ್ಲ.

  ನಟಿ ಸಾರಾಗೆ'ಅತ್ತಿಗೆ' ಎಂದು ಕರೆದು ಮುಜುಗರ ಉಂಟುಮಾಡಿದ ಅಭಿಮಾನಿಗಳುನಟಿ ಸಾರಾಗೆ'ಅತ್ತಿಗೆ' ಎಂದು ಕರೆದು ಮುಜುಗರ ಉಂಟುಮಾಡಿದ ಅಭಿಮಾನಿಗಳು

  ಶಹಬಾಜ್ ಖಾನ್ ನಿಜವಾದ ಹೆಸರು ಹೈದರ್ ಖಾನ್. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಖ್ಯಾತ ಶಾಸ್ತ್ರೀಯ ಗಾಯಕ ಉಸ್ತಾದ್ ಅಮೀರ್ ಖಾನ್ ಅವರ ಪುತ್ರ. ಶಹಬಾಜ್ ಖಾನ್ ಸಾಕಷ್ಟು ಜನಪ್ರಿಯ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಯುಗ್, ಚಂದ್ರಕಾಂತಾ, ದಿ ಗ್ರೇಟ್ ಮರಾಠಾ, ತೆನಾಲಿ ರಾಮ, ರಾಮ್ ಸಿಯಾ ಕೆ ಲವ್ ಕುಶ್ ಮತ್ತು ದಸ್ತಾನ್-ಇ-ಮೊಹಬ್ಬತ್ ಸಲೀಮ್ ಅನಾರ್ಕಲಿ ಸೇರಿದಂತೆ ಮುಂತಾದ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಧಾರಾವಾಹಿಗಳ್ಲಲಿ ಮಾತ್ರವಲ್ಲದೆ ಬಾಲಿವುಡ್ ಸಿನಿಮಾಗಳಲ್ಲಿಯೂ ಮಿಂಚಿದ್ದಾರೆ. ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಹಬಾಜ್ ಖಾನ್ ಈಗ ನಿಜ ಜೀವನದಲ್ಲೂ ವಿಲನ್ ಆಗಿದ್ದಾರೆ.

  English summary
  FIR Against famous TV Actor Shahbaz Khan for Allegedly Molesting teenage Girl. Shahbaz Khan is very famous in Hindi serials.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X