ಮಾಡೆಲ್ ಮೇಲೆ ಅತ್ಯಾಚಾರ ಆರೋಪ: ಖ್ಯಾತ ನಟ ಸೇರಿ 9 ಜನರ ವಿರುದ್ಧ FIR

ಮಾಡೆಲ್ ಮೇಲೆ ಅತ್ಯಾಚಾರ ಮತ್ತು ಕಿರುಕುಳ ಆರೋಪದಡಿ ಬಾಲಿವುಡ್ ಖ್ಯಾತ ನಟ ಮತ್ತು ಮಾಡೆಲ್ ಜಾಕಿ ಭಗ್ನಾನಿ ಸೇರಿದಂತೆ ಒಟ್ಟು 9 ಜನರ ವಿರುದ್ಧ ಮುಂಬೈನ ಬಾಂದ್ರಾ ಪೊಲೀಸ್ ಸ್ಟೇಷನ್ ನಲ್ಲಿ FIR ದಾಖಲಾಗಿದೆ.

ಜಾಕಿ ಭಗ್ನಾನಿ, ಛಾಯಾಗ್ರಾಹಕ ಜೂಲಿಯನ್, ಟ್ಯಾಲೆಂಟ್ ಮ್ಯಾನೆಟ್ ಮೆಂಟ್ ಕ್ವಾನ್ ನ ಸ್ಥಾಪಕ ಅನಿರ್ಬನ್ ಬ್ಲಾಹ್ ಮತ್ತು ಟಿ ಸಿರೀಸ್ ನ ಕೃಷ್ಣ ಕುಮಾರ್ ಸೇರಿದಂತೆ 9 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಘಟಾನುಘಟಿಗಳ ವಿರುದ್ಧ ದೂರು ದಾಖಲಾದ ಬಗ್ಗೆ ಬಾಂದ್ರಾದ ಹಿರಿಯ ಪೊಲೀಸ್ ಅಧಿಕಾರಿ ಖಚಿತ ಪಡಿಸಿದ್ದಾರೆ.

ನಟನೆಗೆ ಅವಕಾಶ ನೀಡುವುದಾಗಿ ಹೇಳಿ 2014ರಿಂದ 2019ರ ವರೆಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಖ್ಯಾತ ಮಾಡೆಲ್ ದೂರು ನೀಡಿದ್ದರು. ದೂರಿನ ಬಳಿಕ ಪ್ರಾಥಮಿಕ ಮಾಹಿತಿ ಕಲೆ ಹಾಕಿರುವ ಪೊಲೀಸರು ಯುವತಿ ಮೇಲೆ ಪದೇ ಪದೇ ಅತ್ಯಾಚಾರ ವೆಸಗಿದ ಆರೋಪದ ಮೇಲೆ ಸೆಕ್ಷನ್ 376 ಮತ್ತು 354ರ ಅಡಿಯಲ್ಲಿ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

FIR filed Against Actor Jackky Bhagnani and 8 others accused of rape by Model

ನಟ ಜಾಕಿ ಭಗ್ನಾನಿ ಹಿಂದಿಯಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ನಟಿ ನಿಧಿ ಸುಬ್ಬಯ್ಯ ಜೊತೆಯೂ ಜಾಕಿ ಭಗ್ನಾನಿ ತೆರೆಹಂಚಿಕೊಂಡಿದ್ದಾರೆ. ನಿಧಿ ನಟನೆಯ ಅಜಬ್ ಗಜಬ್ ಲವ್ ಸಿನಿಮಾದಲ್ಲಿ ಜಾಕಿ ಭಗ್ನಾನಿ ನಟಿಸಿದ್ದಾರೆ. 2012ರಲ್ಲಿ ಈ ಸಿನಿಮಾ ತೆರೆಗೆ ಬಂದಿದೆ. ಬಳಿಕ ಇಬ್ಬರು ಡೇಟಿಂಗ್ ನಲ್ಲಿದ್ದರು ಎನ್ನುವ ಸುದ್ದಿಯೂ ಕೇಳಿಬಂದಿತ್ತು.

Recommended Video

ಗುಟ್ಟಿನ ಮದುವೆಯ ಬಗ್ಗೆ ಮಾತನಾಡಿದ ಪ್ರಣೀತಾ | Filmibeat Kannada

ಜಾಕಿ ಭಗ್ನಾನಿ ಕೊನೆಯದಾಗಿ 2018ರಲ್ಲಿ ರಿಲೀಸ್ ಆದ ಮೋಹಿನಿ ಸಿನಿಮಾ ಮೂಲಕ ತೆರೆಮೇಲೆ ಮಿಂಚಿದ್ದಾರೆ. ಬಳಿಕ ಮತ್ತೆ ಬಣ್ಣ ಹಚ್ಚಿಲ್ಲ. ನಟನೇ ಜೊತೆಗೆ ಸಿನಿಮಾ ನಿರ್ಮಾಣದಲ್ಲೂ ಜಾಕಿ ಭಗ್ನಾನಿ ನಿರತರಾಗಿದ್ದಾರೆ. ಐಶ್ವರ್ಯ ರೈ, ರಣದೀಪ್ ಹೂಡ ನಟನೆಯ ಸರಬ್ಜಿತ್ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

More from Filmibeat

English summary
FIR filed Against Bollywood Actor Jackky Bhagnani and 8 others accused of rape and Molestation by Model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X