For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಸಹೋದರರ ಮೇಲೆ ಎಫ್‌ಐಆರ್ ದಾಖಲು

  |

  ನಟ ಸಲ್ಮಾನ್ ಖಾನ್ ಅವರ ಸಹೋದರರಾದ ಸೋಹೈಲ್ ಖಾನ್, ಅರ್ಬಾಜ್ ಖಾನ್ ವಿರುದ್ಧ ಬೃಹತ್ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ಪ್ರಕರಣ ದಾಖಲಿಸಿದ್ದು, ಎಫ್‌ಐಆರ್ ಸಹ ದಾಖಲಾಗಿದೆ.

  ಸಲ್ಮಾನ್ ಖಾನ್ ಸಹೋದರರ ಮೇಲೆ ದಾಖಲಾಯ್ತು FIR | Filmibeat Kannada

  ಸಲ್ಮಾನ್ ಖಾನ್ ಸಹೋದರರಾದ ಸೋಹೈಲ್ ಖಾನ್, ಅರ್ಬಾಜ್ ಖಾನ್ ಹಾಗೂ ಸೋಹೇಲ್ ಖಾನ್ ಮಗ ನಿರ್ವಾನ್ ಅವರಿಂದ ಕೋವಿಡ್ ನಿಯಮದ ಉಲ್ಲಂಘನೆ ಆಗಿದೆ ಎಂಬ ಕಾರಣಕ್ಕೆ ಬಿಎಂಸಿಯು ಪ್ರಕರಣ ದಾಖಲಿಸಿದೆ.

  ಫೋಟೋ ವೈರಲ್; ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಲ್ಮಾನ್ ಖಾನ್ಫೋಟೋ ವೈರಲ್; ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಲ್ಮಾನ್ ಖಾನ್

  ಸೋಹೈಲ್ ಖಾನ್, ಅರ್ಬಾಜ್ ಖಾನ್ ಮತ್ತು ನಿರ್ವಾನ್ ಖಾನ್ ಅವರುಗಳು ಡಿಸೆಂಬರ್ 25 ರಂದು ದುಬೈನಿಂದ ಮುಂಬೈಗೆ ಮರಳಿದ್ದರು. ಮಹಾರಾಷ್ಟ್ರ ಸರ್ಕಾರದ ಕೋವಿಡ್ ನಿಯಮದಂತೆ ಅವರುಗಳು ಹೋಟೆಲ್‌ನಲ್ಲಿಯೇ ಐಸೋಲೇಶನ್‌ಗೆ ಒಳಗಾಗಬೇಕಿತ್ತು. ಆದರೆ ಅವರುಗಳು ನಿಯಮ ಉಲ್ಲಂಘಿಸಿ ಮನೆಗೆ ತೆರಳಿದ್ದಾರೆ.

  ಕೋವಿಡ್ ನಿಯಮ ಉಲ್ಲಂಘಿಸಿದ ಸಲ್ಮಾನ್ ಸಹೋದರರು

  ಕೋವಿಡ್ ನಿಯಮ ಉಲ್ಲಂಘಿಸಿದ ಸಲ್ಮಾನ್ ಸಹೋದರರು

  ಭಾರತದಲ್ಲಿಯೇ ಮಹಾರಾಷ್ಟ್ರದಲ್ಲಿ ಅದರಲ್ಲಿಯೂ ಮುಂಬೈನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಮುಂಬೈ ನಲ್ಲಿ ಕೋವಿಡ್ ನಿಯಮಗಳನ್ನು ಕಠಿಣವಾಗಿ ಜಾರಿಗೆ ತರಲಾಗಿದೆ. ಇದೀಗ ಸಲ್ಮಾನ್ ಖಾನ್ ಸಹೋದರರು ಕೋವಿಡ್ ನಿಯಮ ಉಲ್ಲಂಘಿಸಿದ ಕಾರಣ ಅವರ ಮೇಲೆ ಕ್ರಮ ಜರುಗಿಸಲು ಮುಂದಾಗಿದೆ ಬಿಎಂಸಿ.

  ಸಲ್ಮಾನ್ ಖಾನ್ ಹುಟ್ಟುಹಬ್ಬ ಆಚರಿಸಲು ಬಂದಿದ್ದ ಸಹೋದರರು

  ಸಲ್ಮಾನ್ ಖಾನ್ ಹುಟ್ಟುಹಬ್ಬ ಆಚರಿಸಲು ಬಂದಿದ್ದ ಸಹೋದರರು

  ಡಿಸೆಂಬರ್ 20 ರಂದು ಸೋಹೈಲ್ ಖಾನ್ ಹುಟ್ಟುಹಬ್ಬವಿತ್ತು. ಅದನ್ನು ಅವರು ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ದುಬೈನಲ್ಲಿ ಆಚರಿಸಿಕೊಂಡರು. ಡಿಸೆಂಬರ್ 25 ರಂದೇ ಮರಳಿದ್ದ ಇವರುಗಳು, ಡಿಸೆಂಬರ್ 27 ರಂದು ಸಲ್ಮಾನ್ ಖಾನ್ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲೆಂದು ಹೋಟೆಲ್ ನಲ್ಲಿ ಇರಬೇಕೆಂಬ ನಿಯಮ ಮುರಿದು ಮನೆಗೆ ಹೋಗಿದ್ದಾರೆ ಎನ್ನಲಾಗಿದೆ.

  ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಮಾಡಿದರು ಮನವಿಅಭಿಮಾನಿಗಳಿಗೆ ಸಲ್ಮಾನ್ ಖಾನ್ ಮಾಡಿದರು ಮನವಿ

  ಮನೆಯ ಮುಂದೆ ಸೂಚನಾ ಫಲಕ ಹಾಕಿದ್ದ ಸಲ್ಮಾನ್ ಖಾನ್

  ಮನೆಯ ಮುಂದೆ ಸೂಚನಾ ಫಲಕ ಹಾಕಿದ್ದ ಸಲ್ಮಾನ್ ಖಾನ್

  ಡಿಸೆಂಬರ್ 27 ರಂದು ಸಲ್ಮಾನ್ ಖಾನ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ತಮ್ಮ ಗ್ಯಾಲೆಕ್ಸಿ ಅಪಾರ್ಟ್‌ಮೆಂಟ್ ಎದುರು ದೊಡ್ಡ ಸೂಚಲಾ ಫಲಕವನ್ನು ತೂಗು ಹಾಕಿದ್ದ ಸಲ್ಮಾನ್ ಖಾನ್, ಹುಟ್ಟುಹಬ್ಬದ ದಿನ ಯಾರೂ ಮನೆಯ ಬಳಿ ಗುಂಪು ಸೇರಬಾರದು ಎಂದು ಮನವಿ ಮಾಡಿದ್ದರು. ಆದರೆ ಈಗ ಅವರ ಸಹೋದರರೇ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ.

  ನಟ,ನಿರ್ಮಾಪಕ ಆಗಿರುವ ಸಹೋದರರು

  ನಟ,ನಿರ್ಮಾಪಕ ಆಗಿರುವ ಸಹೋದರರು

  ಸಲ್ಮಾನ್ ಖಾನ್ ಸಹೋದರರಾದ ಸೋಹೆಲ್ ಖಾನ್, ಅರ್ಬಾಜ್ ಖಾನ್ ಇಬ್ಬರೂ ನಟರು ಮತ್ತು ನಿರ್ಮಾಪಕರಾಗಿದ್ದಾರೆ. ಸಲ್ಮಾನ್ ಖಾನ್ ನಟನೆಯ ಅನೇಕ ಸಿನಿಮಾಗಳನ್ನು ಈ ಇಬ್ಬರೂ ನಿರ್ಮಿಸಿದ್ದಾರೆ. ದಬಾಂಗ್ ನ ಎರಡೂ ಸರಣಿಯನ್ನು ಅರ್ಬಾಜ್ ಖಾನ್ ನಿರ್ಮಿಸಿದ್ದರೆ, 'ಪ್ಯಾರ್ ಕಿಯಾ ತೊ ಡರ್ನಾ ಕ್ಯಾ' ಸಿನಿಮಾದಿಂದ ಹಿಡಿದು ಈಗಿನ ರಾಧೆ ಸಿನಿಮಾವನ್ನು ಸಹ ಸೋಹೈಲ್ ಖಾನ್ ನಿರ್ಮಿಸಿದ್ದಾರೆ.

  English summary
  FIR filed against Salman Khan's brothers Sohail Khan and Arbaaz Khan for violating COVID 19 norms.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X