For Quick Alerts
  ALLOW NOTIFICATIONS  
  For Daily Alerts

  ಮಿಥುನ್ ಚಕ್ರವರ್ತಿ ಪುತ್ರನ ಮೇಲೆ ಅತ್ಯಾಚಾರ ಆರೋಪ, ಪತ್ನಿ ವಿರುದ್ಧವೂ ದೂರು

  |

  ಬಾಲಿವುಡ್‌ನ ಹಿರಿಯ ನಟ ಮಿಥುನ್ ಚಕ್ರವರ್ತಿ ಪತ್ನಿ ಹಾಗೂ ಪುತ್ರನ ವಿರುದ್ಧ ಮುಂಬೈನ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಬೆದರಿಕೆ ಹಾಗೂ ಮೋಸದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

  ಮಹಿಳೆಯೊಬ್ಬರು ಮುಂಬೈನ ಒಶಿವಾರ ಪೊಲೀಸ್ ಠಾಣೆಯಲ್ಲಿ ಮಿಥುನ್ ಚಕ್ರವರ್ತಿ ಪತ್ನಿ ಯೋಗಿತಾ ಬಾಲಿ ಹಾಗೂ ಪುತ್ರ ಮಹಾಕ್ಷಯ್ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಎಫ್‌ಐಆರ್ ಸಹ ದಾಖಲಿಸಿಕೊಂಡಿದ್ದಾರೆ.

  ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್, ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಮಿಥುನ್ ಚಕ್ರವರ್ತಿ ಪುತ್ರ ಹಾಗೂ ಪತ್ನಿ ಯೋಗಿತಾ ತಮಗೆ ಮೋಸ ಮಾಡಿದ್ದಾರೆ ಎಂದು ಸಹ ದೂರು ನೀಡಿದ್ದಾರೆ.

  2015 ರಿಂದಲೂ ದೈಹಿಕ ಸಂಬಂಧ

  2015 ರಿಂದಲೂ ದೈಹಿಕ ಸಂಬಂಧ

  ಮಹಿಳೆ ನೀಡಿರುವ ದೂರಿನಂತೆ 2015 ರಿಂದ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷತ್ರಿಯ್ ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ, ಮಹಿಳೆಯು ಗರ್ಭಿಣಿಯಾದಾಗ ಆಕೆಗೆ ಮಾತ್ರೆಗಳನ್ನು ನೀಡಿ ಗರ್ಭಪಾತ ಆಗುವಂತೆ ಮಾಡಿದ್ದ.

  ಜೀವಕ್ಕೆ ಹಾನಿ ಮಾಡುವುದಾಗಿ ಬೆದರಿಕೆ

  ಜೀವಕ್ಕೆ ಹಾನಿ ಮಾಡುವುದಾಗಿ ಬೆದರಿಕೆ

  ಮಹಾಕ್ಷತ್ರಿಯ್ ತಾಯಿ ಯೋಗಿತಾ, ಮಹಿಳೆಗೆ ಬೆದರಿಕೆ ಸಹ ಹಾಕಿದ್ದರಂತೆ, 'ಒಂದೊಮ್ಮೆ ಮಗನೊಂದಿಗೆ ಸಂಬಂಧ ಮುಂದುವರೆಸಿದರೆ ಜೀವಕ್ಕೆ ಹಾನಿ ಮಾಡುವುದಾಗಿ ಯೋಗಿತಾ ಬೆದರಿಕೆ ಹಾಕಿದ್ದರು ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  ದೆಹಲಿ ಕೋರ್ಟ್ ಮೆಟ್ಟಿಲೇರಿದ್ದ ಸಂತ್ರಸ್ತೆ

  ದೆಹಲಿ ಕೋರ್ಟ್ ಮೆಟ್ಟಿಲೇರಿದ್ದ ಸಂತ್ರಸ್ತೆ

  ಮಹಿಳೆಯು 2018 ರಲ್ಲಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು, ಆದರೆ ಎಫ್‌ಐಆರ್ ದಾಖಲಾಗಿರಲಿಲ್ಲ. ಹಾಗಾಗಿ ಆಕೆ ದೆಹಲಿ ನ್ಯಾಯಾಲಯಕ್ಕೆ ಸಹ ಅರ್ಜಿ ಹಾಕಿದ್ದರು, ನ್ಯಾಯಾಲಯವು ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ ಅಂತೆಯೇ ದೆಹಲಿಯಿಂದ ಮುಂಬೈಗೆ ಸ್ಥಳಾಂತರಗೊಂಡಿರುವ ಸಂತ್ರಸ್ತ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  ನನ್ನ ಮನೆಯಲ್ಲಿ ಚಿರುಗೆ ಒಂದು ದೇಗುಲ ಮಾಡಿ ಅಲ್ಲಿ ಅವನ ಫೋಟೋ ಇಟ್ಟಿದೀನಿ | Pannaga Bharana | Chiranjeevi Sarja
  ಮತ್ತು ಭರುವಂತೆ ಮಾಡಿ ಅತ್ಯಾಚಾರ: ಆರೋಪ

  ಮತ್ತು ಭರುವಂತೆ ಮಾಡಿ ಅತ್ಯಾಚಾರ: ಆರೋಪ

  ಸಂತ್ರಸ್ತೆಯ ವಕೀಲರು ಹೇಳುವಂತೆ, ಮಹಾಕ್ಷಯ್ ಹಾಗೂ ಸಂತ್ರಸ್ತೆಗೆ ಕಳೆದ ನಾಲ್ಕು ವರ್ಷಗಳಿಂದಲೂ ಪರಿಚಯ, ಸಂತ್ರಸ್ತೆಯನ್ನು, ಮಹಾಕ್ಷಯ್ ತನ್ನ ದೈಹಿಕ ವಾಂಚೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ. ಆಕೆಗೆ ಮತ್ತು ಭರುವ ಔಷಧ ನೀಡಿ ಆಕೆಯ ಮೇಲೆ ಅತ್ಯಾಚಾರ ಸಹ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

  English summary
  Mumbai police filled FIR against Mithun Chakraborty's son Mahakshay and wife Yogitha Bali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X