ನವರಾತ್ರಿ ಸಂದರ್ಭದಲ್ಲಿ ಲವ್ ರಾತ್ರಿ, ಸಲ್ಮಾನ್ ಗೆ ಸಂಕಷ್ಟ
ಪಾಟ್ನಾ, ಸೆಪ್ಟೆಂಬರ್ 13 : ಸಲ್ಮಾನ್ ಖಾನ್ ಅವರ ನಿರ್ಮಾಣದ 'ಲವ್ ರಾತ್ರಿ' ಚಿತ್ರಕ್ಕೆ ಕಟಂಕ ಎದುರಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಶೀರ್ಷಿಕೆ ಬಳಸಲಾಗಿದೆ ಎಂದು ದೂರು ಸಲ್ಲಿಸಲಾಗಿದೆ.
ಬಿಹಾರ ಮುಜಾಫರ್ ನಗರ ಕೋರ್ಟ್ ದೂರನ್ನು ಸ್ವೀಕರಿಸಿದ್ದು, ಚಿತ್ರ ನಿರ್ಮಿಸಿರುವ ಸಲ್ಮಾನ್ ಖಾನ್ ಅವರ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ದಾಖಲಿಸುವಂತೆ ಸೂಚಿಸಿದೆ.
ನವರಾತ್ರಿಗೆ ಪ್ರಾಸವಾಗಿರುವಂತೆ ಲವ್ ರಾತ್ರಿಯನ್ನು ಶೀರ್ಷಿಕೆಯಾಗಿ ಬಳಸಲಾಗಿದೆ. ಇದು ದೇವಿ ದುರ್ಗಾಮಾತೆಗೆ ಮಾಡಿರುವ ಅಪಮಾನ ಎಂದು ದೂರಿನಲ್ಲಿ ಹೇಳಲಾಗಿದ್ದು, ಸಲ್ಮಾನ್ ಖಾನ್ ಸೇರಿದಂತೆ 7 ಮಂದಿ ವಿರುದ್ಧ ದೂರು ನೀಡಲಾಗಿದೆ.

ಇದಕ್ಕೂ ಮುನ್ನ ಚಿತ್ರದ ಶೀರ್ಷಿಕೆ ವಿರುದ್ಧ ವಿಶ್ವ ಹಿಂದೂ ಪರಿಷತ್ ನ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಅವರು ಕಿಡಿಕಾರಿದ್ದರು. ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಒಡ್ಡಿದರು. ಹಿಂದೂಗಳ ಪವಿತ್ರ ಹಬ್ಬ ನವರಾತ್ರಿಯ ಸಂದರ್ಭದಲ್ಲಿ 'ಲವ್ ರಾತ್ರಿ' ಎಂಬ ಚಿತ್ರ ಬಂದರೆ ಹಿಂದೂಗಳಿಗೆ ಸಹಿಸಲು ಸಾಧ್ಯವಾಗುವುದಿಲ್ಲ.
ಆಯುಷ್ ಶರ್ಮ ಹಾಗೂ ವಾರಿನಾ ಹುಸೇನ್ ಅವರ ಚೊಚ್ಚಲ ಚಿತ್ರ ಇದಾಗಿದ್ದು, ಅಕ್ಟೋಬರ್ 05ರಂದು ತೆರೆಗೆ ಬರಲು ಸಿದ್ಧವಾಗಿದೆ.
ಇನ್ನುಳಿದಂತೆ ಈ ಚಿತ್ರವನ್ನ ಸಲ್ಮಾನ್ ಖಾನ್ ನಿರ್ಮಾಣ ಮಾಡಿದ್ದು, ಸಲ್ಮಾನ್ ಸಂಬಂಧಿ ಆಯುಷ್ ಶರ್ಮಾ ಹಾಗೂ ಹೊಸ ನಟಿ ವರೀನಾ ಹುಸೇನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಭಿರಾಜ್ ಮಿನವಾಲಾ ಎಂಬ ಯುವ ನಿರ್ದೇಶಕ ಮೊದಲ ಭಾರಿಗೆ ನಿರ್ದೇಶನ ಮಾಡಿದ್ದಾರೆ. ಖ್ಯಾತ ನಟರಾದ ರಾಮ್ ಕಪೂರ್ ಮತ್ತು ರೊನಿತ್ ರಾಯ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











