twitter
    For Quick Alerts
    ALLOW NOTIFICATIONS  
    For Daily Alerts

    ಶಿಲ್ಪಾ ಶೆಟ್ಟಿ, ಸಲ್ಮಾನ್ ಖಾನ್ ವಿರುದ್ಧ ಎಫ್ಐಆರ್

    By Bharath Kumar
    |

    ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ 'ಟೈಗರ್ ಜಿಂದಾ ಹೈ' ಚಿತ್ರ ಶುಕ್ರವಾರವಷ್ಟೇ (ಡಿಸೆಂಬರ್ 22) ಬಿಡುಗಡೆಯಾಗಿದೆ. ಇದೀಗ, ಚಿತ್ರದ ವಿರುದ್ಧ ಮತ್ತು ನಾಯಕ ನಟ ಸಲ್ಮಾನ್ ಖಾನ್ ವಿರುದ್ಧ ಕೆಲವು ಸಮುದಾಯಗಳು ಆಕ್ರೋಶ ವ್ಯಕ್ತಪಡಿಸುತ್ತಿದೆ.

    'ಟೈಗರ್ ಜಿಂದಾ ಹೈ' ಚಿತ್ರದ ಪ್ರಮೋಷನ್ ವೇಳೆ ಸಲ್ಮಾನ್ 'ಭಾಂಗಿ' ಎಂಬ ಪದವನ್ನ ಬಳಿಸಿದ್ದಾರೆ. ಟಿವಿ ವಾಹಿನಿಯಲ್ಲಿ ತಮ್ಮ ನೃತ್ಯದ ಬಗ್ಗೆ ವಿವರಿಸುವಾಗ ಈ ಪದ ಬಳಕೆ ಮಾಡಿದ್ದು, ಇದರಿಂದ ವಾಲ್ಮಿಕಿ ಸಮುದಾಯದವರಿಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲು ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕೇವಲ ಸಲ್ಮಾನ್ ಖಾನ್ ಮಾತ್ರವಲ್ಲ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ 'ಭಾಂಗಿ' ಪದ ಬಳಿಕೆ ಮಾಡಿದ್ದು, ಅವರ ಮೇಲೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    FIR was filed against salman Khan and Shilpa Shetty

    ಈ ಸಂಬಂಧ ಸಲ್ಮಾನ್ ಹಾಗೂ ನಟಿ ಶಿಲ್ಪಾ ಶೆಟ್ಟಿ ವಿರುದ್ಧ ರಾಜಸ್ತಾನದಲ್ಲಿ ಎಫ್ಐಆರ್ ದಾಖಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯಿದೆ 153A ಅಡಿಯಲ್ಲಿ ದೂರು ದಾಖಲಾಗಿದೆ. (SC/ST-153A: ಧರ್ಮ, ಜನಾಂಗ, ಹುಟ್ಟಿದ ಸ್ಥಳ, ನಿವಾಸ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ವಿಭಿನ್ನ ಗುಂಪುಗಳ ನಡುವೆ ವೈರತ್ವವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆಯ ನಿರ್ವಹಣೆಗೆ ಪೂರ್ವಾಗ್ರಹವನ್ನು ಮಾಡುವುದು) ರಾಜಸ್ತಾನದ ನಹರ್ ಗಡ್ ನಲ್ಲೂ ಕೂಡ ಇಬ್ಬರ ಮೇಲೆ ದೂರು ದಾಖಲಾಗಿದೆ.

    FIR was filed against salman Khan and Shilpa Shetty

    ಮೂಲಗಳ ಪ್ರಕಾರ ''ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವೂ ಮಾಹಿತಿ ಮತ್ತು ಪ್ರಸಾರ ಇಲಾಖೆ ಹಾಗೂ ದೆಹಲಿ, ಮುಂಬೈ ಪೊಲೀಸ್ ಆಯುಕ್ತರಿಂದ ವರದಿ ಕೇಳಿದೆ. 7 ದಿನಗಳಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ವರದಿ ನೀಡಬೇಕೆಂದು ಸೂಚಿಸಿದೆಯಂತೆ.

    FIR was filed against salman Khan and Shilpa Shetty

    ಮತ್ತೊಂದೆಡೆ ವಾಲ್ಮಿಕಿ ಸಮುದಾಯದವರು 'ಟೈಗರ್ ಜಿಂದಾ ಹೈ' ಚಿತ್ರದ ಪ್ರದರ್ಶನದ ವೇಳೆ ಚಿತ್ರವನ್ನ ವಿರೋಧಿಸಿ ಚಿತ್ರಮಂದಿರ ಬಳಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಕೂಡಲೇ ಸಲ್ಲು ಹಾಗೂ ಶಿಲ್ಪಾ ಶೆಟ್ಟಿ ಇಬ್ಬರು ಸಮುದಾಯದವರನ್ನ ಕ್ಷಮೆ ಕೇಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

    English summary
    Salman’s new film ‘Tiger Zinda Hai’ landed in trouble over his alleged derogatory remark, made against a particular caste while promoting the movie on a TV show. Valmiki community staged protests across Rajasthan, Gujarat and UP, demanding an apology from the actor. and FIR was filed against Khan and Shilpa Shetty at a police station in Churu.
    Saturday, December 23, 2017, 14:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X