ಮಗಳು 'ದುವಾ'ಜೊತೆ ದೀಪಿಕಾ-ರಣವೀರ್ ಸ್ಟಾರ್ ಜೋಡಿಯ ಮೊದಲ ವಿದೇಶಿ ಪ್ರವಾಸ; ನ್ಯೂಯಾರ್ಕ್ ಬೀದಿಗಳಲ್ಲಿ ಮಸ್ತಿ

ಬಾಲಿವುಡ್‌ನ ಪವರ್ ಕಪಲ್ ಎಂದರೆ ಅದು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ. ಇವರಿಬ್ಬರ ಕೆಮಿಸ್ಟ್ರಿ ತೆರೆಯ ಮೇಲೆ ಎಷ್ಟು ಚೆನ್ನಾಗಿರುತ್ತದೋ, ನಿಜ ಜೀವನದಲ್ಲೂ ಅಷ್ಟೇ ಅದ್ಭುತವಾಗಿರುತ್ತದೆ. ಇವರನ್ನು ನೋಡಲು ಅಭಿಮಾನಿಗಳು ಯಾವಾಗಲೂ ಕಾತರದಿಂದ ಕಾಯುತ್ತಿರುತ್ತಾರೆ.

ಹೊಸ ವರ್ಷದ ಆರಂಭ ಎಂದರೆ ಎಲ್ಲರಿಗೂ ಒಂದು ಹೊಸ ಸಂಭ್ರಮ. ಚಿತ್ರರಂಗದ ತಾರೆಯರು ಕೂಡ ಈ ಸಂಭ್ರಮವನ್ನು ಸಖತ್ ಆಗಿಯೇ ಆಚರಿಸುತ್ತಾರೆ. ಅದರಲ್ಲೂ ದೀಪಿಕಾ ಮತ್ತು ರಣವೀರ್ ಜೋಡಿ ಎಲ್ಲಿಗೆ ಹೋಗಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು.

First foreign trip for baby Dua Deepika and Ranveer pose for selfies with fans in New York

ಸದ್ಯ ಈ ಅದ್ಭುತ ಜೋಡಿಯ ಹೊಸ ವರ್ಷದ ಆಚರಣೆಯನ್ನು ವಿದೇಶದಲ್ಲಿ ಮಾಡುತ್ತಿವೆ. ಈ ಬಾರಿ ಸೆಲೆಬ್ರೆಷನ್ ಈ ಜೋಡಿಗೆ ಸ್ಪೆಷಲ್. ಒಂದು ಮಗಳು 'ದುವಾ' ಮೊದಲ ವಿದೇಶಿ ನ್ಯೂ ಇಯರ್ ಸೆಲೆಬ್ರೆಷನ್. ಇನ್ನೊಂದು ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್' ಮೆಗಾ ಸಕ್ಸಸ್. ಎರಡನ್ನೂ ಸೇರಿ ಸಂಭ್ರಮಿಸಲಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಇವರಿಬ್ಬರ ಫೋಟೋಗಳು ಅಪ್ಲೋಡ್ ಆಗಿತ್ತಿದ್ದಂತೆ ವೈರಲ್ ಆಗುತ್ತಿವೆ.

ಅಮೆರಿಕಾದಲ್ಲಿ ದೀಪಿಕಾ-ರಣವೀರ್ ಸಡಗರ

ಬಾಲಿವುಡ್ ಸ್ಟಾರ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಈ ಬಾರಿ ನ್ಯೂಯಾರ್ಕ್ ಸಿಟಿಯಲ್ಲಿ 2026ರ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಕೆಲಸದ ಒತ್ತಡದ ನಡುವೆಯೂ ಈ ಜೋಡಿ ಪ್ರವಾಸಕ್ಕಾಗಿ ಸಮಯ ಮೀಸಲಿಟ್ಟಿದ್ದಾರೆ. ನ್ಯೂಯಾರ್ಕ್‌ನ ಚಳಿಯ ನಡುವೆ ಈ ಜೋಡಿ ಸಖತ್ ಎಂಜಾಯ್ ಮಾಡುತ್ತಿದೆ.

ವಿಶೇಷವೆಂದರೆ ಇವರು ಕೇವಲ ಪ್ರೈವೇಟ್ ಪಾರ್ಟಿ ಮಾಡಿಲ್ಲ. ಬದಲಿಗೆ ನ್ಯೂಯಾರ್ಕ್‌ನ ಬೀದಿಗಳಲ್ಲಿ ಸಾಮಾನ್ಯರಂತೆ ಓಡಾಡಿದ್ದಾರೆ. ಅಲ್ಲಿನ ರಸ್ತೆಗಳಲ್ಲಿ ಸಾಗುವಾಗ ತಮ್ಮನ್ನು ಗುರುತಿಸಿದ ಅಭಿಮಾನಿಗಳನ್ನು ಕಂಡು ಈ ಜೋಡಿ ಮುಗುಳ್ನಕ್ಕಿದೆ. ತಮ್ಮ ಸ್ಟಾರ್ ಗಿರಿ ಮರೆತು ಎಲ್ಲರನ್ನೂ ಮಾತನಾಡಿಸಿದ್ದಾರೆ.

ಅಭಿಮಾನಿಗಳ ಜೊತೆ ಸೆಲ್ಫಿ ಅಬ್ಬರ

ನ್ಯೂಯಾರ್ಕ್ ರಸ್ತೆಯಲ್ಲಿ ದೀಪಿಕಾ ಮತ್ತು ರಣವೀರ್ ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ಸಾಮಾನ್ಯವಾಗಿ ಸ್ಟಾರ್‌ಗಳು ಇಂತಹ ಸಮಯದಲ್ಲಿ ಸಿಟ್ಟಾಗುತ್ತಾರೆ. ಆದರೆ, ಈ ಜೋಡಿ ಹಾಗೆ ಮಾಡಿಲ್ಲ. ತಾಳ್ಮೆಯಿಂದ ನಿಂತು ತಮ್ಮ ಪ್ರೀತಿಯ ಅಭಿಮಾನಿಗಳ ಜೊತೆ ಸೆಲ್ಫಿ ಕೊಟ್ಟಿದ್ದಾರೆ.

ಈ ಫೋಟೋಗಳು ಈಗ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿವೆ. ದೀಪಿಕಾ ಸಿಂಪಲ್ ಆಗಿ ಕಾಣಿಸಿಕೊಂಡರೆ, ರಣವೀರ್ ತಮ್ಮ ಎಂದಿನ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ಅಭಿಮಾನಿಗಳ ಪಾಲಿಗೆ ಇದು ಹೊಸ ವರ್ಷದ ದೊಡ್ಡ ಉಡುಗೊರೆಯಂತಾಗಿದೆ. ಫೋಟೋಗಳಲ್ಲಿ ಇವರ ನಗು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಮಗಳ ಜನನದ ನಂತರ ಮೊದಲ ಫಾರಿನ್ ಟ್ರಿಪ್

ದೀಪಿಕಾ ಮತ್ತು ರಣವೀರ್ ಇತ್ತೀಚೆಗಷ್ಟೇ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಮಗಳ ಆಗಮನದ ನಂತರ ಇವರ ಜೀವನದಲ್ಲಿ ಸಂತೋಷ ಇಮ್ಮಡಿಯಾಗಿದೆ. ಈ ಹೊಸ ವರ್ಷದ ಪ್ರವಾಸವು ಅವರ ಪಾಲಿಗೆ ಅತ್ಯಂತ ವಿಶೇಷವಾದುದು. ಕುಟುಂಬದ ಜೊತೆ ಕಾಲ ಕಳೆಯಲು ಇವರು ಈ ವಿರಾಮವನ್ನು ತೆಗೆದುಕೊಂಡಿದ್ದಾರೆ.

ಸದ್ಯ ಸಿನಿಮಾ ವಿಚಾರಕ್ಕೆ ಬರುವುದಾದರೆ ದೀಪಿಕಾ ಮತ್ತು ರಣವೀರ್ ಇಬ್ಬರೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಹೊಸ ವರ್ಷದ ಸಂಭ್ರಮಕ್ಕಾಗಿ ಎಲ್ಲದಕ್ಕೂ ಬ್ರೇಕ್ ಹಾಕಿ ನ್ಯೂಯಾರ್ಕ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಒಟ್ಟಿನಲ್ಲಿ ಈ ಜೋಡಿಯ ಹೊಸ ವರ್ಷದ ಆರಂಭ ಸಖತ್ ಕಲರ್‌ಫುಲ್ ಆಗಿದೆ.

More from Filmibeat

English summary
First foreign trip for baby Dua: Deepika and Ranveer pose for selfies with fans in New York:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X