For Quick Alerts
  ALLOW NOTIFICATIONS  
  For Daily Alerts

  ನಟರು ಮಾಸ್ಕ್ ಧರಿಸಲಾಗದು, ಮೊದಲು ಅವರಿಗೆ ಲಸಿಕೆ ನೀಡಿ: ಸೋನಿ

  |

  ಹಲವು ನಟ-ನಟಿಯರು ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಕೆಲವು ಹಿರಿಯ ನಟರು ಕೊರೊನಾ ಸೋಂಕಿನಿಂದ ನಿಧನ ಹೊಂದಿದ್ದಾರೆ ಸಹ. ಈ ನಡುವೆ ನಟಿ ಸೋನಿ ರಾಜ್ದಾನ್ ಅವರು ನಟ-ನಟಿಯರಿಗೆ ಮೊದಲು ಲಸಿಕೆ ನೀಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಟಿಯ ಈ ಬೇಡಿಕೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

  'ಬಹಳಷ್ಟು ಮಂದಿ ನಟ-ನಟಿಯರು ಕೊರೊನಾ ಸೋಂಕಿಗೆ ಗುರಿಯಾಗುತ್ತಿದ್ದಾರೆ. ನಟ-ನಟಿಯರು ಕೆಲಸದ ವೇಳೆ ಮಾಸ್ಕ್ ಧರಿಸಲು ಆಗುವುದಿಲ್ಲ. ಹಾಗಾಗಿ ಮೊದಲು ಅವರಿಗೆ ಲಸಿಕೆ ನೀಡಬೇಕು' ಎಂದರು ಸೋನಿ ಹೇಳಿದ್ದಾರೆ.

  ಸೋನಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಒಬ್ಬರು, 'ನಟನಾವೃತ್ತಿ ಹೆಚ್ಚು ಕೊರೊನಾ ರಿಸ್ಕ್‌ನಲ್ಲಿರುವ ವೃತ್ತಿಯಲ್ಲ' ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೋನಿ, 'ನಟನೆ ಒಂದು ವೃತ್ತಿ. ಬದುಕಲು ಅವರೂ ಸಹ ದುಡಿಯಲೇ ಬೇಕು. ಬೇರೆ ವೃತ್ತಿಯವರು ಕೆಲಸ ಮಾಡಬೇಕಾದರೆ ಮಾಸ್ಕ್ ಧರಿಸಬಹುದು. ಆದರೆ ನಟ-ನಟಿಯರು ಧರಿಸಲು ಸಾಧ್ಯವಿಲ್ಲ' ಎಂದಿದ್ದಾರೆ.

  ಎಲ್ಲವೂ ಆರಂಭವಾಗಿದ್ದು ಪತ್ರಕರ್ತ, ಉದ್ಯಮಿ ಸುಶೀಲ್ ಸೇಟ್ ಅವರ ಟ್ವೀಟ್‌ನಿಂದ. 'ದೇವರಿಗಾಗಿ ಲಸಿಕೆಯನ್ನು ಎಲ್ಲರಿಗೂ ನೀಡಿ. ಯಾವ ವೃತ್ತಿ ಮೇಲು ಯಾವ ವೃತ್ತಿ ಕೀಳು ಎಂದು ಸರ್ಕಾರ ಹೇಗೆ ನಿರ್ಣಯಿಸಲು ಸಾಧ್ಯ. ಇದು ಭಾರತೀಯರ ಜೀವದ ಪ್ರಶ್ನೆ' ಎಂದು ಸುಶೀಲ್ ಟ್ವೀಟ್ ಮಾಡಿದ್ದರು.

  ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ರಣ್ಬೀರ್ ಕಪೂರ್, ಆಲಿಯಾ ಭಟ್, ಮನೋಜ್ ಬಾಜಪೇಯಿ, ಸಿದ್ಧಾರ್ಥ್ ಚತುರ್ವೇದಿ ಇನ್ನೂ ಹಲವಾರು ಬಾಲಿವುಡ್ ಮಂದಿಗೆ ಕೊರೊನಾ ಸೋಂಕು ತಗುಲಿತ್ತು.

  Dhruva Sarja ಮುಂದಿನ ಸಿನಿಮಾ ತೆಲುಗಿನ ಸ್ಟಾರ್ ಡೈರೆಕ್ಟರ್ ಜೊತೆ | Filmibeat Kannada
  English summary
  Actress Soni Razdan said first gave vaccine to actors, because they can not wear mask while they working.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X