ಮನೆ ತುಂಬಾ ಮಕ್ಕಳಿರಬೇಕು ; ಮದುವೆಯ ಎರಡು ವರ್ಷದ ನಂತರ ''ಗುಡ್ ನ್ಯೂಸ್'' ನೀಡಿದ ನಟಿ
ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಹೀಗೆ ಸಿಕ್ಕ ಸಿಕ್ಕಲ್ಲಿ ಪ್ರಶ್ನೆಗಳನ್ನು ಕೇಳಿ ಇರಿಟೇಟ್ ಮಾಡುವವರಿಗೆ ಮದುವೆಯಾಗಿ ಎರಡು ವರ್ಷದ ನಂತರ ಬಾಲಿವುಡ್‌ನ ಬೆಡಗಿ ಪರಿಣಿತಿ ಚೋಪ್ರಾ ಉತ್ತರ ನೀಡಿದ್ದಾರೆ. ಗರ್ಭಿಣಿಯಾಗಿರುವ ಗುಡ್ ನ್ಯೂಸ್‌ನ ಕೊಟ್ಟಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ನಲ್ಲಿ 1 + 1 = 3 ಎಂದು ಬರೆಯಲಾದ ಕೇಕ್‌ನ ಫೋಟೊ ಹಂಚಿಕೊಂಡಿರುವ ಪರಿಣಿತಿ ಚೋಪ್ರಾ ನಮ್ಮ ಚಿಕ್ಕ ಪ್ರಪಂಚ ಬರುತ್ತಿದೆ ಎಂದು ಬರೆದುಕೊಂಡಿದ್ದಾರೆ. ತಮ್ಮ ಪತಿಯ ಜೊತೆ ಕೈ ಕೈ ಹಿಡಿದು ರಸ್ತೆಯಲ್ಲಿ ನಡೆದಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ಧಾರೆ.

ಆದರೆ.. ಪರಿಣಿತಿ ತಮ್ಮ ಬೇಬಿ ಬಂಪ್‌ನ್ನು ತೋರಿಸಿಲ್ಲ. ಬೇಬಿ ಬಂಪ್ ಫೋಟೊಶೂಟ್ ಮಾಡಿಕೊಂಡು ಆ ಫೋಟೊಗಳನ್ನು ಕೂಡ ಹಂಚಿಕೊಂಡಿಲ್ಲ. ಇದರಿಂದ ಇವರ ಕೆಲ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಇನ್ನು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಪರಿಣಿತಿ ಚೋಪ್ರಾಗೆ ಸದ್ಯ ಎಷ್ಟು ತಿಂಗಳು ? ಮಗುವನ್ನು ಯಾವಾಗ ನಿರೀಕ್ಷಿಸಬಹುದು ಎನ್ನುವುದಕ್ಕೆ ಉತ್ತರ ಇಲ್ಲದಿದ್ದರೂ ಸದ್ಯ ಪರಿಣಿತಿ ಚೋಪ್ರಾ ಅವರಿಗೆ ಅನೇಕರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಕತ್ರಿನಾ ಕೈಫ್.. ಸೋನಂ ಕಪೂರ್.. ಭೂಮಿ ಪೆಡ್ನೇಕರ್.. ರಾಕುಲ್ ಪ್ರೀತ್ ಸಿಂಗ್.. ಹಲವರು ಅಭಿನಂದನೆ ಸಲ್ಲಿಸಿದ್ದಾರೆ. ಇನ್ನೂ, ಈ ಪರಿಣಿತಿ ಚೋಪ್ರಾ ಬೇರೆ ಯಾರು ಅಲ್ಲ ಬದಲಿಗೆ ಪ್ರಿಯಾಂಕ ಚೋಪ್ರಾ ಅವರ ಸಹೋದರಿ. ಹೀಗಾಗಿ.. ಪ್ರಿಯಾಂಕ ಕೂಡ ಸಂಭ್ರಮಿಸಿದ್ದಾರೆ.
ಅಂದ್ಹಾಗೇ ಮಕ್ಕಳ ಕುರಿತು ಈ ಹಿಂದೆ ''ಫಿಲ್ಮ್‌ಫೇರ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪರಿಣಿತಿ ನನಗೆ ಮನೆ ತುಂಬ ಮಕ್ಕಳಿರಬೇಕು ಎನ್ನುವ ಆಸೆ ಇದೆ ಎಂದು ಹೇಳಿದ್ದರು. ನನಗೆ ಮಕ್ಕಳು ಅಂದರೆ ಇಷ್ಟ, ಆದರೆ.. ನಾನು ಪ್ರತಿ ಬಾರಿ ಗರ್ಭ ಧರಿಸಲು ಸಾಧ್ಯವಾಗದಿರಬಹುದು ಹೀಗಾಗಿ ನಾನು ಅನೇಕ ಮಕ್ಕಳನ್ನು ದತ್ತು ಪಡೆಯಲು ಬಯಸುತ್ತೇನೆ ಎಂದು ಪರಿಣಿತಿ ಹೇಳಿದ್ದರು.ಸದ್ಯ ಪರಿಣಿತಿ ಸಿಹಿ ಸುದ್ದಿ ನೀಡಿದ ಬೆನ್ನಲ್ಲೇ ಪರಿಣಿತಿಯ ಈ ಹಳೆಯ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ವೈರಲ್ ಆಗಿದೆ.
ಇನ್ನು ತೀರಾ ಇತ್ತೀಚೆಗೆ '' ದಿ ಕಪಿಲ್ ಶರ್ಮಾ''ಕಾರ್ಯಕ್ರಮದಲ್ಲಿ ಕೂಡ ತನ್ನ ಪತಿ ರಾಘವ್ ಚಡ್ಡಾ ಜೊತೆ ಬಂದಿದ್ದ ಸಮಯದಲ್ಲಿ ಕೂಡ, ಕಪಿಲ್ ಶರ್ಮಾ ಮಗು ಕುರಿತು ಪ್ರಶ್ನೆ ಮಾಡಿದಾಗಲೂ ಕೂಡ ಇಬ್ಬರು ಶೀಘ್ರದಲ್ಲಿಯೇ ಒಳ್ಳೆಯ ಸುದ್ದಿ ಕೊಡುವುದಾಗಿ ಭರವಸೆಯನ್ನು ನೀಡಿದ್ದರು. ಅದರಂತೆ ಈಗ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಇನ್ನುಳಿದಂತೆ ಸೆಪ್ಟೆಂಬರ್ 2023ರಲ್ಲಿ ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್ ನಲ್ಲಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಸಪ್ತಪದಿಯನ್ನು ತುಳಿದಿದ್ದರು. ವೈಭವೋಪೇತವಾಗಿ ನಡೆದ ಈ ಮದುವೆ ಸಮಾರಂಭದಲ್ಲಿ ಆಗಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಭಾಗವಹಿಸಿದ್ದರು. ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಕೂಡ ಮದುವೆಗೆ ಸಾಕ್ಷಿಯಾದರು. ಬಾಲಿವುಡ್‌ನವರ ಸ್ಟಾರ್ ಹಾಜರಾತಿ ಕೂಡ ಇದ್ದೇ ಇತ್ತು.
ಇನ್ನು ಚಿತ್ರಗಳ ವಿಚಾರಕ್ಕೆ ಬಂದರೆ ಪರಿಣಿತಿ ಕೊನೆಯದಾಗಿ ಇಮ್ತಿಯಾಜ್ ಅಲಿಯ ''ಅಮರ್ ಸಿಂಗ್ ಚಮ್ಕೀಲಾ'' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಸದ್ಯ ತಾಯಿಯಾಗುತ್ತಿರುವ ಸಂಭ್ರಮದಲ್ಲಿರುವ ಪರಿಣಿತಿ ಮುಂಬರುವ ದಿನಗಳಲ್ಲಿ ಚಿತ್ರರಂಗಕ್ಕೆ ಮರಳುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











