twitter
    For Quick Alerts
    ALLOW NOTIFICATIONS  
    For Daily Alerts

    ಪ್ರಕಾಶ್ ಝಾ ಬರೆದ ರಾಜನೀತಿ 2 ಪೋಸ್ಟರ್

    By ಜೇಮ್ಸ್ ಮಾರ್ಟಿನ್
    |

    ಖ್ಯಾತ ನಿರ್ದೇಶಕ ಪ್ರಕಾಶ್ ಝಾ ಅವರ ಅಧುನಿಕ ಮಹಾಭಾರತ ಕಥೆ ರಾಜನೀತಿ ಮತ್ತೊಮ್ಮೆ ತೆರೆಗೆ ಬರಲಿದೆ. ರಾಜನೀತಿ ಭಾಗ 2 ಚಿತ್ರದ ಮೊದಲ ಲುಕ್ ಬಿಡುಗಡೆಯಾಗಿದೆ. ಮೊದಲ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಕತ್ರೀನಾ ಕೈಫ್ ನಿರ್ವಹಿಸಿದ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಹೋಲುವ ಪಾತ್ರ ಎಂದು ಚಿತ್ರದ ವಿರುದ್ಧ ಮೊಕದ್ದಮೆ ಕೂಡ ಹೂಡಲಾಗಿತ್ತು ಈ ಚಿತ್ರದಲ್ಲಿ ಯಾವ ರೀತಿ ಪಾತ್ರ ಏನು ಕಿರಿಕ್ ಮಾಡುವುದೋ ಕಾದು ನೋಡಬೇಕಿದೆ.

    ಕತ್ರೀನಾ ದ್ರೌಪದಿ ಪಾತ್ರದಲ್ಲಿ, ರಣಬೀರ್ ಕಪೂರ್ ಅರ್ಜುನನಾಗಿ, ಅರ್ಜುನ್ ರಾಂಪಾಲ್ ಭೀಮನಾಗಿ, ಅಜಯ್ ದೇವಗನ್ ಕರ್ಣನಾಗಿ, ನಾನಾ ಪಾಟೇಕರ್ ಕೃಷ್ಣನಾಗಿ ಅಧುನಿಕ ರಾಜಕೀಯ ಮಹಾಭಾರತದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು, ರಾಜಕೀಯ ಮುಖಂಡರ ಕುತೂಹಲವನ್ನು ಚಿತ್ರ ಕೆರಳಿಸಿತ್ತು. [ಸೋನಿಯಾಜಿ ಹೋಲುವ ಪಾತ್ರ ಇದ್ರೆ ತಪ್ಪಾ?]

    First Look Poster of Prakash Jha's Raajneeti 2

    ರಾಜನೀತಿ ಚಿತ್ರದ ಭಾಗ 2ರ ಟ್ಯಾಗ್ ಲೈನ್ Politics Unlimited'ಎಂದು ನೀಡಲಾಗಿದೆ. ಇಂದಿನ ಭಾರತದ ರಾಜಕೀಯ ಸ್ಥಿತ್ಯಂತರಗಳ ಮೇಲೆ ಬೆಳಕು ಚೆಲ್ಲುವ ಸಾಧ್ಯತೆಗಳಿವೆ. ರಾಜನೀತಿ ಚಿತ್ರದ ತಾರಾಗಣದ ಬಗ್ಗೆ ಸುಳಿವು ಸಿಕ್ಕಿಲ್ಲ ವಾದರೂ ರಣಬೀರ್ ಕಪೂರ್ ಗೆ ಸ್ಥಾನ ಇದ್ದೇ ಇರುತ್ತದೆ. ಮಿಕ್ಕ ಪಾತ್ರಗಳಲ್ಲಿ ಹಲವು ಮೊದಲ ಭಾಗದಲ್ಲೇ ಸತ್ತಿರುವುದರಿಂದ ಬೇರೆ ನಟರನ್ನು ಹಾಕಿಕೊಳ್ಳುವ ಸಾಧ್ಯತೆಯಿದೆ. ಪೋಸ್ಟರ್ ನಲ್ಲಿ ಸಂಸತ್ತಿನ ಮುಂದೆ ಅಸಂಖ್ಯ ಜನ ನಿಂತು ಕೂಗುವ ದೃಶ್ಯ ಕಂಡು ಬರುತ್ತದೆ.

    ಒಟ್ಟಾರೆ, ರಾಜಕೀಯ, ಪೊಲೀಸ್ ಇಲಾಖೆಯ ಭ್ರಷ್ಟಾಚಾರಗಳನ್ನು ತೆರೆಗೆ ಬರುವ ಜಾಣ್ಮೆ ಹೊಂದಿರುವ ಪ್ರಕಾಶ್ ಅವರ ಚಿತ್ರಗಳು ನಿಜ ಜೀವನದ ಪಾತ್ರಗಳು ನೈಜ ಘಟನೆಗಳನ್ನು ಆಧರಿಸೇ ಚಿತ್ರೀಕರಿಸಲಾಗಿರುತ್ತದೆ ಎಂಬುದಂತೂ ಸುಳ್ಳಲ್ಲ. ಜೊತೆಗೆ ಪ್ರತಿ ಚಿತ್ರವೂ ವಿವಾದಗಳಿಂದ ಹೊರತಾಗಿಲ್ಲ.ರಾಜನೀತಿ ಚಿತ್ರ ಯಾವ ರೀತಿ ಸಂಚಲನ ಮೂಡಿಸುತ್ತದೆಯೋ ಕಾದು ನೋಡೋಣ...

    English summary
    Prakash Jha offered a fine political thriller in 2010 in the name of Raajneeti starring Ranbir Kapoor, Katrina Kaif, Arjun Rampal and Ajay Devgn. Now, the director is ready to come up with a sequel of the same as the first look poster of Raajneeti 2 has come out.
    Friday, October 31, 2014, 18:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X